ಸುದ್ದಿಬಿಂದು ಬ್ಯೂರೋ
ಪುತ್ತೂರು : ಏಕಾಏಕಿ ಬೈಕ್ ಮೇಲೆ ಬಂದ ಮೂವರು ಯುವತಿ ಓರ್ವಳ ಮೇಲೆ ಚಾಕು ಇರಿದು ಆಕೆಯನ್ನ ಕೊಲೆಗ. ಯತ್ನಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಹಿಂಭಾಗದ ಮಹಿಳಾ ಪೊಲೀಸ್ ಠಾಣೆಯ ಬಳಿ ನಡೆದಿದೆ.

ಗೌರಿ (20) ಎನ್ನಲಾಗುತ್ತಿದ್ದು,ಗಂಭೀರ ಗಾಯಗೊಂಡ ಯುವತಿ ವಿಟ್ಲ ಮೂಲದವಳು ಎಂದು ತಿಳಿದುಬಂದಿದೆ. ಕೊಲೆಗೆ ಯತ್ನಿಸಿದ ಯುವಕರು ಪರಾರಿಯಾಗಿದ್ದಾನೆ ಎನ್ನಲಾಗಿದೆ. ಚಾಕು ಇರಿತದಿಂದಾಗಿ ಯುವತಿ ಗಂಭೀರವಾಗಿ ಗಾಯಗಂಡಿದ್ದು, ಆಕೆಯನ್ನ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಹಲ್ಲೆಯ ಕುರಿತು ಇದುವರೆಗೆ ನಿಖರ‌ವಾಗಿರುವ ಕಾರಣ ತಿಳಿದುಬಂದಿಲ್ಲ. ಹಲ್ಲೆ ನಡೆಸಿ ಪರಾರಿಯಾಗಿರುವ ಯುವಕರ ಬಂಧನಕ್ಕಾಗಿ ಪೊಲೀಸರು ಕಾರ್ಯಚರಣೆ ನಡೆಸುತ್ತಿದ್ದಾರೆ.