ಸುದ್ದಿಬಿಂದು ಬ್ಯೂರೋ
ಕಾರವಾರ: ಉತ್ತರಕನ್ನಡ( uttara Kannada) ಜಿಲ್ಲೆಯ ಕಾರವಾರದ ಮಾಜಾಳಿ ಚೆಕ್‌ ಪೊಸ್ಟ್ ಬಳಿಕ ಕಳೆದ‌‌ ಮೂರು ದಿನಗಳ‌ ಹಿಂದೆ ಲಕ್ಷಾಂತರ ‌ರೂಪಾಯಿ‌ ಮೌಲ್ಯದ‌ ಸ್ಪಿರಿಟ್‌(Spirit) ತುಂಬಿರುವ ಟ್ಯಾಂಕರ್‌ ಹಾಗೂ ಚಾಲಕ,ಕ್ಲಿನರ್‌ ಇಬ್ಬರನ್ನ‌ ಅಬಕಾರಿ‌ ಇಲಾಖೆಯ ಅಧಿಕಾರಿ‌ಗಳು( Excise Department) ವಶಕ್ಕೆ ‌ಪಡೆದಿದ್ದರು ಅವರ ವಿರುದ್ಧ ಪ್ರಕರಣ‌ ದಾಖಲಿಸಿಕೊಳ್ಳದೆ‌ ಇರುವುದಕ್ಕೆ ಶಾಸಕ‌ ಸತೀಶ ಸೈಲ್ (MLA Satish Sail) ಅಬಕಾರಿ‌‌‌ ಇಲಾಖೆಯ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ.

ಅಬಕಾರಿ ಇಲಾಖೆ ಇನಿಸ್ಪೆಕ್ಟರ್ ಸದಾಶಿವ ಕೊರ್ತಿ. ವಶಕ್ಕೆ ‌ಪಡೆದುಕೊಂಡಿದ್ದಾರೆನ್ನಲಾಗಿದೆ. ಆದರೆ ಈ ಬಗ್ಗೆ ಯಾವುದೆ ಕೇಸ್ ದಾಖಲಿಸದೆ ಚಾಲಕ ಮತ್ತು ಕ್ಲೀನರ್ ರನ್ನ ವಶದಲ್ಲಿ ಇಟ್ಟುಕೊಂಡಿರುವ ಬಗ್ಗೆ ವಿರೋಧ ವ್ಯಕ್ತಪಡಿಸಿ ಮಾತಿಗಿಳಿದ ಕಾರವಾರ ಶಾಸಕ ಸತೀಶ್ ಆ ಅಧಿಕಾರಿಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.

ಅಕ್ರಮ ಸ್ಪೀರಿಟ್ ಹೌದೊ ಇಲ್ಲವೊ ಎಂದು ಪ್ರಯೋಗಲಯ ವರದಿ ಬಂದ ಬಳಿಕ ದೂರು ದಾಖಲಿಸಿಕೊಳ್ಳುತ್ತೆವೆ ಎಂದ ಅಧಿಕಾರಿಗಳು ತಿಳಿಸಿದ್ದಾರೆ.
ಬೀದರ್ ನಿಂದ( Bidar) ಗೋವಾ(Goa) ರಾಜ್ಯದ ಕಾಣಕೊಣಕ್ಕೆ ಸಾಗುತ್ತಿದ್ದ ಸ್ಪಿರಿಟ್ ತುಂಬಿದ ಟ್ಯಾಂಕರ್ ಇದ್ದಾಗಿದ್ದು, ಗೋವಾ ಗಡಿ(Goa Border) ಭಾಗದ ಚೆಕ್ ಪೋಸ್ಟ್ ನಲ್ಲಿ ಟ್ಯಾಂಕರ್ ತಪಾಸಣೆ ಮಾಡಿ ಅಕ್ರಮ ಸ್ಪಿರಿಟ್ ಎಂದು ವಶಕ್ಕೆ ಪಡೆಯಲಾಗಿದೆ.

ಈ ಘಟನೆ ಬಗ್ಗೆ ಶಾಸಕ ಸತೀಶ್ ಸೈಲ್ ಅವರಿಗೆ ದೂರು ಬಂದಿರುವ ಹಿನ್ನಲೆಯಲ್ಲಿ ‌ ನೇರವಾಗಿ ಚೆಕ್ ಪೊಸ್ಟ್‌ ಗೆ ತೆರಳಿ ಅಧಿಕಾರಿಗಳನ್ನ ವಿಚಾರಿಸಿದ್ದಾರೆ. ಮೂರು ದಿನವಾದರು ದೂರು ದಾಖಲಿಸಿಕೊಳ್ಳದ ಬಗ್ಗೆ ಶಾಸಕರಿಗೆ ಅಧಿಕಾರಿಗಳ ಬಗ್ಗೆ ಸಂಶಯ ಉಂಟಾಗಿತ್ತು.