ಸುದ್ದಿಬಿಂದು ಬ್ಯೂರೋ
ಮಂಗಳೂರು : ಮಂಗಳೂರು ಮಡ್ಗಾಂವ್ (ಗೋವಾ) ನಡುವೆ ಸಂಚರಿಸಲಿರುವ ವಂದೇ ಭಾರತ್ ರೈಲು(Vande Bharat Train) ಪ್ರಾಯೋಗಿಕ ಸಂಚಾರ ಇಂದು ಆರಂಭಿಸಿದೆ..
ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ವೇದವ್ಯಾಸ ಕಾಮತ್ ಹಾಗೂ ರೈಲ್ವೇ ಅಧಿಕಾರಿಗಳು ಉಪಸ್ಥಿತರಿದ್ದರು.ಇದೇ 30ರಂದು ಈ ರೈಲಿಗೆ ಪ್ರಧಾನಿ ನರೇಂದ್ರ ಮೋದಿಯವರು(Prime Minister Narendra Modi) ವರ್ಚುವಲ್ ವ್ಯವಸ್ಥೆಯ ಮೂಲಕ ಹಸಿರು ನಿಶಾನೆ ತೋರುವ ನಿರೀಕ್ಷೆ ಇದೆ. ಈ ಮೂಲಕ ಕರಾವಳಿಗರ ಬಹುನಿರೀಕ್ಷೆಯ ಬೇಡಿಕೆಯೊಂದು ಈಡೇರಿದಂತಾಗಲಿದೆ. ಮಂಗಳೂರು-ಮಡ್ಗಾಂವ್ ನಡುವಿನ ವಂದೇ ಭಾರತ್ ರೈಲಿನ ಪ್ರಸ್ತಾವಿತ ವೇಳಾಪಟ್ಟಿ ಪ್ರಕಾರ ಮಂಗಳವಾರ ಹೊರತುಪಡಿಸಿ ವಾರದ 6 ದಿನವೂ ಸಂಚಾರ ನಡೆಸಲಿದೆ.
ಕೇವಲ 4.35 ಗಂಟೆಗಳಲ್ಲಿ 315ಕಿ.ಮೀ. ದೂರವನ್ನು ಗಂಟೆಗೆ 68.7 ಕಿ.ಮೀ. ವೇಗದಲ್ಲಿ ಕ್ರಮಿಸಲಿದೆ. ಪ್ರತಿದಿನ ಬೆಳಗ್ಗೆ 8-30ಕ್ಕೆ ಮಂಗಳೂರು ಸೆಂಟ್ರಲ್‌ನಿಂದ ಹೊರಟು ಮಧ್ಯಾಹ್ನ 1-05ಕ್ಕೆ ಮಡ್ಗಾಂವ್ ತಲುಪಲಿದೆ. ಮಡ್ಗಾಂವ್‌ನಿಂದ ಸಂಜೆ 6-10ಕ್ಕೆ ಹೊರಟು ರಾತ್ರಿ10.45ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ.ವಂದೇ ಭಾರತ್ ರೈಲಿಗೆ ಉಡುಪಿ ಮತ್ತು ಕಾರವಾರಗಳಲ್ಲಿ ಮಾತ್ರ ನಿಲುಗಡೆ ಕಲ್ಪಿಸಲಾಗಿದೆ.
ಕುಮಟಾದಲ್ಲಿ ನಿಲುಗಡೆಗೆ ಅವಕಾಶ ನೀಡಬೇಕು : ಸೂರಜ್ ನಾಯ್ಕ
ಈ ರೈಲ್ವೆಗೆ ಕಾರವಾರ ಬಿಟ್ಟರೆ ಜಿಲ್ಲೆಯ ಬೇರೆ ಯಾವ ಕಡೆ ಸಹ ನಿಲುಗಡೆಗೆ ಅವಕಾಶವಿಲ್ಲ ಹೀಗಾಗಿ ಜಿಲ್ಲೆಯ ಮಧ್ಯವರ್ತಿ ಸ್ಥಳವಾಗಿರುವ ಕುಮಟದಲ್ಲಿಯೂ ನಿಲುಗಡೆ ಮಾಡಬೇಕು ಎಂದು ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ ಒತ್ತಾಯಿಸಿದ್ದು, ಒಂದು ವೇಳೆ ನಿಲುಗಡೆಗೆ ಅವಕಾಶ ನೀಡದೆ ಹೋದರೆ ಹೊರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಕುಮಟ ಜಿಲ್ಲೆಯ ಮಧ್ಯವರ್ತಿ ಕೇಂದ್ರವಾಗಿದ್ದು, ಕುಮಟಾದಲ್ಲಿ ಅವಕಾಶ ಕಲ್ಪಸಿದರೆ ಸಾಕಷ್ಟು ಜನ್ರಿಗೆ ಅನುಕೂಲವಾಗಲಿದೆ ಎಂದೆ. ಹೀಗಾಗಿ ಕುಮಟಾದಲ್ಲಿ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.