ಸುದ್ದಿಬಿಂದು ಬ್ಯೂರೋ
ಕಾರವಾರ : ಕಳೆದ ವಿಧಾಸಭಾ ಚುನಾವಣೆಯಲ್ಲಿ ನಾನು ಜೆಡಿಎಸ್ ನಲ್ಲಿದ್ದರು ಬೇರೆ ಪಕ್ಷಕ್ಕೆ ಸೇರಬೇಕು ಎಂದು ಸಾಕಷ್ಟು ಒತ್ತಡ ಇತ್ತು.ಆದರೂ ನಾನು ಸೇರಿರಲ್ಲಿ. ಈಗ ನಾನು ಜೆಡಿಎಸ್ ‌ನಲ್ಲೆ ಇದ್ದೇನೆ ಅದರಲ್ಲೆ ಮುಂದುವರೆಯುವುದಾಗಿ ಮಾಜಿ ಸಚಿವ ಆನಂದ ಅಸ್ನೋಟಿಕರ್ ಹೇಳಿದ್ದಾರೆ.

ಕಾರವಾರದ ಜಿಲ್ಲಾ ಪತ್ರಿಕಾಭವನದಲ್ಲ ಕರೆದ ಸುದ್ದಿಗೋಷ್ಟಯನ್ನ ಉದ್ದೇಶಸಿ ಮಾತನಾಡಿದರು‌.ಈಗ ಜೆಡಿಎಸ್ -ಬಿಜೆಪಿ ಮೈತ್ರಿ ಆಗಿದೆ.ಈಗಾಗಲೆ ಕುಮಾರಸ್ವಾಮಿ ಅವರನ್ನ ಭೇಟಿಯಾಗಿ ಜೆಡಿಎಸ್ ನಲ್ಲೆ ಮುಂದುವರೆಯುವುದಾಗಿ ಹೇಳಿದ್ದೆ.ಲೋಕಸಭಾ ಚುನಾವಣೆಯಲ್ಲ ನಾನು ಕೂಡ ಆಕಾಂಕ್ಷಿ ಇದ್ದೇನೆ.ಒಂದು ವೇಳೆ ಅನಂತಕುಮಾರ ಹೆಗಡೆ ಅವರಿಗೆ ಬಿಜೆಪಿಯಿಂದ ಟಿಕೆಟ್ ಆದರೆ ನಾನು ಅವರ ಬೆಂಬಲಿಸುತ್ತೇನೆ ಎಂದಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಮಾಜಿ ಶಾಸಕಿ ರೂಪಾಲಿ ನಾಯ್ಕ ಸ್ಪರ್ಧಿಸಿದ್ದಲ್ಲಿ ಬೆಂಬಲಿಸುತ್ತಿರಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅಸ್ನೋಟಿಕರ ರೂಪಾಲಿ ನಾಯ್ಕೆರಿಗೆ ಜಿಲ್ಲಾ ಪಂಚಾಯತ್ ಸದಸ್ಯರಾಗೂ ಲಾಯಕ್ ಇಲ್ಲ. ಆದರೆ ಈಗ ಜೆಡಿಎಸ್ ಬಿಜೆಪಿ ಒಂದಾಗಿರುವುದರಿಂದ ಅವರನ್ನ ಬೆಂಬಲಿಸುವುದು ತಪ್ಪಲ್ಲ.ಆದರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ರೂಪಾಲಿ ನಾಯ್ಕರಿಗೆ ಟಿಕೇಟ್ ನೀಡುವುದಿಲ್ಲ ಎಂಬುವುದು ಸತ್ಯ. ಬಿಜೆಪಿ ಪಕ್ಷದಿಂದ ಅನಂತಕುಮಾರ ಹೆಗಡೆಯವರೇ ಸ್ಪರ್ಧಿಸುತ್ತಾರೆ. ಹಾಗು ಅವರಿಗೆ ನನ್ನ ಸಂಪೂರ್ಣ ಬೆಂಬಲ ಇದೆ. ಅವರು ಸ್ಪರ್ಧಿಸುವುದಿಲ್ಲ ಎಂಬಂತಾದರೆ ನಾನು ಆಕಾಂಕ್ಷಿಯಾಗಿದ್ದೇನೆ ಎಂದು ಅಸ್ನೋಟಿಕರ ಹೇಳಿದರು.