ಕಾರವಾರ: ಮಂಗಳೂರಿನಿಂದ ಗೋವಾಕ್ಕೆ ತೆರಳುವ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲ್ವೆಗೆ ಮಂಗಳೂರಿನಲ್ಲಿ ಚಾಲನೆಗೆ ನೀಡಲಾಗಿದ್ದು, ಮಂಗಳೂರು, ಉಡುಪಿಯಿಂದ ಯಾವುದೆ ಸಮಸ್ಯೆಯಿಂದಲ್ಲೆ ಸಂಚರಿಸಿ ಬಂದ್ ರೈಲ್ವೆ ಕಾರವಾರ ನಿಲ್ದಾಣಕ್ಕೆ ತಲುಪುತ್ತಿದ್ದಂತೆ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರು ಕಿತ್ತಾಡಿಕೊಂಡ ಪ್ರಸಂಗ ನಡೆದಿದೆ.

ಮಂಗಳೂರಿನಿಂದ ಕಾರವಾರ ಮಾರ್ಗವಾಗಿ ಸಂಚರಿಸುವ ವಂದೇ ಭಾರತ್ ರೈಲ್ವೆ ಸ್ವಾಗತಕ್ಕೆ ಕಾರವಾರದ ಶಿರಾವಾಡ ರೈಲ್ವೆ ನಿಲ್ದಾಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇನ್ನೂ ಈ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಹಾಗೂ ಬಿಜೆಪಿ ಎರಡು ಪಕ್ಷದ ಕಾರ್ಯಕರ್ತರು ಆಗಮಿಸಿದ್ದರು. ಬಿಜೆಪಿ ಕಾರ್ಯಕರ್ತರು ಪಕ್ಷ ಚಿಹ್ನೆ ಇರುವ ಶಾಲು ಹಾಕಿಕೊಂಡು ಬಂದು ಜಯಘೋಷ ಹಾಕುತ್ತಿದ್ದರು. ಈ ವೇಳೆ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಆಗಮಿಸಿದ ಕಾಂಗ್ರೆಸ್ ಶಾಸಕ ಸತೀಶ ಸೈಲ್ ಅವರು ಇದು ಯಾವುದೇ ಪಕ್ಷದ ಕಾರ್ಯಕ್ರಮವಲ್ಲ. ಪಕ್ಷದ ಜಯಷೋಷ ಹಾಗೂ ಚಿಹ್ನೆ ಇರುವ ಶಾಲು ಹಾಕಿಕೊಂಡು ಬರುವದು ಸರಿಯಲ್ಲ. ಈ ರೀತಿ ಆದರೆ ತಾವು ವೇದಿಕೆಗೆ ಆಗಮಿಸುವುದಿಲ್ಲ‌ ಎಂದು ರೈಲ್ವೆ ಅಧಿಕಾರಿಗಳಿಗೆ ತಿಳಿಸಿದ್ದರು.

ಈ‌ ಘೋಷಣೆ ಕೂಗಾಟ,ಕಿತ್ತಾಟ ಯಾವುದು ತಣ್ಣಗಾಗಿಲ್ಲ..ಕಿತ್ತಾಟದಿಂದಾಗಿ ರೈಲ್ವೆ ನಿಲ್ದಾಣದಲ್ಲಿ ನಡೆಯಬೇಕಾದ ವೇದಿಕೆ ಕಾರ್ಯಕ್ರಮ ಸಹ ಮುಂದುವರೆಗೆಯದೆ ಅರ್ಧಕ್ಕೆ ನಿಂತುಹೋಗುವ ಪರಿಸ್ಥಿತಿ ಉಂಟಾಯಿತು. ಕೆಲ ಸಮಯ ಎರಡು ಪಕ್ಷದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಉಂಟಾಗುವಂತಾಯಿತು. ಇನ್ನೂ ಮಂಗಳೂರಿಂದ ಇದೆ ರೈಲ್ವೆಯಲ್ಲಿ ಬಂದ ಅನೇಕರು ಕಾರವಾರದಲ್ಲಿ ನಡೆದ ಕಿತ್ತಾಟವನ್ನ ನೋಡಿ ಅಭಿವೃದ್ಧಿಯಲ್ಲೂ ಇದೆಂಥಾ ಕಿತ್ತಾಟ ಎಂದು ಆಡಿಕೊಳ್ಳುತ್ತ ಹೊರಟ ಪ್ರಸಂಗ ಕಂಡು ಬಂತು.
ಕಾರ್ಯಕ್ರಮಕ್ಕೆ ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರು ಆಗಮಿಸಿದ್ದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಅರ್ಧ ಗಂಟೆಗಳ ಕಾಲ ಘೋಷಣೆ ಹಾಕಿದೆ. ಅದೇ ಪ್ರಕಾರ ಶಾಸಕ ಸತೀಶ್ ಸೈಲ್ ಅವರು ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಹ ಘೋಷಣೆ ಹಾಕಿದರು. ಇದರಿಂದ ಎರಡು ಪಕ್ಷದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.

