ಸುದ್ದಿಬಿಂದು ಬ್ಯೂರೋ
ಶಿರಸಿ: ಸಮಾಜ ಸೇವಕ ಅನಂತಮೂರ್ತಿ ಹೆಗಡೆಯವರು ಜಿಲ್ಲೆಯಲ್ಲಿ ಎರಡು ಮೆಡಿಕಲ್ ಕಾಲೇಜು ಹಾಗೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಅಗ್ರಹಿಸಿ ಹಮ್ಮಿಕೊಂಡ ಪಾದಯಾತ್ರೆಯು ಐದು ದಿನಗಳನ್ನು ಪೂರೈಸಿದ್ದು ಇಂದು ಕುಮಟಾ ತಾಲೂಕಿನ ಬರ್ಗಿಯಿಂದ ಹೊರಟು ಅಂಕೋಲಾ ನಗರಕ್ಕೆ ತಲುಪಿದೆ. ಈ ಬಗ್ಗೆ ಮಾತನಾಡಿದ ಪಾದಯಾತ್ರೆಯ ರೂವಾರಿಯಾದ ಅನಂತಮೂರ್ತಿ ಹೆಗಡೆ, ನವೆಂಬರ್ 2 ರಂದು ಶಿರಸಿಯ ಶ್ರೀಮಾರಿಕಾಂಬಾ ದೇವಾಲಯದಿಂದ ಆರಂಭಗೊಂಡ ನಮ್ಮ ಪಾದಯಾತ್ರೆ ಕಳೆದ ಐದು ದಿನಗಳಿಂದ ಸಾಗುತ್ತಿದ್ದು ಮಾರ್ಗಮಧ್ಯ ಜನರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ ಎಂದರು.

ನಿನ್ನೆಯ ಬರ್ಗಿ ಊರಿಗೆ ತಲುಪಿದ ಸಂದರ್ಭದಲ್ಲಿ ಊರಿನ ಗ್ರಾಮಸ್ಥರು, ಆಟೋ ಚಾಲಕರು ಸೇರಿದಂತೆ ನೂರಾರು ಮಂದಿ ಪ್ರೀತಿಯಿಂದ ಪೂರ್ವಕವಾಗಿ ಸ್ವಾಗತಿಸಿಕೊಂಡರು. ರಾತ್ರಿ ಬರ್ಗಿಯ ದಿನಕರ ನಾಯ್ಕ ಅವರ ಮನೆಯಲ್ಲಿ ವಾಸ್ತವ್ಯ ಹೂಡಿದ ಅನಂತಮೂರ್ತಿ ಹಾಗೂ ಅವರ ಬೆಂಬಲಿಗರು ಇಂದು ಬರ್ಗಿಯ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಕೂಡ ಸಲ್ಲಿಸಿದ್ದು, ಅನಂತಮೂರ್ತಿ ಅವರ ಪಾದಯಾತ್ರೆ ಯಶಸ್ವಿಯಾಗುವ ಮೂಲಕ ಜಿಲ್ಲೆಯ ಅವಶ್ಯಕವಾಗಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು ಮಂಜುರಾಗಲಿ ಎಂದು ದೇವಸ್ಥಾನದ ಅರ್ಚಕರಾಗಿರುವ ಭಾಸ್ಕರ್ ದೇಸಾಯಿ ಅವರು ದೇವರಲ್ಲಿ ಪ್ರಾರ್ಥಿಸಿಕೊಂಡರು.

