ಕಾರವಾರ: ಭಾರತ ಕ್ರಿಕೆಟ್ ತಂಡದ ಆಟಗಾರರು ರನ್‌ಗಳ ಪೇರಿಸಿದ್ದನ್ನು ನೋಡಿ ಆನಂದಿಸಿದವರಿಗೆ ಲೆಕ್ಕವಿಲ್ಲ.ಆದರೆ ಈ ಸಾಧಕರ ಹಿಂದೆ ಹತ್ತಾರು ಜನರ ಶ್ರಮ ಕೂಡ ಇರುತ್ತದೆ.ಅದರಲ್ಲೂ ಆ ಎಲ್ಲಾ ಸಾಧನೆಯ ಹಿಂದೆ ಈ ವರ್ಷದ 2023ರಂದು ಅಹ್ಮದಾಬಾದ್ ಮೋದಿ ಮೈದಾನದಲ್ಲಿ ನಡೆಯುವ ವಲ್ಡ್ ಕಪ್‌ನಲ್ಲಿ (Cricket World Cup-2023)ನಮ್ಮ ಕರಾವಳಿಯ ಯುವಕನ ನೆನಪು ನಾವೇಲ್ಲಾ ನೆನಪು ಮಾಡಿಕೊಳ್ಳಲೆ ಬೇಕು.

ಸುಮಾರು ಹನ್ನೆರಡು ವರ್ಷಗಳ ಹಿಂದೆ ಭಾರತ ಕ್ರಿಕೆಟ್ ತಂಡದ ಆಟಗಾರನಾಗಿ ಮಿಂಚಬೇಕಂಬ ಮಹದಾಸೆ ಹೊತ್ತು ಮುಂಬೈ ಎಂಬ ಮಾಯಾನಗರಿಗೆ ಹೋಗಿರುವ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ದಿವಗಿಯಲ್ಲಿ ಜನಿಸಿದ ಯುವಕನೊಬ್ಬನ ಬದುಕು ಅನಿವಾರ್ಯವಾಗಿ ತಿರುವನ್ನು ಪಡೆದುಕೊಂಡಿದೆ.‌ ರಾಘವೇಂದ್ರ ದಿವಗಿ ಇಂದು(Indian cricket team) ಭಾರತೀಯ ಕ್ರಿಕೆಟ್ ತಂಡದ ಸಹಾಯಕ ದೈಹಿಕ ತರಬೇತುದಾರಾಗಿದ್ದು,ಈ ಬಾರಿಯ ವಿಶ್ವಕಪ್ ನಲ್ಲಿ ರಾಘವೇಂದ್ರ ಅವರ ಕೈಚಳ ತುಂಬಾ ಇದೆ.

ಉತ್ತರಕನ್ನಡ ಜಿಲ್ಲೆಯ(uttara kannda) ಕುಮಟಾ ತಾಲೂಕಿನ ದಿವಗಿಯ ಬಡ ಕುಟುಂಬದಲ್ಲಿ ಹುಟ್ಟಿದ ರಾಘವೇಂದ್ರ ಶಾರದಾ ನಿಲಯ ಪ್ರೌಢಶಾಲೆಯಲ್ಲಿ ಕರೆಯುತ್ತಿರುವಾಗಲೇ ತಾನು ಶ್ರೇಷ್ಠ ಕ್ರಿಕೆಟ್ ಆಟಗಾರನಾಗಬೇಕಂಬ ಆಸೆ ರಾಘು ಮನದಲ್ಲಿ ಹುಟ್ಟಿತ್ತು. ಇನ್ನೂ ಹೆತ್ತರಿಗೂ. ತನ್ನ ಮಗ ಕ್ರಿಕೆಟ್ ಕ್ಷೇತ್ರವನ್ನ ಆಯ್ಕೆ ಮಾಡಿಕೊಂಡಿರುವ ಬಗ್ಗೆ ಪಾಲಕರಲ್ಲಿ ಆರಂಭದಲ್ಲಿ ವಿರೋಧವಿತ್ತು. ರಾಘು ಅವರ ತಂದೆ ಶಿಕ್ಷಕರಾಗಿದ್ದರು. ಶಿಕ್ಷರ ಮಗನಾದ ರಾಘು ಮನೆಯಲ್ಲಿ ಇರುವುದಕ್ಕಿಂತ ಹೆಚ್ಚಿನ ಸಮಯವನ್ಮ ಕ್ರಿಕೆಟ್ ಮೈದಾನದಲ್ಲಿಯೇ ಕಳೆಯುತ್ತಿದ್ದನಂತೆ. ಇದು ಚಾಲಕರಿಗೆ ಇಷ್ಟವಾಗಿರಲಿಲ್ಲ.
ಶಿಕ್ಷಕನ ಮಗ ಉನ್ನತ ಶಿಕ್ಷಣವನ್ನ ಕಲಿತು ಸರಕಾರಿ ಉದ್ಯೋಗಕ್ಕೆ ಸೇರಬೇಕು ಎನ್ನುವುದು ಎಲ್ಲರ ಪಾಲಕರಂತೆ ರಾಘವೇಂದ್ರ ದಿವಗಿ(Raghavendra Divagi) ಅವರ ಪಾಲರ ಆಸೆ ಆಗಿತ್ತು. ಅದೆಷ್ಟೋ ಬಾರಿ ಪಾಲಕರು ಬುದ್ದಿಮಾತು ಹೇಳಿದ್ದಾರೆ.ಆದರೆ ರಾಘವೇಂದ್ರ ಅವರ ಕನಸು ಮತ್ತು ಗುರಿ ಹಿಂದಿರುಗಿ ನೋಡದ ಸ್ಥಿತಿಯಲ್ಲಿ ಇರಲಿಲ್ಲ ಆಗಲೆ ಅವರು ಕ್ರಿಕೆಟ್ ಕ್ಷೇತ್ರಕ್ಕೆ ಕಾಲಿಟ್ಟಾಗಿತ್ತು.

