ಸುದ್ದಿಬಿಂದು ಬ್ಯೂರೋ
ಪುತ್ತೂರು : ಪ್ರೀಯಕರರಿಬ್ಬರ ನಡುವೆ ನಡೆದ ಗಲಾಟೆಯಿಂದ ಪ್ರೀಯಕರನೆ ತನ್ನ ಪ್ರೀಯತಮೆಗೆ ಚಾಕು ಇರಿದು ಹತ್ಯೆ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ. ಪುತ್ತೂರಿನ ಮಹಿಳಾ ಪೊಲೀಸ್ ಠಾಣೆಯ ಸಮೀಪದಲ್ಲ ಇಂದು ಗುರುವಾರ ನಡೆದಿದೆ.

ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದ ನಿವಾಸಿಯಾಗಿರುವ ಗೌರಿ(19) ಎಂಬಾಕೆ ತನ್ನ ಪ್ರೀಯಕರನ ಕೈಯಿಂದ‌ ಹತ್ಯೆಯಾಗಿದ್ದಾಳೆ. ಅದೆ ಗ್ರಾಮದ ಯುವಕ ಪದ್ಮರಾಜ್ ಎಂಬಾತನೆ ತಾನು ಪ್ರೀತಿಸುತ್ತಿದ್ದ ಯುವತಿಯನ್ನ. ಹತ್ಯೆ ಮಾಡಿದ ಆರೋಪಿಯಾಗಿದ್ದಾನೆ. ಗೌರಿ ಹಾಗೂ ಪದ್ಮರಾಜ್ ಪರಸ್ಪರ ಪ್ರೀತಿಸುತ್ತಿದ್ದರು. ಈಕೆ‌ ಕಳೆದ ಪಿಯುಸಿ ವಿದ್ಯಾಭ್ಯಾಸ ಮುಗಿದ ಬಳಿಕ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು.

ಇವರಿಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಕೆಲ ತಿಂಗಳ ಹಿಂದೆ ಇಬ್ಬರ ನಡುವೆ ಜಗಳ ಉಂಟಾಗಿ ಯುವತಿ ವಿಟ್ಲಾ ಪೊಲೀಸ್ ಠಾಣೆಯಲ್ಲಿ ದೂರು ಸಹ ನೀಡಿದ್ದಳು. ಇಂದು ಸಹ ಆಕೆ ಪುತ್ತೂರಿನ ಬಸ್ ನಿಲ್ದಾಣದಲ್ಲಿದ್ದಾಗ ಇಬ್ಬರ ನಡುವ ಗಲಾಟೆ ಆಗಿದೆ ಎನ್ನಲಾಗಿದೆ. ಹೀಗಾಗಿ ಯುವತಿ ಅಲ್ಲೆ ಹತ್ತಿರದಲ್ಲಿ ಇರುವ ಮಹಿಳಾ ಪೊಲೀಸ್ ಠಾಣೆಗೆ ನಡೆದುಕೊಂಡು ಹೋಗುತ್ತಾಗ ಆಕೆಯನ್ನ ಹಿಂಬಾಲಿಸಿಕೊಂಡು ಬಂದ ಪ್ರೀಯಕರ ಪದ್ಮರಾಜ್ ಮಹಾಲಿಂಗೇಶ್ವರ ದೇವಸ್ಥಾನದ ರಸ್ತೆಯಲ್ಲಿ ಆಕೆಯನ್ನ ನೆಲಕ್ಕೆ ಕೆಡವಿ ಮೂರು ನಾಲ್ಲು ಬಾರಿ ಚಾಕುವಿನಿಂದ ಆಕೆಯ ಕುತ್ತಿಗೆಗೆ ಚುಚ್ಚಿದ್ದಾನೆ ಎನ್ನಲಾಗಿದೆ.

ತಕ್ಷಣ ಅಲ್ಲಿದ್ದ ಆತ ಬೈಕ್ ಸಹ ಅಲ್ಲೆ ಬಿಟ್ಟು ಪರಾರಿಯಾಗಿದ್ದಾನೆ‌. ಚಾಕು ಇರಿತಕ್ಕೆ ಒಳಗಾಗಿದ್ದ ಯುವತಿ ಗೌರಿಯನ್ನ ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತ್ತಾದರೂ. ಆಕೆ ಚಿಕಿತ್ಸೆಗೂ ಮೊದಲೆ ಪ್ರಾಣ‌ಬಿಟ್ಟಿದ್ದಾಳೆ. ಇನ್ನೂ ಕೊಲೆ ಆರೋಪಿ ಪದ್ಮರಾಜ್ ಗೆ ಬಂಟ್ವಾಳದಲ್ಲಿ ಬಂಧಿಸಲಾಗಿದೆ.