ಸುದ್ದಿಬಿಂದು ಬ್ಯೂರೋ
ಕಾರವಾರ :ICC World Cup 2023 ಕಾರವಾರ : ವಿಶ್ವಕಪ್ ನಲ್ಲಿ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಮತ್ತೆ ಮುಖಾಮುಖಿಯಾಗಿದೆ.ಈ ಭಾರಿಯ ವಿಶ್ವ ‌ಕಪ್‌ ಭಾರತ‌ ಗೆದ್ದು(India Australia World Cup 2023) ಬರಲಿ ಎಂದು ಕ್ರಿಕೆಟ್ ಅಭಿಮಾನಿಗಳು ಹಾರೈಸುತ್ತಿದ್ದಾರೆ. ಸಮುದ್ರದಾಳದಲ್ಲೂ ಕೂಡ ಭಾರತ ಗೆದ್ದು ಬರಲಿ ಎಂದು ನೇತ್ರಾಣಿ ಗಣೇಶ ತಂಡ ಶುಭ ಹಾರೈಸಿದೆ.

ಮುರುಡೇಶ್ವರದ ನೇತ್ರಾಣಿ ಸ್ಕುಬಾ ಅಡ್ವೆಂಚರ್ಸ್(Netrani Scuba Adventures)ನಿಂದ ಭಾರತ ಆಸ್ಟ್ರೇಲಿಯಾ ವಿಶ್ವಕಪ್ ಪೈನಲ್ ಪಂದ್ಯ ಹಿನ್ನಲೆಯಲ್ಲಿ ಭಾರತಕ್ಕೆ ಶುಭಕೋರಿ ಸ್ಕೂಬಾ ಡೈವಿಂಗ್ ಮಾಸ್ಟರ್ಸ್ ಮತ್ತು ಪ್ರವಾಸಿಗರು ಮುರುಡೇಶ್ವರದ ನೇತ್ರಾಣಿ ಐಲೆಂಡ್ ನಲ್ಲಿ ಸಮುದ್ರದಾಳದಲ್ಲಿ ಗೆದ್ದು ಬಾ ಭಾರತ ಎಂದು ಬ್ಯಾನರ್ ಹಿಡಿದು ಪ್ರದರ್ಶನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.