ಹಳಿಯಾಳ : ಏಜುಕೇಶನ್ ಟ್ರಸ್ಟ್ ವೊಂದರ ಲಕ್ಷಾಂತರ ಹಣವನ್ನ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾಂಗ್ರೆಸ್ ನ ಮಾಜಿ ಎಂ ಎಲ್ ಸಿ ಹಾಗೂ ಹಾಲಿ ಹಳಿಯಾಳ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಗಿರುವ ಎಸ್ ಎಲ್ ಘೋಟ್ನೆಕರ್ ಅವರ ವಿರುದ್ಧವೇ ದೂರು ದಾಖಲಾಗಿದೆ. ಘೋಟ್ನೆಕರ್ ಅವರು ಈ ಹಿಂದೆ ಛತ್ರಪತಿ ಶಿವಾಜಿ ಎಜುಕೇಶನ್ ಟ್ರಸ್ಟ್ ಅಭಿವೃದ್ಧಿಗಾಗಿ ಶ್ರೀ ಛತ್ರಪತಿ ಶಿವಾಜಿ ಮಲ್ಟಿಪರಪೊಸ ಸಹಕಾರಿ ಸಂಘದಿಂದ. ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದರು ಎನ್ನಲಾಗಿದೆ.. ಆದರೆ ಬ್ಯಾಂಕ್ ನಲ್ಲಿ ಸಾಲ ಮಾಡಿ ಪಡೆದ ಹಣವನ್ನ ಟ್ರಸ್ಟ್ ಅಭಿವೃದ್ಧಿಗೆ ಬಳಸದೆ ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದು, ಇನ್ನೂ ರೆಜಿಸ್ಟರ್ ಕಚೇರಿಯಲ್ಲಿ ನಕಲಿ ಕಾಗದ ಪತ್ರ ನೀಡಿ ನಕಲಿ ಸಹಿ ಮಾಡಿ ಬೋಜಾ ದಾಖಲು ಮಾಡಿರುವ ಬಗ್ಗೆ ದೂರು ದಾಖಲಾಗಿದೆ.
ಈ ಬಗ್ಗೆ ಛತ್ರಪತಿ ಶಿವಾಜಿ ಟ್ರಸ್ಟ್ ಅಧ್ಯಕ್ಷರಾಗಿರುವ ರಾಯಣ್ಣಾ ಸೋಮನಿಂಗ್ ಅರಣಗೇರಿ ಎಂಬುವವರು ಶುಕ್ರವಾರ ಸಂಜೆ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಘೋಟ್ನೆಕರ್ ವಿರುದ್ಧ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಹಳಿಯಾಳ ಪೊಲೀಸರು ಘೋಟ್ನೆಕರ್ ವಿರುದ್ದ ಕಲಂ 418, 420,465,468,471 ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚುನಾವಣೆ ಸಮಯದಲ್ಲಿ ಅದು ಅಭ್ಯರ್ಥಿ ಆಗಿರುವವರ ವಿರುದ್ಧವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವು ವಿರೋಧ ಪಕ್ಷದ ನಾಯಕರಿಗೆ ಜೆಡಿಎಸ್ ಅಭ್ಯರ್ಥಿ ವಿರುದ್ಧ ಅಸ್ತ್ರ ಸಿಕ್ಕಂತಾಗಿದೆ..