ನವದೆಹಲಿ : ನಿನ್ನೆ ಸಂಜೆ 6ಗಂಟೆ ನಾಲ್ಕು ನಿಮಿಷಕ್ಕೆ‌ ಭಾರತೀಯರಾಗಿದ್ದ ನಮ್ಮಗೆಲ್ಲರಿಗೂ ಆಗಿರೋ ಆ‌ ಸಂತೋಷಕ್ಕೆ ಲೆಕ್ಕವೆ ಇಲ್ಲ. ಚಂದಿರನ‌‌ ನೆಲದಲ್ಲಿ ವಿಕ್ರಂ‌ ಲ್ಯಾಂಡ್‌ ಆಗಿದ್ದು, ಇದು ಇನ್ನೂ ಹದಿನಾಲ್ಕು ದಿನ ಚಂದಿರ‌ನ ಸುತ್ತ‌ಚಲಿಸಲಿದ್ದು, ನಮ್ಮ‌ದೇಶದ‌ ಮುದ್ರೆಯನ್ನ ಶಾಶ್ವತವಾಗಿ ಒತ್ತಿಬರಲಿದೆ.

ಈಗಾಗಲೇ ವಿಕ್ರಂನಿಂದ ಹೊರಬಂದಿ ಚಂದ್ರನ ನೆಲದಲ್ಲಿ ಓಡಾಡುತ್ತಿರುವ ರೋವರ್ ವೆಹಿಕಲ್ ಗಳು ಬೇರೆ ಗ್ರಹಗಳಿಗೆ ಹೋದಾಗ ಓಡಾಡಿಕೊಂಡು ಬರುತ್ತವೆ. ಆದರೆ ನಮ್ಮ ಪ್ರಜ್ಞಾನ್ ಕೇವಲ ಓಡಾಡೋದಿಲ್ಲ.ತಾನು ಓಡಾಡಿದ ಪ್ರತಿಯೊಂದು ಸ್ಥಳದಲ್ಲೂ ಭಾರತದ ಬಾವುಟ ನೆಟ್ಟು ಬೇಲಿ ಹಾಕಿ ಬರಲಿದೆ. ಇನ್ಮುಂದೆ ಆ ಜಾಗದೊಳಗೆ ಯಾರೇ ಕಾಲಿಟ್ರೂ ಅವ್ರು ಭಾರತದ ನೆಲದಲ್ಲಿ ಕಾಲಿಟ್ಟ ಹಾಗೆ.

ಹೇಗೆ ಅಂದ್ರೆ.ಪ್ರಜ್ಞಾನ್ ನೌಕೆಯ ಹಿಂದಿನ ಎರಡೂ ಚಕ್ರಗಳಲ್ಲೂ, ಇಸ್ರೋ ಲೋಗೋ ಹಾಗೂ ಭಾರತದ ರಾಷ್ಟ್ರೀಯ ಲಾಂಛನವನ್ನು ಉಬ್ಬು ಮುದ್ರೆಯನ್ನು ರಚಿಸಿ ಕಳಿಸಲಾಗಿದೆ.(ರಾಷ್ಟ್ರೀಯ) ಮುಂದಿನ ಹದಿನಾಲ್ಕು ದಿನ, ಚಂದ್ರನ ನೆಲದಲ್ಲಿ ಎಲ್ಲೆಲ್ಲಾ ಪ್ರಜ್ಞಾನ್ ಓಡಾಡುತ್ತೋ, ಅಲ್ಲೆಲ್ಲಾ ಭಾರತದ ಲಾಂಛನವನ್ನು ಮುದ್ರೆ ಒತ್ತುತ್ತಾ ಹೋಗುತ್ತಿರುತ್ತೆ.ಸಿಂಹವೊಂದು ತನ್ನ ಪ್ರದೇಶವನ್ನು ಮಾರ್ಕ್ ಮಾಡುತ್ತಾ ಸಾಗುವಂತೆ, ಪ್ರಜ್ಞಾನ್ ಸಾಗಿದ ಅಷ್ಟೂ ಜಾಗದಲ್ಲೂ ನಮ್ಮ ರಾಷ್ಟ್ರೀಯ ಲಾಂಛನದಲ್ಲಿರೋ ನಾಲ್ಕು ಸಿಂಹಗಳದ್ದೇ ಘರ್ಜನೆ ಮಾಡುತ್ತಾ ಹೋಗುತ್ತದೆ.

ಚಂದ್ರ ಇರೋವರೆಗೂ ಇಸ್ರೋ ಹೆಸರು ಹಾಗೂ ನಮ್ಮ ರಾಷ್ಟ್ರೀಯ ಲಾಂಛನದ ಮುದ್ರೆಗಳು ಚಂದ್ರನ ನೆಲದಲ್ಲಿರುತ್ತೆ.ಯಾಕಂದ್ರೆ ಚಂದ್ರನ ನೆಲದಲ್ಲಿ ಗುರುತುಗಳು ಅಳಿಸೋದಿಲ್ಲ.ಈಗಾಗಲೆ ಚಂದ್ರ ಮೇಲೆ‌ ನಮ್ಮ ದೇಶದ‌ ರಾಷ್ಟ್ರೀಯ ಲಾಂಛನದ ಮುದ್ರೆ‌ ಒತ್ತಿಯಾಗಿದೆ. ಇದು ನಮ್ಮ ಭಾರತದ ಹೆಮ್ಮೆ..