ರಾಘವೇಂದ್ರ ಅವರು ಶಾಲೆಗೆ ರಜೆ ಇದ್ದ ಸಮದಲ್ಲಿ ಮುಂಬೈನಲ್ಲಿರುವ ತನ್ನ ಬಂಧುಗಳ ಮನೆಗೆ ಹೋಗುತ್ತಿದ್ದಾಗ ಅಲ್ಲಿ ಕ್ರಿಕೆಟ್ ದಂತಕಥೆ ತೆಂಡೂಲ್ಕರ್ ಅವರ ಕ್ರಿಕೆಟ್ ಗುರುಗಳಾದ ರಮಾಕಾಂತ ಅಚ್ರೇಕರ್ ಅವರ ಕ್ರಿಕೆಟ್ ಅಕಾಡೆಮಿಯಲ್ಲಿ ಕ್ರಿಕೆಟಿನ ವಿವಿಧ ಆಯಾಮಗಳನ್ನ ಕರಗತ ಮಾಡಕೊಂಡಿದ್ದಾರೆ. ಆಗಲೇ ರಾಘು ಅವತ ಕ್ರಿಕೆಟ್ ಆಸಕ್ತಿ, ಗಮನಿಸಿದ ಅಚ್ರೇಕರ್ ಭವಿಷ್ಯದಲ್ಲಿ ರಾಘವೇಂದ್ರ ಮುಂದೊಂದು ದಿನ ಉತ್ತಮ ಕ್ರಿಕೆಟ್ ಆಟಗಾರನಾಗಿ ಹೊರ ಹೊಮ್ಮತ್ತಾನೆ ಎಂಬ ಆಶಾವಾದದ ಮಾತುಗಳನ್ನಾಡಿದ್ದರು. ರಾಘು ಮುಂಬೈನ ದುಬಾರಿ ಜೀವನದಲ್ಲಿ ಉಳಿಯಲು ಕಷ್ಚವಾಗಿ ವಾಪಸ್‌ ಅಲ್ಲಿಂದ ಊರಿಗೆ ಮರಳಿದ್ದರು.
ಪಿ.ಯು.ಸಿ ಯನ್ನ ಕುಮಟಾದ ಕೆ.ಎಲ್.ಇ. ಕಾಲೇಜಿನಲ್ಲಿ ಓದುತ್ತಿರುವಾಗಲು‌‌ ಅಭ್ಯಾಸಕ್ಕಿಂತ ಹೆಚ್ಚಿನ ಸಮಯವನ್ನು ಕ್ರಿಕೆಟಿಗೇ ಮೀಸಲಾತಿಗಿಡುತ್ತಿದ್ದರು.

