ಕಾರವಾರ: ಇನ್ನೇನು ಕೆಲ ತಿಂಗಳಲ್ಲಿ‌ ಲೋಕಸಭಾ ಚುನಾವಣೆ ( Lok Sabha Elections) ನಡೆಯಲ್ಲಿದ್ದು ಕಾಂಗ್ರೆಸ್ (Congress) ಸಹ ಇಂಡಿಯಾ ಒಕ್ಕೂಟದ (Union of India,) ಮೂಲಕ ಹೇಗಾದರೂ ಮಾಡಿ ನಮೋ ಆಡಳಿತ ಕೊನೆಗಾಣಿಸಲು ಕೈ ನಾಯಕರು ಮುಂದಾಗಿದ್ದಾರೆ.

ಗ್ಯಾರಂಟಿ ಯೋಜನೆಗಳ ಮೂಲಕ ಕಾಂಗ್ರೆಸ್ ಅಧಿಕಾರದ ಗದ್ದುಗೆ ಹಿಡಿದಿರುವ ಕಾಂಗ್ರೆಸ್ ಪಕ್ಷಕ್ಕೆ ಲೋಕಸಭಾ ಚುನಾವಣೆಯಲ್ಲಿ ರಣಕಹಳೆ ಮೊಳಗಿಸಲು ಕಾಂಗ್ರೆಸ್ ಸಜ್ಜಾಗಿದೆ.

ಅ.29ರಂದು ಸಚಿವರಾದ ಸತೀಶ ಜಾರಕಿಹೊಳಿ(Satish Jarakiholi) ಹಾಗೂ ಎಚ್.ಕೆ.ಪಾಟೀಲ ಉತ್ತರಕನ್ನಡ(uttara Kannada)ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದಾರೆ. 29ರಂದು ಅಂಕೋಲಾದ ನಾಡವರ ಸಭಾಭವನದಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ಸಂಬಂಧಿಸಿದ ಕಾಂಗ್ರೆಸ್ ಪೂರ್ವಭಾವಿ ಸಭೆಯಲ್ಲಿ ಇಬ್ಬರೂ ನಾಯಕರು ಪಾಲ್ಗೊಳ್ಳಲಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಪ್ರತಿ ಕ್ಷೇತ್ರಕ್ಕೂ ಓರ್ವ ಸಚಿವರನ್ನ ವೀಕ್ಷಕನನ್ನಾಗಿ ನೇಮಿಸಲಾಗಿದ್ದು, ಉತ್ತರಕನ್ನಡ ವೀಕ್ಷಕರನ್ನಾಗಿ ಎಚ್.ಕೆ.ಪಾಟೀಲರನ್ನ ನೇಮಿಸಲಾಗಿದ್ದು, ಲೋಕಸಭಾ ಚುನಾವಣೆ ಗೆಲ್ಲಲ್ಲು ಯಾವೇಲ್ಲಾ ರಣತಂತ್ರ ರೂಪಿಸಬಹುದು ಎನ್ನುವ ಬಗ್ಗೆ ಜಿಲ್ಲಾ ಕಾಂಗ್ರೆಸ್ ಮುಖಂಡರ ಜೊತೆ ಚರ್ಚೆ ನಡೆಯಲಿದೆ.