ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ:ಮುಡಾ ಹಗರಣದಲ್ಲಿ ತತ್ತರಿಸಿಹೋಗಿರುವ ರಾಜ್ಯ ಸರಕಾರ ಯಾವುದೇ ಕ್ಷಣದಲ್ಲಿ ಬದಲಾವಣೆ ಸಾಧ್ಯೆ ಇದೆ ಎಂದು ರಾಜಕೀಯ ವಿಶ್ಲೇಷಕರವಾದವಾಗಿದ್ದು,ಒಂದು ವೇಳೆ ಅಂದು ಕೊಂಡಂತೆ ಆದರೆ ಉತ್ತರಕನ್ನಡ ಜಿಲ್ಲೆಯ ಕಾರವಾರ ಕ್ಷೇತ್ರದಲ್ಲಿಯೂ ರಾಜಕೀಯ ಚಿತ್ರಣ ಬದಲಾಗುವ ಸಾಧ್ಯತೆ ಹೆಚ್ಚಾಗಿದ್ದು,ಮಾಜಿ ಸಚಿವ ಆನಂದ ಅಸ್ನೋಟಿಕರ್ ಮೈತ್ರಿ ಪಕ್ಷದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಎರಡು ಪಕ್ಷದ ಪ್ರಮುಖರು ಮುಂದಾಗಿದ್ದಾರೆನ್ನಲಾಗಿದೆ.

ಕಳೆದ ಚುನಾವಣೆಯಲ್ಲಿ ಕ್ಷೇತ್ರವನ್ನ ಕಳೆದುಕೊಂಡಿರುವ ಬಿಜೆಪಿ ಸಹ, ಬರುವ ಚುನಾವಣೆಯಲ್ಲಿ ಮತ್ತೆ ಕ್ಷೇತ್ರವನ್ನ ಗಟ್ಟಿ ಮಾಡಿಕೊಳ್ಳುವ ಪ್ರಯತ್ನಕ್ಕೆ ಈಗಿನಿಂದಲ್ಲೆ‌ ಕೈ ಹಾಕಿರುವಂತಿದೆ. ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ‌ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದು ಆನಂದ‌ ಅಸ್ನೋಟಿಕರ್ ಅವರಿಗೆ ಬರಲಿರುವ ಚುನಾವಣೆಯಲ್ಲಿ ಹೆಚ್ಚಿನ ಲಾಭ ಆಗುವ ಸಾಧ್ಯತೆ ಇದೆ.ಅದು ಅಲ್ಲದೆ ಕಳೆದ ಚುನಾವಣೆಯಲ್ಲಿ ಬಿಜೆಪಿ ಕಾರವಾರ ಕ್ಷೇತ್ರ ಸೇರಿ ಇನ್ನೂ ಎರಡು ಕ್ಷೇತ್ರದಲ್ಲಿ ತಮ್ಮ‌ ಸ್ಥಾನವನ್ನ ಕಳೆದುಕೊಂಡಿರುವುದು ಭಾರೀ ಹಿನ್ನಡೆ ಉಂಟಾಗಿದೆ.

ಹೀಗಾಗಿ ಮುಂದೆ ಬರಲಿರುವ ಚುನಾವಣೆಯಲ್ಲಿ ಮೈತ್ರಿ ಮೂಲಕ ಪಕ್ಷವನ್ನ ಇನ್ನಷ್ಟು ಬಲಿಷ್ಠವನ್ನಾಗಿ ಮಾಡುವುದರೊಂದಿಗೆ ಹೆಚ್ಚಿನ ಸ್ಥಾನ ಗಿಟ್ಟಿಸಿಕೊಳ್ಳಲು ಮೈತ್ರಿ ಪಕ್ಷಗಳ ಪ್ರಯತ್ನ ಮುಂದುವರೆದಿದೆ.ಅದರೆ ನಡುವೆ ಕ್ಷೇತ್ರ ವಿಗಂಡನೆ ಆಗಿದ್ದೇ ಹೌದಾದಲ್ಲಿ ಜೋಯಿಡಾ ತಾಲೂಕು ಕಾರವಾರ ವಿಧಾನಸಭಾ ಕ್ಷೇತ್ರಕ್ಕೆ ಸೇರಿಕೊಳ್ಳಲಿದೆ. ಹೀಗಾದಲ್ಲಿ ಆನಂದ ಅಸ್ನೋಟಿಕರ್‌ ಮೈತ್ರಿ ಪಕ್ಷದ ಅಭ್ಯರ್ಥಿ ಆದರೆ ಆ ಭಾಗದಲ್ಲಿ ಹಿಂದಿನಿಂದಲ್ಲೂ ಅಸ್ನೋಟಿಕರ್ ಆಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಲಾಭ ಇದೆ ಎನ್ನುವ ಲೆಕ್ಕಾಚಾರ ಸಹ ಇದೆ.

ಬಿಜೆಪಿ ಹೈಕಮಾಂಡ ಕೂಡ ರಾಜ್ಯದನಲ್ಲಿನ ಬಿಜೆಪಿ ನಾಯಕರಿಗಿಂತ ಹೆಚ್ಚಾಗಿ ಕುಮಾರಸ್ವಾಮಿ ಅವರನ್ನ ಮೆಚ್ಚಿಕೊಂಡಿದ್ದಾರೆ.ಲೋಕಸಭಾ ಚನಾವಣಾ ಸಮಯಲ್ಲಿ ಮೈಸೂರು ಸೇರಿದಂತೆ ಒಂದಿಷ್ಟು ಕೇತ್ರದಲ್ಲಿ ಲೋಕಸಭಾ ಕ್ಷೇತ್ರವನ್ನ ಗೆಲ್ಲೋದಕ್ಕೆ ಜೆಡಿಎಸ್‌ ಜೊತೆಗಿನ‌ ಮೈತ್ರಿ ಸಹಕಾರ ಆಗಿದೆ ಎನ್ನುವುದು ಬಿಜೆಪಿ ಹೈಕಮಾಂಡಗೆ ಅರಿವಾಗಿದೆ.

ಹೀಗಾಗಿ ಬರುವ ವಿಧಾನಸಭಾ ಚುನಾವಣೆಯಲ್ಲಿ ಅದರಲ್ಲಿ ಕುಮಾರಸ್ವಾಮಿ ಅವರ ಹಿಡಿತವೂ ಇರುವಂತಹ ಉತ್ತರಕನ್ನಡ ಜಿಲ್ಲೆಯ ಕಾರವಾರ ಕ್ಷೇತ್ರವನ್ನ ತಮ್ಮ ಅಭ್ಯರ್ಥಿಯಾಗಿ ಆನಂದ ಅಸ್ನೋಟಿಕರ್ ಅವರಿಗೆ ಟಿಕೆಟ್ ಕೊಡಿಸುವುದು ಕುಮಾರಸ್ವಾಮಿ ಅವರಿಗೆ ಕಷ್ಟದ ಕೆಲಸವೆನು ಅಲ್ಲ‌ ಹೀಗಾಗಿ ಎಲ್ಲಾ ಲೆಕ್ಕಾಚಾರವನ್ನ ಮುಂದಿಟ್ಟುಕೊಂಡೆ ಬಿಜೆಪಿ ಸಹ ಆನಂದ ಅಸ್ನೋಟಿಕರ್ ಅವರನ್ನೆ ಮೈತ್ರಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಚಿಂತನೆ ನಡೆಸಿದೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ.

ಗಮನಿಸಿ.