ಕ್ರಿಕೆಟ್ ಜಗತ್ತಿನಲ್ಲಿ ತಾನು ಒಬ್ಬ ಕ್ರಿಕೆಟ್ ಆಟಗಾರನಾಗ ಬೇಕು ಎನ್ನುವ ಗುರಿಯೊಂದಿದೆ. ಮನೆ ಹಾಗೂ ವಿದ್ಯಾಭ್ಯಾಸವನ್ನು ತ್ಯಜಿಸಿ ಹುಬ್ಬಳ್ಳಿ ನಗರವನ್ನ ಸೇರಿಕೊಳ್ಳುತ್ತಾರೆ. ಅಲ್ಲಿಯೂ ಸಹ ಉಳಿದುಕೊಳ್ಳಲು ಸರಿಯಾದ ವ್ಯವಸ್ಥೆ ಇಲ್ಲದೆ ಅದೆಷ್ಟೋ ರಾತ್ರಿಯನ್ನ ಕಳೆದಿದ್ದಾರೆ. ಧಾರವಾಡ ವಲಯ ತಂಡದ ಪರವಾಗಿ ಆಡಬೇಕೆಂಬ ಆಸೆಯಿಂದ ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ದಿನ ಪೂರ್ತಿ ಅಭ್ಯಾಸ ಮಾಡಿ ವಿಶ್ರಾಂತಿಗಾಗಿ ಸ್ವಲ್ಪ ದಿನ ಬಸ್ ಸ್ಟಾಂಡನಲ್ಲಿ ಕಾಲ‌‌ಕಳೆದಿದ್ದಾರೆ. ಇಲ್ಲಿ‌ಕೂಡ ಪೊಲೀಸರ ಭಯದಿಂದ ಮೈದಾನದ ಪಕ್ಕದಲ್ಲಿಯೇ ಇರುವ ಸ್ಮಶಾನವೇ ಸುರಕ್ಷಿತ ತಾಣವೆಂದು ಅಲ್ಲಿಯೇ ಹಲವಾರು ರಾತ್ರಿ ಕಳೆದಿದ್ದಾರಂತೆ.

ನಂತರ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಹೋದ ರಾಘವೇಂದ್ರ ಅವರ ದಿಕ್ಕೇ ಬೆಂಗಳೂರಿಗೆ ಹೋದ ಬಳಿಕ ಬದಲಾಗಿಬಿಡುತ್ತದೆ. ಚಿನ್ನಸ್ವಾಮಿ ಕ್ರೀಡಾಂಗಣ ಇರುವುದು ಇಲ್ಲೇ. ತನ್ನ ಕನಸನ್ನು ಹೊತ್ತು ಕುಳಿತ್ತಿದ್ದ ರಾಘವೇಂದ್ರರನ್ನು ಗಮನಿಸಿದ ಭಾರತ ತಂಡದ ಮಾಜಿ ವೇಗದ ಬೌಲರ್ ಜಾವಗಲ್ ಶ್ರೀನಾಥ್ ಅವರು ಇವರಲ್ಲಿದ್ದ ಕನಸು ಹಾಗೂ ಕ್ರಿಕೆಟಿನ ತುಡಿತವನ್ನು ಕಂಡು ಕರ್ನಾಟಕ ಕ್ರಿಕೆಟ್ ಸಂಸ್ಥೆಯ ಮುಖ್ಯ ತರಬೇತುದಾರರಾಗಿದ್ದ ಇರ್ಫಾನ್ ಸೇಠ್ ಅವರಿಗೆ ಪರಿಚಯಿಸಿ. ಅಲ್ಲಿಂದ ಇಲ್ಲಿಯವರೆಗೂ ರಾಘವೇಂದ್ರ ದಿವಗಿ ಎಂದೂ ಹಿಂದೆ ತಿರುಗಿ ನೋಡಿಯೇ ಇಲ್ಲ. ಕೆ.ಎಸ್.ಸಿ.ಎ. ಅಲ್ಲಿದ್ದಾಗ (ಕನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿ)ಸ್ವಾತಿಕ್ ಯೂನಿಯನ್ ಕ್ರಿಕೆಟ್ ಕ್ಲಬ್ ಪರ ಆಡುತ್ತಾ ಅದರ ಮುಖ್ಯ ತರಬೇತುದಾರರಾದ ಇರ್ಫಾನ್ ಸೇಠ್ ಅವರೊಂದಿಗೆ ಸಹ ಆಟಗಾರರಿಗೆ ಅಭ್ಯಾಸ ಶಿಬಿರದಲ್ಲಿ ಥ್ರೋಡೌನ್ (ವಿವಿಧ ಆಯಾಮಗಳ ಬೌಲಿಂಗ್) ಬೌಲರ್ ಆಗಿಯೂ ಕಾರ್ಯನಿರ್ವಹಿಸುವ ಅವಕಾಶವನ್ನು ಪಡೆಯುತ್ತಾರೆ. ಈ ಒಂದು ವಿಶೇಷ ಕಾರಣದಿಂದಾಗಿಯೇ ರಾಘವೇಂದ್ರ ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್.ಸಿ.ಎ.) ವತಿಯಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತದ ಹಿರಿಯ ಆಟಗಾರರ ಅಭ್ಯಾಸ ಶಿಬಿರಗಳು ನಡೆಯುತ್ತಿದ್ದಾಗ ಆಗಾಗ ಸಹಾಯಕರಾಗಿ ಹೋಗುವ ಅವಕಾಶವನ್ನು ಪಡೆಯುತ್ತಾರೆ.

ಹೀಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿಯಿಂದ ಭಾರತೀಯ ಕ್ರಿಕೆಟ್ ತಂಡ ಅಥವಾ ರಣಜಿ ಆಟಗಾರರ ಅಭ್ಯಾಸ ಶಿಬಿರಗಳಲ್ಲಿ (ನೆಟ್) ಬೌಲಿಂಗ್ ಮಾಡಲು ಬೌಲರುಗಳ ಬೇಡಿಕೆ ಬಂದಾಗ ಇರ್ಫಾನ್ ಸೇಠ್ ರಾಘವೇಂದ್ರ ಅವರನ್ನು ಕಳುಹಿಸಿಕೊಡುತ್ತಿದ್ದರು.ಕ್ರಿಕೆಟ್ ಆಟಗಾರನಾಗಬೇಕೆಂಬ ಹಂಬಲದ ನಡುವೆಯೂ ನೆಟ್ ಅಲ್ಲಿ ಆಟಗಾರರಿಗೆ ಕೇವಲ ಥ್ರೋ ಡೌನ್ ಬೌಲರ್ ಆಗಿರದೇ ತನ್ನ ಬೌಲಿಂಗಿಗೆ ಅಭ್ಯಾಸ ನಡೆಸುತ್ತಿದ್ದ ಆಟಗಾರರೊಂದಿಗೆ ಹಾಗೂ ಇತರ ಆಟಗಾರರೊಂದಿಗೆ ಉತ್ತಮ ಬಾಂಧವ್ಯ ಹಾಗೂ ಅವರ ಕಠಿಣ ಪರಿಶ್ರಮಕ್ಕೆ ಆಟಗಾರರೇ ಮನ ಸೋಲುತ್ತಿದ್ದರು.

ಕ್ರಿಕೆಟ್ ದೇವರೆಂದೇ ಕರೆಯಲ್ಪಡುವ ಸಚಿನ್ ತೆಂಡೂಲ್ಕರ್, ಖ್ಯಾತರಾದ ರಾಹುಲ್ ದ್ರಾವಿಡ್, ಮಹೇಂದ್ರ ಸಿಂಗ್ ಧೋನಿ ಸೇರಿದಂತೆ ಹೆಚ್ಚಿನೆಲ್ಲಾ ಆಟಗಾರರಿಗೆ ಥ್ರೋ ಡೌನ್ ಬೌಲಿಂಗ್ ಮಾಡಿದ ಹೆಗ್ಗಳಿಕೆ ರಾಘವೇಂದ್ರ ದಿವಗಿ ಅವರದು.ಈತನ ಕ್ರಿಕೆಟ್ ಪ್ರೇಮವನ್ಮ ಗಮನಿಸಿದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಭಾರತೀಯ ತಂಡದ ಮುಖ್ಯ ದೈಹಿಕ ತರಬೇತುದಾರರಾಗಿರುವ ಪ್ಯಾಡಿ ಆಪ್ಟನ್ ಅವರ ಗರಡಿಯಲ್ಲಿ ಸಹಾಯಕ ತರಬೇತುದಾರರನ್ನಾಗಿ ರಾಘವೇಂದ್ರ ದಿವಗಿ ಅವರನ್ನ ನೇಮಿಸಿದ್ದು, ಇಂದು ಇವರು ಭಾರತೀಯ ಕ್ರಿಕೆಟ್ ತಂಡದ ಅವಿಭಾಜ್ಯ ಅಂಗವಾಗಿ ಬೆಳೆದಿದ್ದಾರೆ.

ಶ್ರೇಷ್ಠ ಕ್ರಿಕೆಟಿಗನಾಗಬೇಕೆಂಬ ಕನಸನ್ನು ಹೊತ್ತ ರಾಘವೇಂದ್ರ ರವರಿಗೆ ಕ್ರಿಕೆಟ್‌ನ ದಂತಕಥೆಗಳ ಸಾಧನೆ ಮಾಡಲಾಗದಿದ್ದರೂ, ಇತ್ತೀಚಿನ ಹೊಡೆಬಡಿಯ ದಾಂಡಿಗರ ಸಾಧನೆಯ ಹಿಂದೆ ಎಲೆ ಮರೆಯ ಕಾಯಿಯಂತೆ ಎದ್ದು ಕಾಣುವುದು ರಾಘವೇಂದ್ರ ದಿವಗಿ ಅವರ ಪರಿಶ್ರಮ ಎಂದರೆ ಅತಿಶಯೋಕ್ತಿಯಾಗಲಾರದು. 2023ರ ವಲ್ಡ್ ಕಪ್ ನಲ್ಲಿಯೂ ಸಹ ರಾಘು ದಿವಗಿ ಅವರ ಶ್ರಮ ಉಹಿಸಲು ಸಾಧ್ಯವಿಲ್ಲ. 2023ರ ವಿಶ್ವಕಪ್ ಭಾರತ ಗೆದ್ದು ಬರಲಿ ಎಂದು ಹಾರೈಸೋಣ