ಸುದ್ದಿಬಿಂದು ಬ್ಯೂರೋ ವರದಿ
ಅಂಕೋಲಾ
: ಶಿರೂರು ಗುಡ್ಡಕುಸಿತದಿಂದಾಗಿ ಗಂಗಾವಳಿ ನದಿಯಲ್ಲಿ ಗ್ಯಾಸ್ ಟ್ಯಾಂಕರ್ ಹಾಗೂ ಕೇರಳ‌ ಮೂಲದ ಭಾರತ್ ಬೆಂಜ್ ಲಾರಿ ನಾಪತ್ತೆಯಾಗಿದ್ದು, ಇದರ ಜೊತೆ ಜಗನ್ನಾಥ ನಾಯ್ಕ,ಲೋಕೇಶ ನಾಯ್ಕ ಹಾಗೂ ಲಾರಿ ಚಾಲಕ ಅರ್ಜುನ್ ಸಹ ಕಣ್ಮರೆಯಾಗಿದ್ದು, ಇವೇಲ್ಲದಕ್ಕೂ ಕಳೆದ ಎರಡು ತಿಂಗಳಿಂದಲ್ಲೂ ನಿರಂತ ಶೋಧ ನಡೆಯುತ್ತಿದ್ದು, ಈ ನಡುವೆ ಮೂರನೇ ಹಂತದ ಆರನೇ ದಿನದ ಕಾರ್ಯಚರಣೆಯಾದ ಇಂದು ಗಂಗಾವಳಿ ನದಿಯಲ್ಲಿ ದೊಡ್ಡ ಪ್ರಮಾಣದ ವಸ್ತು ಒಂದು ಪತ್ತೆಯಾಗಿದೆ. ನದಿಯಲ್ಲಿ ಸಿಕ್ಕಿರುವ ದೊಡ್ಡ ವಸ್ತುವಿಗೆ ಈಗಗಾಲೇ ಕ್ರೇನ್‌ನ ಹಗ್ಗ ಕಟ್ಟಿ ಬರಲಾಗಿದೆ‌. ಆದರೆ ಸಿಕ್ಕಿರುವುದು ಭಾರತ್ ಬೆಂಜ್ ಲಾರಿಯೇ ಇರಬಹುದಾ.? ಅಥವಾ ಗ್ಯಾಸ್ ಟ್ಯಾಂಕರ್‌‌‌ನ ಇನ್ನಾವುದೋ ಬಿಡಿಭಾಗಗಳಾ ಎನ್ನುವುದು ಮೇಲೆ ಎತ್ತಿದ ನಂತರಲ್ಲೇ ತಿಳಿದು ಬರಬೇಕಿದೆ‌.

ಗಮನಿಸಿ