ಕಾರವಾರ : ತಾಲ್ಲೂಕಿನ ಮಾಜಾಳಿಯಲ್ಲಿ ಕೇಂದ್ರ ಮೀನುಗಾರಿಕಾ ಹಾಗೂ ಪಶು ಸಂಗೋಪನೆ ಸಚಿವರು, ಕೇಂದ್ರ ಮೀನುಗಾರಿಕಾ ರಾಜ್ಯ ಸಚಿವರಾದ ಎಲ್. ಮುರುಗನ್‌ ಹಾಗೂ ರಾಜ್ಯ ಮೀನುಗಾರಿಕಾ ಸಚಿವರಾದ ಎಸ್‌.ಅಂಗಾರ ಅವರೊಂದಿಗೆ ಸಾಗರ ಪರಿಕ್ರಮ ಜಲಯಾನ(ಹಂತ-4) ಕಾರ್ಯಕ್ರಮದ ಅಂಗವಾಗಿ ಸಂವಾದದಲ್ಲಿ ಪಾಲ್ಗೊಳ್ಳಲಾಯಿತು.

ಕೇಂದ್ರ ಮೀನುಗಾರಿಕಾ ರಾಜ್ಯ ಸಚಿವರಾದ ಎಲ್. ಮುರುಗನ್‌ ಅವರ ಜೊತೆ ಶಾಸಕಿ ರೂಪಾಲಿ ನಾಯ್ಕ ಮಾತುಕತೆ

ಬಹಳ ದಿನದ ಕನಸು ನನಸಾಗುತ್ತಿದೆ. ಮುಂದಿನ ದಿನದಲ್ಲಿ ಮೀನುಗಾರಿಗೆ ಮನೆ, ಜಾಗದ ಸಮಸ್ಯೆ ಇರುವುದು ನಿವಾರಣೆಯಾಗಲಿದೆ. ಈ ಬಗ್ಗೆ ಸಚಿವರ ಗಮನಕ್ಕೆ ತಂದಿದ್ದೆನೆ. ಬಂದುರು ನಿರ್ಮಾಣವಾಗಲಿದ್ದು, ಇಲ್ಲಿಯ ಜನರಿಗೆ ಉಳಿದುಕೊಳ್ಳಲು ಆಗಬೇಕಾದ ಎಲ್ಲ ವ್ಯವಸ್ಥೆ ಮಾಡುವಂತೆ ಮತ್ತೊಮ್ಮೆ ಮನವಿ ಮಾಡಲಾಯಿತು. ಈ ಹಿಂದೆ ಕೇಂದ್ರ ಗೃಹ ಸಚಿವರಾದ ಅಮೀತ ಶಾ ಜೀ ಅವರು ಆಗಮಿಸಿದಾಗ ಅವರ‌ ಗಮನಕ್ಕೂ ತರಲಾಗಿತ್ತು. ಅವರು ಕೂಡ ಮೀನುಗಾರರ ಸಮಸ್ಯೆ ನಿವಾರಣೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.


ಈ ಸಂದರ್ಭದಲ್ಲಿ ಮೀನುಗಾರಿಕಾ ಫೆಡರೇಷನ್‌ನ ಯಶಪಾಲ ಸುವರ್ಣ, ಗ್ರಾಮ ಪಂಚಾಯತ್ ಜನ ಪ್ರತಿನಿಧಿಗಳು, ಸ್ಥಳೀಯ ಮೀನುಗಾರರು, ಅಧಿಕಾರಿಗಳು, ಸಾರ್ವಜನಿಕರು‌ ಉಪಸ್ಥಿತರಿದ್ದರು.