ಈ ವೇಳೆ ಅಧಿಕಾರಿಗಳು ಅಧಿಕಾರಿಗಳು ರಾಜಕೀಯ ಮಾಡದಂತೆ ಮುಖಂಡರಿಗೆ ಮನವಿ ಮಾಡಿದರೂ ಪ್ರಯೋಜನವಾಗದ ಕಾರಣದ ಕಾರ್ಯಕ್ರಮ ಕೂಡ ಅರ್ಧದಲ್ಲಿಯೇ ಸ್ಥಗಿತಗೊಂಡಿತು. ಜಿ.ಪಂ ಸಿಇಓ ಈಶ್ವರಕಾಂದೂ, ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಹಾಗೂ ರೈಲ್ವೆ ಇಲಾಖೆ ಅಧಿಕಾರಿಗಳು ಮನವಿ ಮಾಡಿದರು ಪ್ರಯೋಜನವಾಗಿಲ್ಲ.
ಬಳಿಕ ಇಬ್ಬರು ನಾಯಕರು ಬೆಂಬಲಿಗರೊAದಿಗೆ ರೈಲು ಹತ್ತಿ ಪ್ರಯಾಣಿಕರಿಗೆ ಶುಭಕೋರಿದರು. ಪೊಲೀಸರು ಎರಡು ಪಕ್ಷದವರನ್ನು ಸಮಾಧಾನ ಪಡಿಸಿದರು. ಬಳಿಕ ಮಾತನಾಡಿದ ಶಾಸಕ ಸತೀಶ್ ಸೈಲ್ ಬಿಜೆಪಿಯರು ಸರ್ಕಾರಿ ಕಾರ್ಯಕ್ರಮದಲ್ಲಿ ಪಕ್ಷದ ಸಾಲು ಹಾಕಿಕೊಂಡು ರಾಜಕೀಯ ಮಾಡುತ್ತಿದ್ದಾರೆ. ಶಾಸಕ ಸತೀಶ್ ಸೈಲ್ ಆಕ್ಷೇಪಿಸಿದರು.ಕಾಣದ ಸಂಸದ ಅನಂತಕುಮಾರ್ ಹೆಗಡೆಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ಕಾರವಾರದಲ್ಲಿ ಚಾಲನೆ ನೀಡಬೇಕಿದ್ದ ಸಂಸದ ಅನಂತಕುಮಾರ್ ಹೆಗಡೆ ಈ ಸಂದರ್ಭದಲ್ಲಿ ಗೈರಾಗಿದ್ದರು. ಇದರಿಂದ ಸ್ಥಳೀಯ ಹಾಲಿ ಶಾಸಕ ಸತೀಶ್ ಸೈಲ್ ರೈಲಿಗೆ ಹಸಿರು ನಿಶಾನೆ ಕೋರಿದರು.

ಬಳಿಕ ರೈಲಿನಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರಿಗೆ ಸಿಹಿ ನೀಡಿ ಪ್ರಯಾಣಕ್ಕೆ ಶುಭ ಕೋರಿದರು. ಅಲ್ಲದೆ ಮಂಗಳೂರಿನಿಂದ ಸಂಸದ ನಳೀನ್ ಕುಮಾರ್ ಕಟೀಲು ಹಾಗೂ ಶಾಸಕ ವೇದವ್ಯಾಸ್ ಕಾಮತ್ ರೈಲಿನಲ್ಲಿಯೇ ಪಕ್ಷದ ಕಾರ್ಯಕರ್ತರು ಪ್ರಯಾಣಿಕರೊಂದಿಗೆ ಸಂಚಾರ ಮಾಡಿ ಜನರೊಂದಿಗೆ ಸಂಭ್ರಮಿಸಿದರು.