suddibindu.in
ಅಂಕೋಲಾ: ಶಿರೂರು ಗುಡ್ಡಕುಸಿತದಿಂದ ನಾಪತ್ತೆಯಾಗಿರುವ ಮೂವರ ಶೋಧಕ್ಕಾಗಿ ಆಗಮಿಸಿದ ಈಶ್ವರ ಮಲ್ಪೆ ತಂಡ ದಿನ ಪೂರ್ತಿ ಹುಡುಕಾಟ ನಡೆಸಿದ್ದು,ಯಾವುದೇ ಸುಳಿವು ಸಿಗದೆ ವಾಪಸ್ ಆಗಿದ್ದು ನಾಳೆ ಕಾರ್ಯಚರಣೆ ಮುಂದುರೆಯಲಿದೆ.
ಶಿರೂರು ಗುಡ್ಡಕುಸಿತ ಉಂಟಾಗಿ ಹನ್ನೊಂದು ಮಂದಿ ಮಣ್ಣಿನ ಅಡಿಯಲ್ಲ ಸಿಲುಕಿಕೊಂಡಿದ್ದರು.ಇದುವರೆಗೆ 8ಮಂದಿಯ ಶವ ಪತ್ತೆಯಾಗಿದ್ದು,ಇನ್ನೂಳಿ ಮೂವರು ಹಾಗೂ ಕೇರಳ ಮೂಲದ ಭಾರತ್ ಬೆಂಜ್ ಲಾರಿ ಪತ್ತೆಗಾಗಿರಲಿಲ್ಲ. ನಿನ್ನೆ ನಿವೃತ್ತ ಮೇಕರ್ ಜನರಲ್ಇಂ ದ್ರಬಾಲನ್ ತಂಡ ಗಂಗಾವಳಿ ನದಿಯಲ್ಲಿ ದ್ರೋಣ ಮೂಲಕ ತೀವ್ರ ಕಾರ್ಯಚರಣೆ ನಡೆಸಿತ್ತು..ಈ ವೇಳೆ ಮೂರು ಸ್ಪಾಟ್ ಸಿಕ್ಕಿತ್ತು. ಆದರೆ ಗಂಗಾವಳಿ ನದಿಯಲ್ಲಿ ನೀರಿನ ಹರಿವಿನ ವೇಗ ಹೆಚ್ಚಾಗಿರುವ ಕಾರಣ ಕಾರ್ಯಚರಣೆ ಮಾಡುವುದು ಅಸಾಧ್ಯ ಎಂದು ಇಂದ್ರಬಾಲನ್ ತಂಡ ತಿಳಿಸಿತ್ತು.
ಇದನ್ನೂ ಓದಿ
- ಮೃತ ಆಕಳನ್ನು ಟ್ರ್ಯಾಕ್ಟರಿಗೆ ಕಟ್ಟಿ ಎಳೆದೊಯ್ದ, ವಿಡಿಯೋ ವೈರಲ್
- ಕುಮಟಾ ತಾಲೂಕಾ ಘಟಕದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಪ್ರಮೋದ ನಾಯ್ಕ ಅಯ್ಕೆ
- ದಾಂಡೇಲಿಯಲ್ಲಿ ದೊಣ್ಣೆಯಿಂದ ವ್ಯಕ್ತಿ ಓರ್ವನ ಮೇಲೆ ಹಲ್ಲೆ : ಆಸ್ಪತ್ರೆಗೆ ದಾಖಲು
ಇದರಿಂದಾಗಿ ಕಾರ್ಯಚರಣೆ ನಡೆಸಿ ನಾಪತ್ತೆ ಆಗಿರುವ ಮೂವರನ್ನ ಪತ್ತೆ ಮಾಡಲೇ ಬೇಕು ಎಂದು ಹಠಕ್ಕೆ ಬಿದ್ದ ಜಿಲ್ಲಾಡಳಿತ ಇಂದು ಉಡುಪಿಯ ಈಶ್ವರ ಮಲ್ಪೆ ಅವರ ತಂಡವನ್ನ ಕರೆಸಿ ಕಾರ್ಯಚರಣೆ ನಡೆಸಿದ್ದು, ಬೆಳಿಗ್ಗೆಯಿಂದ ನಾಲ್ಕೈದು ಬಾರಿ ಗಂಟೆಗಳ ಸಮಯ ನೀರಿನ ಒಳಗೆ ಮೂಳುಗಿದ ಈಶ್ವರ ಮಲ್ಪೆ ಸಾಕಷ್ಟು ಶೋಧ ನಡೆಸಿದ್ದಾರೆ. ಆದರೆ ನದಿಯಲ್ಲಿ ಭಾರೀ ಪ್ರಮಾಣದ ಕಲ್ಲು ಬಂಡೆ ಹಾಗೂ ಮರದ ದಿಬ್ಬಗಳು ತುಂಬಿಕೊಂಡಿದ್ದು, ಕಾರ್ಯಚರಣೆ ಅಡ್ಡಿಯಾಗಿದೆ. ಈಶ್ವರ ಮಲ್ಪೆ ತನ್ನ ಜೀವದ ಹಂಗು ತೊರೆದು ಕಾರ್ಯಚರಣೆ ನಡೆಸಿದ್ದಾರೆ.
