ಕುಮಟಾ : ಟಿಪ್ಪರ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ನಲ್ಲಿದ್ದ ತಂದೆ ಮಗಳು ಇಬ್ಬರೂ ಗಂಭೀರವಾಗಿ ಗಾಯಗೊಡಿರುವ ಘಟನೆ ಕಡೆಕೋಡಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಭವಿಸಿದೆ.
ಕುಮಟಾ ಕಡೆಯಿಂದ ಕಾಸರಕೋಡ ಕಡೆ ತಂದೆ ಹಾಗೂ ಮಗಳು ಬೈಕ್ ಮೇಲೆ ಮನೆಗೆ ಹೋಗುತ್ತಿದ್ದ ವೇಳೆ ಈ ಅಪಘಾತ ನಡೆದೆ. ಟಿಪ್ಪರ್ ಚಾಲಕ ಕುಮಟಾ ಕಡೆಯಿಂದ ಹೊನ್ನಾವರ ಕಡೆ ಹೋಗಲು ಅತೀವೇಗ ಹಾಗೂ ಅಜಾಗರೂಕತೆಯಿಂದ ಟಿಪ್ಪರ್ ಚಲಾಯಿಸಿಕೊಂಡು ಹೋಗುತ್ತಿದ್ದ ಎನ್ನಲಾಗಿದೆ. ಕಡೆಕೋಡಿ ಸಮೀಪ ಹೋಗುತ್ತಿದ್ದಂತೆ ಟಿಪ್ಪರ್ ಚಾಲಕ ಯಾವುದೇ ಸಿಗ್ನಲ್ ಇಲ್ಲದೆ ಕಡೆಕೋಡಿ ಸಮೀಪದ ಏಕಾಏಕಿಯಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಟಿಪ್ಪರ್ ಚಲಾಯಿಸಿದ್ದಾನೆ ಎನ್ನಲಾಗಿದೆ.
ಇದರಿಂದಾಗಿ ಟಿಪ್ಪರ್ ಹಿಂಬದಿಗೆ ಇದ್ದ ಬೈಕ್ ಸವಾರನಿಗೆ ಟಿಪ್ಪರ್ ಬೈಕ್ ಗೆ ಡಿಕ್ಕಿಯಾಗಿದ್ದು, ಬೈಕ್ ಸವಾರ ಹಾಗೂ ಆತನ ಮಗಳಿಗೆ ಗಂಭೀರವಾಗದ ಗಾಯವಾಗಿದೆ. ಗಾಯಗೊಂಡವನ್ನ ತಕ್ಷಣ ಕುಮಟ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಅಪಘಾತಕ್ಕೆ ಕಾರಣವಾಗಿರುವ ಟಿಪ್ಪರ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.