suddibindu.in
ಕಾರವಾರ : ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತವಾಗಿ 11ದಿನ ಕಳೆದರೂ ಮಣ್ಣಿನಡಿ ನಾಪತ್ತೆಯಾದವರಲ್ಲಿ ಕೆಲವರ ಪತ್ತೆ ಇನ್ನೂ ಆಗಿಲ್ಲ.ರಸ್ತೆಗೆ ಬಿದ್ದ ಬಂಡೆಗಳ ಸಹಿತ ಮಣ್ಣಿನ ರಾಶಿಯಿಂದಾಗಿ ಅಲ್ಲಿ ಕಾರ್ಯಾಚರಣೆ ಕಷ್ಟಕರವಾಗಿತ್ತು.

ಜಿಲ್ಲಾಡಳಿತ, NDRF, SDRF ಇವರೆಲ್ಲ ತಮ್ಮದೇ ರೀತಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದರು.ಈ ಮಧ್ಯೆ ದುರಂತ ಸ್ಥಳಕ್ಕೆ ಬಂದ ಕೇರಳದ ಬೆಂಜ್ ಲಾರಿ ಮಾಲಕ ಗುಡ್ಡದ ಪಕ್ಕದ‌ ಮಣ್ಣಿನಡಿಯೇ ನಮ್ಮ ಲಾರಿ ಮತ್ತು ಚಾಲಕ ಇದ್ದಾನೆ. ಬೇರೆ ಎಲ್ಲೂ ಹುಡುಕಾಟ ಮಾಡಬೇಡಿ ಎಂದು ರಂಪಾಟ ಮಾಡಿದ್ದಲ್ಲೇ ಕೇರಳ‌ ಮಾಧ್ಯಮದ ಮೂಲಕ ಉತ್ತರಕನ್ನಡ ಜಿಲ್ಲಾಡಳಿತ ನಿಷ್ಕ್ರಿಯವಾಗಿದೆ. ಕಾರ್ಯಚರಣೆಯೇ ಮಾಡಿಲ್ಲ ಎಂದು ಸರಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ತಮ್ಮ ಮಾಧ್ಯಮದಲ್ಲಿ ಸುದ್ದಿ ಪ್ರಸಾರವಾಗುವಂತೆ ನೋಡಿಕೊಂಡಿದ್ದರು ಎಂದು ಇದೀಗ ಅನೇಕರು ಆರೋಪಿಸುತ್ತಿದ್ದಾರೆ.

ಇದನ್ನೂ ಓದಿ

ತನ್ನ ಲಾರಿ ಹಾಗೂ ಚಾಲಕನಿಗೆ ಬೇಗ ಹುಡುಕಿ ಎಂದು ಒತ್ತಡ ಹೇರಿದ ಪರಿಣಾಮ ನದಿಯಲ್ಲಿ ಹುಡುಕಾಟ ಆರಂಭಿಸಲು ಜಿಲ್ಲಾಡಳಿ ಮುಂದಾಗಿರುವಾಗಲೇ‌ ಅದನ್ನ ತಡೆದು ರಸ್ತೆಯಲ್ಲಿ ಬಿದ್ದ ಮಣ್ಣಿನಡಿ ಲಾರಿ ಹುಡುಕಾಟ ನಡೆಸಲಾಯಿತು.ಆದರೆ ಇದೀಗ ಹೆಚ್ಚುವರಿ ತಂತ್ರಜ್ಞಾನದ ಮೂಲಕ ಬೆಂಜ್ ಲಾರಿ ಗಂಗಾವಳಿ ನದಿಯಲ್ಲಿ ಇದೆ ಎಂದು ಗೊತ್ತಾಗಿದೆ. ಯಾವಾಗ ನದಿಯಲ್ಲಿ ಲಾರಿ ಇದೆ ಎನ್ನುವದು ಗೊತ್ತಾಯತ್ತೋ ಆಗ ನಿಧಾನವಾಗಿ ಲಾರಿ ಮಾಲೀಕ ಜಿಲ್ಲೆಯಿಂದ ಹೊರ ನಡೆದಿದ್ದಾನೆ.ಲಾರಿ‌ ಘಟನೆಯಲ್ಲಿ ಸಿಲುಕಿರುವುದರಿಂದ ಮಾಲೀಕನಿಗೆ ಸಿಗಬೇಕಾದ ಇನ್ಸೂರನ್ಸ್ ಪೂರ್ಣ ಪ್ರಮಾಣದಲ್ಲಿ ಸಿಗಲಿದೆ.‌‌ ಹೀಗಾಗಿ ಮಾಲೀಕ ‌ಈಗ ಮೌನ ಎನ್ನುವ ಮಾತು ಕೇಳಿ ಬರುತ್ತಿದೆ.

ಈಗ ಗಂಗಾವಳಿ ನದಿಯಲ್ಲಿ‌ ಲಾರಿ ಇರುವುದು ಪತ್ತೆಯಾಗಿದೆ. ಆದರೆ ನೀರಿನ ಹರಿವು ತೀವ್ರಗತಿಯಲ್ಲಿರುವ ಕಾರಣ ಏನೂ ಮಾಡಲು ಸಾಧ್ಯವಿಲ್ಲ ಎಂದು ಕಾರ್ಯಾಚರಣೆ ತಂಡ ಕೈಚೆಲ್ಲಿದೆ. ಲಾರಿ ಮಾಲಕನ ಒತ್ತಡದಿಂದಾಗಿ ಈ ಎಡವಟ್ಟಾಗಿದೆ ಎಂಬ ಆರೋಪ ಈಗ ಕೇಳಿಬರುತ್ತಿದ್ದು, ಅಕಸ್ಮಾತ್ ಅಂದೇ ನದಿಯಲ್ಲಿ ಹುಡುಕುವ ಕಾರ್ಯಾಚರಣೆ ಮಾಡಿದ್ದರೆ ಲಾರಿ ಹುಡುಕಬಹುದಾಗಿತ್ತು. ಆಗ ನೀರಿನ ಹರಿವು ಕೂಡ ಕಡಿಮೆ ಇತ್ತು ಎನ್ನುವ ಮಾತು ಇದೀಗ ಅನಾಹುತ ಸ್ಥಳದಿಂದ ಕೇಳಿ ಬರುತ್ತಿದೆ. ವಿಷಯ ಏನೇ ಇರಲಿ, ಈ ಕಾರ್ಯಾಚರಣೆ ಬೇಗ ಮುಗಿಯಲಿ, ನಾಪತ್ತೆಯಾದವರು ಜೀವಂತ ಮರಳಲಿ ಎಂದು ಪ್ರತಿಯೊಬ್ಬರೂ ಆಶಿಸುತ್ತಿದ್ದಾರೆ.

ನಿಜವಾಯತ್ತು ಶಾಸಕ ಸತೀಶ್ ಸೈಲ್ ಅನುಮಾನ
ಶಿರೂರು ಗುಡ್ಡಕುಸಿತವಾದ ಸಂದರ್ಭದಲ್ಲಿ ನಾಪತ್ತೆಯಾದ ಕೇರಳ ಮೂಲದ ಭಾರತ್ ಬೆಂಜ್ ಲಾರಿ ಗುಡ್ಡದ ಪಕ್ಕದಲ್ಲಿ ಸಿಲುಕಿಲ್ಲ. ಮಣ್ಣಿನ ಒತ್ತಡದಿಂದ ಜಾರಿ ನದಿಯಲ್ಲೇ ಸಿಲುಕಿಕೊಂಡಿದೆ ನದಿಯಲ್ಲೇ ಕಾರ್ಯಚರಣೆ ಮಾಡಬೇಕೆಂದು ಶಾಸಕ ಸೈಲ್ಹೇ ಹೇಳುತ್ತಲ್ಲೆ ಬಂದಿದ್ದರು. ಆದರೆ ಸ್ಥಳಕ್ಕೆ ಬಂದ ಲಾರಿ ಮಾಲೀಕ ಗುಡ್ಡದ ಪಕ್ಕದಲ್ಲೇ ಲಾರಿ ಇರುವ ಬಗ್ಗೆ ಜಿಪಿಎಸ್ ಲೊಕೇಷನ್ ಕಂಡುಬರತ್ತಿದೆ. ನದಿಯಲ್ಲಿ ಹುಡುಕುವ ಬದಲು ಗುಡ್ಡದ ಪಕ್ಕಲ್ಲೆ ಕಾರ್ಯಚರಣೆ ಮಾಡಬೇಕು ಅಂತಾ ಪಟ್ಟುಹಿಡಿದ ಕಾರಣ ಮೂರುದಿನಗಳ ಕಾಲ ನಿರಂತರವಾಗಿ ಗುಡ್ಡದ ಪಕ್ಕದಲ್ಲೇ ಕಾರ್ಯಚರಣೆ ನಡೆಸಲಾಗಿತ್ತು. ಗುಡ್ಡದ‌ಪಕ್ಕಲ್ಲಿ ಲಾರಿ ಸುಳಿವು ಸಿಗಲೇ ಇಲ್ಲ. ಇದಾದ ನಂತರದಲ್ಲಿ ಕಾರವಾರ ಶಾಸಕ ಸತೀಶ್ ಸೈಲ್ ಗೋಕಾಕ್ ‌ನಿಂದ 60ಅಡಿ ಉದ್ದದ ಬೂಮ್ ಹಿಟಾಚಿ ತರಿಸಿ ಕಾರ್ಯಚರಣೆ ನಡೆಸಿದ್ದರು. ಇದರ ಜೊತೆಗೆ ದ್ರೋಣ್ ಕ್ಯಾಮರಾದಲ್ಲಿ ಶೋಧ ಮಾಡಿದರಿಂದ ಅಂದು ಶಾಸಕ ಸತೀಶ ಸೈಲ್‌,‌ ಅವರ‌ ಅನುಮಾನ ಸತ್ಯವಾಗಿದೆ. ಲಾರಿ ಗಂಗಾವಳಿ ನದಿಯಲ್ಲೇ ಇರುವ ಬಗ್ಗೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರೀಯಾ ಅವರು ಖಚಿತ ಪಡಿಸಿದ್ದಾರೆ. ಆ ಮೂರುದಿನ ಗುಡ್ಡದ ಪಕ್ಕದಲ್ಲಿ ಕಾರ್ಯಚರಣೆ ಮಾಡುವುದನ್ನ ಬಿಟ್ಟು ನದಿಯಲ್ಲೇ ಕಾರ್ಯಚರಣೆ ಮಾಡಿದ್ದರೆ ನದಿಯಲ್ಲಿ ನೀರಿನ ಹರಿವು ಸಹ ತೀರಾ ಕಡಿಮೆ‌ ಇರುವುದರಿಂದ ಇಷ್ಟು ದಿನದಲ್ಲಿ ಲಾರಿ ಮೇಲೆತ್ತ ಬಹುದಾಗಿತ್ತು ಎನ್ನುವುದು ಎಲ್ಲರ‌ ಮಾತಾಗಿದೆ