ಸುದ್ದಿಬಿಂದು ಬ್ಯೂರೋ
ಅಂಕೋಲಾ : ವಾಕಿಂಗ್ ತೆರಳುತ್ತಿದ್ದ ಮಹಿಳೆ ಓರ್ವಳಿಗೆ ಕಾರ ಡಿಕ್ಕಿ ಹೊಡೆದು ಮಹಿಳೆ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅವರ್ಸಾ ಹೆದ್ದಾರಿಯಲ್ಲಿ ನಡೆದಿದೆ..

ದೀಪಾ ಅಶೋಕ ನಾಯ್ಕ ( 55) ಮೃತ ಮಹಿಳೆಯಾಗಿದ್ದಾಳೆ.ಈಕೆ ಅವರ್ಸಾದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಎಂದಿನಂತೆ ಬೆಳಿಗ್ಗೆ ವಾಕಿಂಗ್ ಗೆ ಹೋಗುತ್ತಿದ್ದು, ಈ ವೇಳೆ ಗೋವಾದಿಂದ ಕೋಲಾರ ಕಡೆ ತೆರಳುತ್ತಿದ್ದ ಕಾರ ಮಹಿಳೆಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಆಕೆಯ ತಲೆಗೆ ಗಂಭೀರವಾದ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಈ ಬಗ್ಗೆ ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.