ಸುದ್ದಿಬಿಂದು ಬ್ಯೂರೋ
ಕಾರವಾರ :ಚುನಾವಣೆ ಬರ್ತಿದೆ ಬಿಜೆಪಿಯವರು ಯಾರನ್ನಾದ್ರೂ ಕೊಲೆ ಮಾಡಿಸದಿದ್ರೆ ಸಾಕು ಎಂದು ಸಚಿವ ಮಾಂಕಾಳು ವೈದ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ‌ ಜಿಲ್ಲಾ ವಕ್ತಾರ ನಾಗರಾಜ ನಾಯ್ಕ್ ಆಕ್ರೋಶ ಹೊರಹಾಕಿದ್ದು, ಕೊಲೆಗೂ ಕಾಂಗ್ರೆಸ್‌ಗೂ ಅವಿನಾಭಾವ ಸಂಬಂಧ ಇದೆ. ಸಾವಿನ ರಾಜಕಾರಣಕ್ಕೂ ಕಾಂಗ್ರೆಸ್‌ಗೂ ಅನ್ಯೋನ್ಯವಾದ ಸಂಬಂಧ ಇದೆ ಎಂದಿದ್ದಾರೆ.

ಉತ್ತರಕನ್ನಡ ಜಿಲ್ಲೆಯ ಕಾರವಾರದ ಜಿಲ್ಲಾ ಪತ್ರಿಕಾಭವನಲ್ಲಿ ಕರೆದ ಸುದ್ದಿಗೋಷ್ಠಿಯನ್ನ ಉದ್ದೇಶಿಸಿ ಮಾತನಾಡಿದ ಅವರು ಸುಭಾಷ್‌ ಚಂದ್ರಬೋಸ್‌ ಯಾಕೆ ಕಣ್ಮರೆಯಾದರು ಎಂದು ಕಾಂಗ್ರೇಸಿಗರೆ ಹೇಳಲಿ ನೋಡೋಣ, ಶಾಸ್ತ್ರೀಯವರು ಭಾರತದಿಂದ ಹೋಗುವಾಗ ಆರೋಗ್ಯವಾಗಿದ್ದರು ಆದರೆ ಅವರು ತಾಷ್ಕೆಂಟ್‌ಗೆ ಹೋದಾಗ ಏಕಾಏಕಿಯಾಗಿ ಸಾವನ್ನಪ್ಪಿದ್ದಾರೆ ಅದಕ್ಕೆ ಉತ್ತರಕೊಡಬೇಕಾದವರು ಕಾಂಗ್ರೇಸ್‌ ನವರ, ಬಿಜೆಪಿಯವರ.ಎಂದು ನಾಗರಾಜ ನಾಯಕ ಪ್ರಶ್ನೆ ಮಾಡಿದ್ದಾರೆ.

ರಾಜಕಾರಣ ಎಂದರೆ ಮನಸ್ಸಿಗೆ ಬಂದಂತೆ ಹೇಳಿಕೆ ನೀಡುವುದಲ್ಲ. ರಾಜಕಾರಣಿಯಾದವನಿಗೆ, ಜನಪ್ರತಿನಿಧಿಯಾಯವನಿಗೆ ಮಾತನಾಡುವಾಗುವ ಸಂದರ್ಭದಲ್ಲಿ ಏನ ಮಾನಾಡಬೇಕು ಅನ್ನುವುದಕ್ಕಿಂತ, ಏನ ಮಾತನಾಡಬಾರದು ಅನ್ನುವುದು ಬಹಳ ಮುಖ್ಯ, ತಾನು ಮಾತನಾಡುವುದರಲ್ಲಿ ಸತ್ಯ ಇದೆಯೋ, ಮಾತನಾಡಿದರೆ ಆಗುವ ಪರಿಣಾಮಗಳೆನು ಎನ್ನುವ ಬಗ್ಗೆ ಗಮನದಲ್ಲಿ ಇಟ್ಟುಕೊಂಡು ಮಾತನಾಡಬೇಕು.

ಏನಾದ್ರೂ ಮಾತನಾಡುತ್ತಾ ಹೋದ್ರೆ ಸಮಾಜದಲ್ಲಿ ಅಲ್ಲೋಲ್ಲಕಲ್ಲೋಲ ಆಗುತ್ತದೆ.ವಿವಾಧವನ್ನ ಹುಟ್ಟು ಹಾಕಿದಂತಾಗುತ್ತದೆ. ಸಾವಿನ ಬಗ್ಗೆ ಮಾತನಾಡುವ ಕಾಂಗ್ರೆಸ್‌ ಗೂ ಕೊಲೆಗೂ ಬಹಳ ಅವಿನಾಬಂಧವಾಗಿರುವ ಸಂಬಂಧವಿದೆ. ಚುನಾವಣೆ ಸಂದರ್ಭದಲ್ಲಿ ಸಾವಿನ ಬಗ್ಗೆ ಸಚಿವ ಮಂಕಾಳು ವೈದ್ಯ ಅವರು ಮಾತನಾಡುತ್ತಿದ್ದಾರೆ. ಯಾರದಾದ್ದರೂ ಕೊಲೆ ಆಗಲಿದೆ ಎನ್ನುವುದು ಇವರಿಗೆ ತಿಳಿದಿರಬೇಕು.

ಅಥವಾ ಈಗ ಕೊಲೆಯಾಗಿದ್ದರೆ.ಯಾರೋ ಕೊಲೆ ಮಾಡಿದ್ದನ್ನ ಯಾರದೋ ಮೇಲೆ ಹಾಕಲು ತಯಾರಿ ಮಾಡಿದ್ದರು ಸಾಕು.ಜೀಹಾದಿಗಳು ಕಾಂಗ್ರೆಸ್ ಸಹೋದರರು ಇದ್ದಂತೆ.ಸಹೋದರರ‌ ರಕ್ಷಣೆ ಮಾಡುವ ಇರಾದೆ ಕೂಡ ಇರಬಹುದು.ಎನ್ನುವ ಮೂಲಕ ಕಾಂಗ್ರೇಸಿಗರನ್ನ ಕುಟುಕಿದ್ದಾರೆ.

ಮಂಕಾಳು ವೈದ್ಯರು ಒಬ್ಬ ಸಾಮಾನ್ಯ ವ್ಯಕ್ತಿಯಲ್ಲ ಅವರು ಈ ಜಿಲ್ಲೆಯ ಒಬ್ಬ ಜವಾಬ್ದಾರಿಯುಕ್ತ ವ್ಯಕ್ತಿ.ಅವರು ಈರೀತಿಯಾಗಿರುವ ಹೇಳಿಕೆಯನ್ನ ಕೊಡತ್ತಾರೆ ಅಂತಾದರೆ.ಅದನ್ನ ಉಫೆಕ್ಸೆ ಮಾಡುವಂತಿಲ್ಲ.ಜಿಲ್ಲೆಯಲ್ಲಿ ಯಾವುದೇ ಕೊಲೆ ಹತ್ಯೆಯಾದರೆ ಮೊದಲು ಮಂಕಾಳು ವೈದ್ಯರನ್ನ ಕರೆದು ವಿಚಾರಣೆ ಮಾಡಬೇಕು ಎಂದು ನಾಗರಾಜ ನಾಯ್ಕ ಹೇಳಿದ್ದಾರೆ.