suddibindu.in
ಕಾರವಾರ : ಲೋಕಸಭಾ ಚುನಾವಣೆಗೆ ಕೆಲವೇ ದಿನಗಳು ಮಾತ್ರ ಬಾಕಿ ಇದ್ದು, ಕಾಂಗ್ರೆಸ್ ಈಗಾಗಲೇ ಮಹಿಳಾ ಅಭ್ಯರ್ಥಿಯನ್ನ ಕಣಕ್ಕಿಳಿಸಿದ್ದು, ಬಿಜೆಪಿ ಮಾತ್ರ ಇನ್ನೂ ಅಭ್ಯರ್ಥಿ ಘೋಷಣೆ ಮಾಡದೆ ಬಾಕಿ ಉಳಿಸಿಕೊಂಡಿದ್ದು, ಅಚ್ಚರಿ ಅಭ್ಯರ್ಥಿಯನ್ನ ಕಣಕ್ಕಿಳಿಸುವ ನಿರೀಕ್ಷೆ ಇದೆ.
ಕೆನರಾ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಮಹಿಳಾ ಅಭ್ಯರ್ಥಿಯಾಗಿರುವ ಅಂಜಲಿ ನಿಂಬಾಳ್ಕರ್ ಅವರನ್ನ ಕಣಕ್ಕಿಳಿಸಿದೆ. ಆದರೆ ಬಿಜೆಪಿ ಮಾತ್ರ ಇನ್ನೂ ತನಕ ಘೋಷಣೆ ಮಾಡಿಲ್ಲ. ಹಾಲಿ ಸಂಸದ ಅನಂತಕುಮಾರ ಹೆಗಡೆ ಬದಲಿಗೆ ಈ ಬಾರಿ ಹೊಸಬರನ್ನ ಕಣಕ್ಕಿಳಿಸುವ ಬಗ್ಗೆ ಬಿಜೆಪಿ ಮುಂದಾಗಿತ್ತು.ಒಮ್ಮೆ ಅನಂತಕುಮಾರ ಹೆಗಡೆ ಅವರನ್ನ ಕೈ ಬಿಟ್ಟಿದ್ದು ಹೌದೆ ಆದಲ್ಲಿ ಅವರ ಬದಲಿಗೆ ಮಾಜಿ ಶಾಸಕ ವಿಶ್ವೇಶ್ವರ ಹೆಗಡೆ ಕಾವೇರಿ ಇಲ್ಲವೆ ಶಶಿಭೂಷಣ್ ಹೆಗಡೆ ಅವರನ್ನ ಕಣಕ್ಕಿಳಿಸುವ ಬಗ್ಗೆ ಬಿಜೆಪಿ ಹೈಕಮಾಂಡ ಚಿಂತನೆ ಮಾಡಿತ್ತು.
ಇದನ್ನೂ ಓದಿ
- ಲಿಂಗಾಯತ ಶಾಸಕರು ಬಿಜೆಪಿ ತೊರೆದು ಬನ್ನಿ : ಜಯಮೃತ್ಯುಂಜಯ ಸ್ವಾಮೀಜಿ ಕರೆ
- Today gold and silver rate |ಚಿನ್ನದ ಬೆಲೆಯಲ್ಲಿ ಗಣನೀಯ ಏರಿಕೆ : ಬಂಗಾರ ಖರೀದಿಸುವವರಿಗೆ ಬಿಗ್ ಶಾಕ್
- ಮಾ.30ಕ್ಕೆ ಬರ್ಗಿಯಲ್ಲಿ ಸುಲುಗಾಯಿ ಪಂದ್ಯಾವಳಿ
ಈ ನಡುವೆ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಟಿಕೆಟ್ ನೀಡಲಾಗುತ್ತದೆ ಎನ್ನುವ ಬಗ್ಗೆ ಸುದ್ದಿ ಕೇಳಿ ಬರುತ್ತಿದ್ದಂತೆ. ಕಾಗೇರಿ ಅವರಿಗೆ ಟಿಕೆಟ್ ನೀಡಿದಲ್ಲಿ ಅನಂತ್ ಬೆಂಬಲಿಗರು ವಿರೋಧ ವ್ಯಕ್ತಪಡಿಸಲು ಅನಂತ್ ಬೆಂಬಲಿಗರು ಮುಂದಾಗಿದ್ದಾರೆ.