ಕುಮಟಾ : ಪಟ್ಟಣದ ಮಹಾತ್ಮಾ ಗಾಂಧಿ ಮೈದಾನದಲ್ಲಿ ಇಂದು ಸರಕಾರದಿಂದ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಈ ವೇದಿಕೆ ಸರಕಾರದ ಕಾರ್ಯಕ್ರಮಕ್ಕೆ ಸೀಮಿತವಾಗದೆ ಒಂದು ರೀತಿಯಲ್ಲಿ ಬಿಜೆಪಿ ಪ್ರಚಾರದ ಸಮಾವೇಶದಂತಾಗಿತ್ತು,ಇದರಿಂದ ಸರಕಾರಿ ಅಧಿಕಾರಿಗಳು ಮುಜುಗರಕ್ಕೆ ಒಳಗಾಗುವಂತಾಗ ಬೇಕಿ ಬಂತು..

ಸರಕಾರದಿಂದ ಒಂದು ಕೋಟಿಗೂ ಅಧಿಕ ಹಣವನ್ನ ಖರ್ಚು ಮಾಡಿ ಮಹಾತ್ಮಾಗಾಂಧಿ ಮೈದಾನದಲ್ಲಿ ಫಲಾನುಭವಿಗಳ ಸಮಾವೇಶ ಮಾಡಲಾಯಿತು. ಆದರೆ ಕಾರ್ಯಕ್ರಮಕ್ಕೆ ಆಗಮಿಸಿದ ಸಚಿವರಿಂದ ಹಿಡಿದು ವೇದಿಕೆಯ ಮೇಲೆ ಇದ್ದ ಎಲ್ಲರೂ ಭಾಷಣ ಬಿಗಿದು ಒಂದು ರೀತಿಯಲ್ಲಿ ಪಕ್ಷದ ಕಾರ್ಯಕ್ರಮ ಎನ್ನುವ ರೀತಿಯಲ್ಲಿ ವೇದಿಕೆಯನ್ನ ಉಪಯೋಗಿಸಿಕೊಂಡರು..

ಆರಂಭದಲ್ಲಿ ಮಾತಿಗಿಳಿದ ಜಿಲ್ಲಾ ಉಸ್ತುವಾರಿಗಳು ವಿರೋಧ ಪಕ್ಷದವರ ವಿರುದ್ಧ ವಾಗ್ದಾಳಿ ಆರಂಭಿಸಿದ್ದರು. ಚೀನಿ ವಸ್ತುಗಳಂತೆ ಕ್ರಾಂಗ್ರೆಸ್ ಗ್ಯಾರೆಂಟಿ ಕಾರ್ಡ್ ಗೆ ಯಾವುದೇ ಗ್ಯಾರೆಂಟಿ, ವಾರೆಂಟಿ ಇಲ್ಲ.ಇವರು ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ವಿದ್ಯುತ್ ಉಚಿತವಾಗಿ ಕೊಡ್ತೇವೆ ಅಂತಾರೆ. ತಿಂಗಳಿಗೆ ಎರಡು ಸಾವಿರ ಕೊಡುವುದಾಗಿ ಗ್ಯಾರೆಂಟಿ ಕಾರ್ಡ್ ಕೊಡತ್ತೇವೆ ಅಂತಾರೆ.ದೇಶದಲ್ಲಿ 75 ವರ್ಷ ಆಡಳಿತ ಮಾಡಿದ ಕಾಂಗ್ರೆಸ್ ಏನು ಮಾಡಿದೆ.? ಎಂದು ಹೇಳುವ ಮೂಲಕ ಬರುವ ಚುನಾವಣೆಯಲ್ಲಿ ತಮ್ಮ‌ ಪಕ್ಷವನ್ನೆ ಮತ್ತೆ ಅಧಿಕಾರಕ್ಕೆ ತನ್ನಿ ಎನ್ನುವ ರೀತಿಯಲ್ಲಿ ಅವರ ಭಾಷಣದ ಸಂಪೂರ್ಣ ಸಾರಾಂಶವಾಗಿತ್ತು.

ಇನ್ನೋರ್ವ ಸಚಿವ ಸುನೀಲ್ ಕುಮಾರ ಸಹ ತಮ್ಮ ಭಾಷದಲ್ಲಿ ಕಾಂಗ್ರೆಸ್ ಹೆಸರನ್ನ ಪ್ರಸ್ತಾಪ ಮಾಡದೆ. ಆ ಒಂದು ಪಕ್ಷ ಈಗ ಚುನಾವಣೆ ಹತ್ತಿರವಾಗುತ್ತಿದ್ದಾಗ ಮನೆಗೆ ಹೋಗಿ ನಿಮ್ಮ ನಿಮ್ಮ ಖಾತೆಗೆಗಳಿಗೆ ನಮ್ಮ ಸರಕಾರ ಬಂದ್ರೆ ಹಣ ಹಾಕತ್ತೇವೆ ಅಂತಾ ಹೇಳಿ ಎಲ್ಲರ ಬಳಿ ಆಧಾರ ಕಾರ್ಡ್ ಪಡೆದುಕೊಳ್ಳತ್ತಾ ಇದೆ‌. ಅಂತಹ ಪಕ್ಷವನ್ನ ಯಾವ ಕಾರಣಕ್ಕೂ ನಂಬೋದಕ್ಕೆ ಹೋಗಬೇಡಿ. ಎಲ್ಲಾ ನಾವೇ ಮಾಡಿದ್ದೇವೆ ಮುಂದೆಯೂ ಮಾಡತ್ತೆವೆ ಎನ್ನುವ ಮಾತುಗಳ ಮೂಲಕ ಪಕ್ಷದ ಪ್ರಚಾರ ನಡೆಸಿದ್ದರು.
.
ಹಿಂದೆ ನೀಡಿದ್ದ ಆದೇಶ ಪತ್ರವೇ ಪುನಃ ಹಂಚಿಕೆ..!

ಇಂದು ಏನು ಮಹಾತ್ಮಾಗಾಂಧಿ ಮೈದಾನದಲ್ಲಿ ವಿವಿಧಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯದ ಪತ್ರವನ್ನ ನೀಡಿದ್ದರೋ. ಈ ಎಲ್ಲಾ ಪತ್ರವನ್ನ ಈ ಮೊದಲೆ ಆಯಾ ಭಾಗದಲ್ಲಿ ನಡೆದ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಸೇರಿದಂತೆ ಬೇರೆ ಬೇರೆ ಕಾರ್ಯಕ್ರಮದಲ್ಲಿ ಆಗಲೆ ವಿತರಣೆ ಮಾಡಿ ಆಗಿದೆ. ಆದರೆ ಈಗ ಮತ್ತೊಮ್ಮೆ ಎಲ್ಲರನ್ನೂ ಒಂದೆ ಕಡೆ ಸೇರಿಸಿ ವಿತರಣೆ ಮಾಡಿದ್ದರೆ ಸರಕಾರದ ಹಣದಲ್ಲಿ ಪಕ್ಷದ ಪ್ರಚಾರವನ್ನ ಕೂಡ ಮಾಡಿದಂತೆ ಆಗುತ್ತದೆ ಎನ್ನುವ ಉದ್ದೇಶ ಈ ಕಾರ್ಯಕ್ರಮದಲ್ಲಿ ಅಡಗಿರೋದ್ರಲ್ಲಿ ಯಾವುದೇ ಅನುಮಾನವಿಲ್ಲ..