ಈಶ್ವರ ಮಲ್ಪೆ ಜೊತೆಯಲ್ಲೇ ಕೊನೆ ಕ್ಷಣದವರೆಗೆ ಇದ್ದ ಶಾಸಕ
ಉಡುಪಿ ಮಲ್ಪೆಯಿಂದ ಶೋಧ ಕಾರ್ಯಚರಣೆ ಆಗಮಿಸಿದ ಈಶ್ವರ ಮಲ್ಪೆ ಹಾಗೂ ಅವರ ತಂಡ ಬೆಳಿಗ್ಗೆಯಿಂದ ಸಾಕಷ್ಟು ಶೋಧ ಕಾರ್ಯ ನಡೆಸಿದ್ದಾರೆ. ಇವರ ಜೊತೆ ಸ್ಥಳೀಯ ಶಾಸಕ ಸತೀಶ ಸೈಲ್ ಕೂಡ ಅವರ ಬೋಟ್ ಮೇಲೆ ಕೊನೆ ಕ್ಷಣದವರೆಗೂ ಉಳಿದು ಕಾರ್ಯಚರಣೆಯ ಇಂಚಿಚೂ ಮಾಹಿತಿಯನ್ನ ಕಲೆ ಹಾಕಿದ್ದಾರೆ. ಅಷ್ಟೆ ಅಲ್ಲದೆ ಗಂಗಾವಳಿ ನದಿಯಲ್ಲಿ ಮಂಜಗುಣಿ ತನಕ ಸಂಚಾರ ಮಾಡಿದ ಶಾಸಕ ಸತೀಶ್ ಸೈಲ್ ನದಿ ತೀರದಲ್ಲಿರುವ ಕುಟುಂಬದವರ ಸಂಕಷ್ಟವನ್ನ ಕಣ್ಣಾರೆ ಕಂಡಿದ್ದಾರೆ.ಈ ಬಗ್ಗೆ ಮಾತನಾಡಿದ ಶೈಲ್ ಈಶ್ವರ ಮಲ್ಪೆ ಅವರ ಕಾರ್ಯಚರಣೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನದಿಯಲ್ಲಿ ನೀರಿನ ವೇಗ ಹೆಚ್ಚಾಗಿರುವಾಗ ಬೋಟ್ ಮೇಲೆ ಸಂಚಾರ ಮಾಡು ವೇಳೆ ಭಯ ಆಗಿಲ್ವಾ ಅಂತಾ ಮಾಧ್ಯಮದವರು ಕೇಳಿದರೆ. ಅವರು ಪಾಪ ಆ ಕುಟುಂಬಗಳು ಕಣ್ಣಿರು ಹಾಕತ್ತಿರುವಾಗ ಭಯ ಅಂತಾ ನಾವು ಅವರ ನೆರವಿಗೆ ಹೋಗದೆ ಹೋದರೆ ಅವರ ಸ್ಥಿತಿ ಏನಾಗಬೇಕು. ಇಲ್ಲಿ ಭಯದ ಪ್ರಶ್ನೆ ಇಲ್ಲ. ಕಣ್ಣಿರಿನಲ್ಲಿ ಕಾಲ ಕಳೆಯುತ್ತಿರುವ ಆ ಕುಂಬಕ್ಕೆ ದೈರ್ಯ ತುಂಬೇಕಾಗಿದೆ ಎಂದರು.