ಇಂದು ಕುಮಟಾದ ಬರ್ಗಿಯಿಂದ ಹೊರಟ ಪಾದಯಾತ್ರೆ ಹಿರೇಗುತ್ತಿ, ಮಾದನಗೇರಿ, ಶಿರೂರು ಮಾರ್ಗವಾಗಿ ಚಲಿಸಿ ಅಂಕೋಲಾ ನಗರವನ್ನು ತಲುಪಿದ್ದೇವೆ. ಮಾರ್ಗಮಧ್ಯ ಹಿರೇಗುತ್ತಿಯಲ್ಲಿ ಸ್ಥಳೀಯರಾದ ನೀಲಪ್ಪ ಗೌಡ, ಸುಧಾಕರ್ ಭಂಡಾರಿ, ಕಮಲಾಕರ್ ಹರಿಕಾಂತ, ಸುಧಾಕರ ಹಿರೇಗುತ್ತಿ, ರಮಾಕಾಂತ ಬಾಲಪುಡ್ತಿ ಹಾಗೂ ಊರನಾಗರಿಕರು ಪಾದಯಾತ್ರೆಗೆ ಭವ್ಯ ಸ್ವಾಗತ ನೀಡಿ ತಮ್ಮ ಬೆಂಬಲ ವ್ಯಕ್ತಪಡಿಸಿ ಪಾದಯಾತ್ರೆಯಲ್ಲಿ ಹೆಜ್ಜೆಹಾಕಿದರು.
ನಂತರ ಪಾದಯಾತ್ರೆಯೂ ಹಿರೇಗುತ್ತಿ ಚೆಕ್ ಪೋಸ್ಟ್ ತಲುಪುತ್ತಿದ್ದಂತೆ ಸ್ಥಳೀಯ ಮುಖಂಡರಾದ ರಾಮು ಕೆಂಚನ್, ದೇವಿದಾಸ ನಾಯ್ಕ, ಗ್ರಾಪಂ ಸದಸ್ಯ ಆನಂದ್ ನಾಯಕ, ಹರೀಶ ನಾಯ್ಕ, ಜಗದೀಶ ನಾಯ್ಕ ಸೇರಿದಂತೆ ಇನ್ನಿತರರು ನಮ್ಮನ್ನು ಸ್ವಾಗತಿಸಿ ತಾವು ಈ ಹೋರಾಟವನ್ನು ಬೆಂವಲಿಸುವುದಾಗಿ ತಮ್ಮ ಬೆಂಬಲ ಯಾವಾಗಲೂ ಇದೆ ಎಂದು ಪಾದಯಾತ್ರೆಯಲ್ಲಿ ತಮ್ಮ ಹೆಜ್ಜೆಹಾಕಿದರು.
ಹಾಗೆ ಸಾಗಿದ ಪಾದಯಾತ್ರೆಯೂ ಮಧ್ಯಾಹ್ನ ಸುಮಾರಿಗೆ ಅಂಕೋಲಾ ತಾಲೂಕಿನ ಶಿರೂರು ತಲುಪಿದ್ದು ಅಲ್ಲಿ ಊರ ಗ್ರಾಮಸ್ಥರು ಭವ್ಯ ಸ್ವಾಗತ ನೀಡಿ ಪಾದಯಾತ್ರೆಯನ್ನು ಬೆಂಬಲಿದರು.

ಹಾಗೆಯೇ ಶಿರಸಿ ತಾಲೂಕಿನ ಊಲ್ಲಾಳಕೋಪ್ಪದಿಂದ ಬಂದ ಅನಂತ ಭಟ್, ಸುದರ್ಶನ ಭಟ್, ಶಶಿಕಾಂತ್ ಭಟ್, ಎಸ್.‌ಜಿ.ಭಟ್, ನರಸಿಂಹ ಭಟ್ , ಗಣಪತಿ ಭಟ್ ಹೀಗೆ ಇನ್ನೂ ಹಲವರು ನಮ್ಮೊಂದಿಗೆ ಪಾದಯಾತ್ರೆಯಲ್ಲಿ ಹೆಜ್ಜೆಹಾಕಿ ತಮ್ಮ ಬೆಂಬಲವನ್ನು ನೀಡಿದ್ದು, ಇ‌ದು ಅಂಕೋಲಾ ನಗರವನ್ನು ನಮ್ಮ ಪಾದಯಾತ್ರೆಯೂ ತಲುಪಿದ್ದು, ಅಂಕೋಲಾ ನಗರದಲ್ಲಿ ವಾಸ್ತವ್ಯವಾಗಲಿದ್ದೇವೆ, ನಾಳೆ ಅಂಕೋಲಾದಿಂದ ಅಮದಳ್ಳಿಯವರೆಗೆ ಪಾದಯಾತ್ರೆಯೂ ಮುಂದೆ ಸಾಗಲಿದೆ ಎಂದು ಅನಂತಮೂರ್ತಿ ಹೆಗಡೆ ಎಂದು ಹೇಳಿದರು.