ಕಾರವಾರ : ರಾಜ್ಯ ವಿಧಾನಸಭೆ ಇನ್ನೇನು ಕೆಲ ದಿನದಲ್ಲಿ ಘೋಷಣೆ ಆಗಲಿದ್ದು, ಕಾಂಗ್ರೆಸ್ ತಮ್ಮ ಪಕ್ಷದ ಮೊದಲ ಪಟ್ಟಿಯನ್ನ ಬಿಡುಗಡೆ ಮಾಡಿದ್ದು, ಜಿಲ್ಲೆಯ ಮೂರು ಕ್ಷೇತ್ರದ ಅಭ್ಯರ್ಥಿಗಳ ಹೆಸರು ಕಾಂಗ್ರೇಸ್ ಮೊದಲ ಪಟ್ಟಿಯಲ್ಲಿ ಬಿಡುಗಡೆ ಮಾಡಿದ್ದು, ಮೊದಲ ಪಟ್ಟಿಯಲ್ಲಿ ಜಿಲ್ಲೆಯ ಮೂವರು ಟಿಕೇಟ್ ಗಿಟ್ಟಿಸಿಕೊಂಡಿದ್ದಾರೆ‌

ಕಾರವಾರ ಕ್ಷೇತ್ರದಿಂದ ಮಾಜಿ ಶಾಸಕ ಸತೀಶ ಸೈಲ್, ಭಟ್ಕಳ ಕ್ಷೇತ್ರದಿಂದ ಮಾಜಿ ಶಾಸಕ ಮಂಕಾಳು ವೈದ್ಯ ಹಾಗೂ ಹಳಿಯಾಳದಿಂದ ಆರ್ ವಿ ದೇಶಪಾಂಡೆ ಅವರ ಹೆಸರನ್ನ ಎಐಸಿಸಿ ತನ್ನ ಮೊದಲ ಪಟ್ಟಿಯಲ್ಲಿ ಬಿಡುಗಡೆ ಮಾಡಿದೆ.

ಇನ್ನೂ ಉತ್ತರಕನ್ನಡ ಜಿಲ್ಲೆಯ ಕುಮಟಾ,ಶಿರಸಿ ಹಾಗೂ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನ ಕಾಂಗ್ರೆಸ್ ಎರಡನೇ ಪಟ್ಟಿಯಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ..