ಸುದ್ದಿಬಿಂದು ಬ್ಯೂರೋ ವರದಿ
ಬೈಕ್ ಸವಾರನಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ವಡವಡಗಿ ಕ್ರಾಸ್ ಬಳಿ ನಡೆದಿದೆ.
ಅಪಘಾತದಲ್ಲಿ ಬೈಕ್ ಸವಾರ ಅಮೀರಪ್ಪ ಯಮನಪ್ಪ ನಾಯ್ಕೋಡಿ (61) ಸ್ಥಳದಲ್ಲೇ ಮೃತಪಟ್ಟಿದ್ದಾನೆ.ಇವರು ನಿವೃತ್ತ ಶಿಕ್ಷಕರಾಗಿದ್ದಾರೆ.ಇವರ ಜಮೀನಿನ ಸಮೀಪದಲ್ಲೇ ಅಪಘಾತ ನಡೆದಿದೆ.
ಕಾರು ಚಾಲಕ ಅತೀವವಾಗಿ ತನ್ನ ಕಾರನ್ನ ಚಲಿಸಿಕೊಂಡು ಬಂದಿದ್ದು, ಮೃತ ಪಟ್ಟಿರುವ ಅಮೀರಪ್ಪ ಅವರು ತಮ್ಮ ಜಮೀನಿನ ಬಳಿ ರಸ್ತೆಯಲ್ಲಿ ಹೋಗುತ್ತಿರುವಾಗ ಕಾರು ಡಿಕ್ಕಿ ಹೊಡೆದಿದೆ.ಅಪಘಾತ ರಭಸಕ್ಕೆ ಕಾರು ಪಕ್ಕದ ಜಮೀನಿಗೆ ಹೋಗಿ ಬಿದ್ದಿದೆ..ಬಸವನ ಬಾಗೇವಾಡಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಗಮನಿಸಿ