ಸುದ್ದಿಬಿಂದು ಬ್ಯೂರೋ
ಕುಮಟಾ : ಬಾಂಬ್ ಬ್ಲಾಸ್ಟ್‍ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸತ್ತಿದ್ದರೆಂದು ಮಾತಿನ ಹಿಡಿತ ತಪ್ಪಿದ ಅನಂತಕುಮಾರ ಹೆಗಡೆ ತಮ್ಮ ಭಾಷಣದಲ್ಲೇ ರಾಹುಲ್ ಗಾಂಧಿ ಅವರನ್ನ ಸಾಯಿಸಿದ್ದಾರೆ.
ಅವರು ಸಂಸದರಾದ ನಾಲ್ಕುವರೆ ವರ್ಷದ ಬಳಿಕ ಇದೀಗ ಹೊರಬಂದು ಬೆಂಕಿ ಬಾಷಣ ಆಭಿಸಿದ್ದಾರೆ.ಇಂದು ಪಕ್ಷದ ಕಾರ್ಯಕ್ರಮದ ಅಂಗವಾಗಿ ಉತ್ತರಕನ್ನಡ ಜಿಲ್ಲೆಯ ಕುಮಟಾಕ್ಕೆ ಆಗಮಿಸಿದ ಅನಂತಕುಮಾರ ಹೆಗಡೆ ಬಾಂಬ್ ಬ್ಲಾಸ್ಟ್‍ನಲ್ಲಿ ಸತ್ತಿದ್ದು ರಾಹುಲ್ ಗಾಂಧಿ ಎಂದು ಕೈ ಮುಗಿದ ಅನಂತಕುಮಾರ, ಇಂದಿರಾಗಾಂಧಿ ಅಂದಿನ ಪ್ರಧಾನಿಯಾಗಿದ್ದಾಗ ಗೋ ಹತ್ಯೆ ನಿಷೇಧದ ಬಗ್ಗೆ ದೊಡ್ಡ ಆಂದೋಲನ ನಡೆದಿತ್ತು, ಆಂದೋಲನದಲ್ಲಿ ಹತ್ತಾರು ಸಂತರೂ ಸತ್ತರು, ಗೋಲಿಬಾರ್ ಕೂಡಾ ನಡೆಯುವಂತಾಗಿತ್ತು.
ಇಂದಿರಾಗಾಂಧಿ ಸಮ್ಮುಖದಲ್ಲಿ ಈ ಹತ್ಯೆ ನಡೆದು ನೂರಾರು ಗೋವುಗಳನ್ನೂ ಗುಂಡಿಟ್ಟು ಕೊಲ್ಲಲಾಯಿತು. ದೊಡ್ಡ ತಪಸ್ವಿ ಕರಪಾತ್ರಿ ಮಹಾರಾಜರು ಇಂದಿರಾಗಾಂಧಿ ಅವರಿಗೆ ಶಾಪ ಕೊಟ್ಟಿದ್ದರು. ಗೋಪಾಷ್ಠಮಿ ದಿನದಂದೇ ನಿನ್ನ ಕುಲ ನಾಶವಾಗಲಿದೆ ಎಂದು ಶಾಪ ನೀಡಿದರು.ಗೋಪಾಷ್ಠಮಿಯಂದೇ ಒಬ್ಬೊಬ್ಬರು ಅಂತ್ಯವಾದರು.ವಿಮಾನ ದುರಂತದಲ್ಲಿ ಸಂಜಯ್ ಗಾಂಧಿ ಸತ್ತಿದ್ದು ಗೋಪಾಷ್ಠಮಿಯಂದು ಇಂದಿರಾಗಾಂಧಿಗೆ ಗುಂಡಿಟ್ಟು ಕೊಂದಿದ್ದು ಗೋಪಾಷ್ಠಮಿಯಂದು, ಬಾಂಬ್ ಬ್ಲಾಸ್ಟ್‍ನಲ್ಲಿ ಸತ್ತಿದ್ದರು ಎಂದು ಅನಂತಕುಮಾರ ಹೇಳಿದ್ದಾರೆ.