ಹೀಗಾಗಿ ಕಾಗೇರಿಯವರ ಹೆಸರು ಕೇಳಿ ಬರುತ್ತಿದ್ದಂತೆ ಪಕ್ಷದೊಳಗೆ ವಿರೋಧ ಆರಂಭವಾಗಿರುವ ಕಾರಣ ಸದ್ಯ ಅವರ ಹೆಸರನ್ನ ಅರ್ಧಕ್ಕೆ ಕೈ ಬಿಡಲಾಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಈಗಾಗಲೇ ರಾಜ್ಯದ ಕೆಲವೆಡೆಯಲ್ಲಿ ಹಾಲಿ ಸಂಸದರಿಗೆ ಟಿಕೆಟ್ ತಪ್ಪುಸಿರುವುದು ‘ಬಿಜೆಪಿ ನಾಯಕರ ಕೈಸುಟ್ಟಂತಾಗಿದೆ’ ಆಗಲ್ಲೆ. ಕೆಲವು ಕ್ಷೇತ್ರಗಳಲ್ಲಿ ಹಾಲಿಗಳನ್ನ ಬದಲಾವಣೆ ಮಾಡಿರುವುದು ಇದೀಗ ಇನ್ನೂ ಹೆಸರು ಘೋಷೆಯಾಗದ ಕ್ಷೇತ್ರಗಳ ಹಾಲಿ ಸಂಸದರಿಗೆ ಆತಂಕ ತಂದೊಡ್ಡಿದೆ. ಹೀಗಾಗಿ ಹೈಕಮಾಂಡ್ ನಿರ್ಧಾರ ಏನಿರಲಿದೆ ಎನ್ನುವುದು ಪಕ್ಷದ ಕಾರ್ಯಕರ್ತರಷ್ಟೇ ಅಲ್ಲದೇ ಮುಖಂಡರುಗಳ ಕುತೂಹಲಕ್ಕೂ ಕಾರಣವಾಗಿದೆ
ಇನ್ನೂ ಕಾಗೇರಿಯರಿಗೆ ಟಿಕೆಟ್ ನೀಡಿದರೆ ಅನಂತ ಬೆಂಬಲಿಗರು ವಿರೋಧ ಮಾಡಿದ್ದರೆ ಅತ್ತ ಅನಂತಕುಮಾ ಅವರನ್ನ ಕಣಕ್ಕಿಳಿಸಿದೃ ಕಾಗೇರಿ ಬಣ ಸಹ ವಿರೋಧ ಹೊರಹಾಕುವ ಸಾಧ್ಯತೆಯನ್ನ ಯಾವ ಕಾಣಕ್ಕೂ ತಳ್ಳಿ ಹಾಕುವಂತಿಲ್ಲ. ಹೀಗಾಗಿ ಈ ಇಬ್ಬರಲ್ಲಿ ಯಾರಿಗೆ ಟಿಕೆಟ್ ನೀಡಿದರೂ ಕೂಡ ದೊಡ್ಡ ಮಟ್ಟದಲ್ಲಿ ವಿರೋಧ ಉಂಟಾಗಬಹುದು ಎನ್ನುವುದು ಈಗಾಗಲೇ ಬಿಜೆಪಿ ನಾಯಕರ ಗಮನಕ್ಕೂ ಸಹ ಬಂದಿದೆ.
ಹೀಗಾಗಿ ಇಬ್ಬರಲ್ಲಿ ಯಾರಿಗೆ ಟಿಕೆಟ್ ನೀಡಿದರೂ ವಿರೋಧಗಳು ಉಂಟಾಗಿ ಕಾಂಗ್ರೆಸ್‌ಗೆ ಲಾಭವಾಗಬಹುದು ಎನ್ನುವ ಲೆಕ್ಕಾಚಾರದಲ್ಲಿರುವ ಬಿಜೆಪಿ ನಾಯಕರು ಹೊಸಬರಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೆ ಕೊನೆ ಕ್ಷಣದವರಗೆ ಅಳೆದು ತೂಗಿ ನೋಡುತ್ತಿರುವ ಬಿಜೆಪಿ ಹೈಕಮಾಂಡ ಅನಂತಕುಮಾರ ಹೆಗಡೆ ಅವರನ್ನೆ ಮತ್ತೊಮ್ಮೆ ಕಣಕ್ಕಿಳಿಸಿದರೂ ಯಾರೂ ಕೂಡ ಅಚ್ಚರಿ ಪಡಬೇಕಾಗಿಲ್ಲ..