ಸುದ್ದಿಬಿಂದು ಬ್ಯೂರೋ
ಕುಮಟಾ : ಬಾಂಬ್ ಬ್ಲಾಸ್ಟ್ ಸಂಸ್ಕೃತಿ ಯಲ್ಲಿ ಬೆಳೆದ ಅನಂತ ಕುಮಾರ್ ಹೆಗಡೆಗೆ(MP Anantakumar Hegde) ಅರುಳು ಮರುಳು ಆದಂತಿದೆಯೇ? ಎಂದು ಉತ್ತರಕನ್ನಡ ಜಿಲ್ಲಾ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಆರ್ ಎಚ್ ನಾಯ್ಕ ಅನಂತಕುಮಾರ ಹೆಗಡೆ ಹೇಳಿಕೆ ವಿರುದ್ಧ ಕಿಡಿಕಾರಿದ್ದಾರೆ.
ಹಲವಾರು ವರ್ಷಗಳಿಂದ ಸತತವಾಗಿ ನಮ್ಮ ಕ್ಷೇತ್ರದ ಎಂಪಿ ಯಾಗಿ ಜಿಲ್ಲೆಯನ್ನು ಅಭಿವೃದ್ಧಿ ಪಡಿಸಲು ವಿಫಲರಾಗಿರುವ ಅನಂತ ಕುಮಾರ್ ಹೆಗಡೆಯವರು ಇದೀಗ ಕಪಟ ತಪಸ್ವಿಯಂತೆ ಅಚಾನಕ್ ಆಗಿ ಎದ್ದುಬಂದು ರಾಹುಲ್ ಗಾಂಧಿ ಬಾಂಬ್ ಬ್ಲಾಸ್ಟ್ ನಲ್ಲಿ ಸತ್ತಿದ್ದಾರೆಂದು ಬಾಯಿಗೆ ಬಂದಂತೆ ಬಡ ಬಡಿಸುತ್ತಿರುವುದನ್ನು ನೋಡಿದರೆ ಇವರೆಲ್ಲಾ ಸೇರಿ ರಾಹುಲ್ ಗಾಂಧಿಯವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದಾರೆಯೋ ಎನ್ನುವ ಅನುಮಾನ ಹುಟ್ಟುತ್ತಿದೆ. ಸಂಸತ್ ಸದಸ್ಯನಾಗಿ ಬೇಜವಾಬ್ದಾರಿಯುತವಾದ ಈ ರೀತಿಯ ಅವರ ಹೇಳಿಕೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ಮತ್ತು ತಕ್ಷಣ ಪೊಲೀಸ್ ಇಲಾಖೆ ಇವರ ಮೇಲೆ ಸುಮೋಮೋಟೋ ಕೇಸ್ ದಾಖಲಿಸಿ ಇವರನ್ನು ವಿಚಾರಣೆಗೆ ಒಳಪಡಿಸುವಂತೆ ಪೊಲೀಸ್ ಇಲಾಖೆ ಹಾಗೂ ಸರಕಾರವನ್ನು ಒತ್ತಾಯಪಡಿಸುತ್ತೇನೆ.
ಯಾವುದೋ ಸ್ವಾಮಿಯ ಶಾಪದಿಂದ ಇಂದಿರಾಗಾಂಧಿ ಹತ್ಯೆಯಾಯಿತು, ಮತ್ತು ಸಂಜಯ್ ಗಾಂಧಿಯ ಸಾವಾಯಿತು ಎನ್ನುವ ಇವರಿಗೆ ತನಗೆ ಬಂದ ಖಾಯಿಲೆ ದಿವಂಗತ ಡಾಕ್ಟರ್ ಚಿತ್ತರಂಜನ್ ಮತ್ತು ಭಟ್ಕಳದ ತಿಮ್ಮಪ್ಪ ನಾಯ್ಕರ ಶಾಪದಿಂದಾಗಿ ಎಂದು ಜನತೆ ಹೇಳಿಕೊಳ್ಳಬಹುದಲ್ಲವೇ ? ಚುನಾವಣೆ ಬಂದ ಸಮಯದಲ್ಲೆಲ್ಲಾ ಇವರು ಕೊಲೆ, ಸುಲಿಗೆ, ದನ ಹಿಡಿಯುವುದು, ಚರ್ಚ್ ಮೇಲೆ ದಾಳಿ ಮಾಡಿಸುವುದು, ಬಾಂಬ್ ಬ್ಲಾಸ್ಟ್ ಹಿಂದು ಮುಸ್ಲಿಂ, ಪಾಕಿಸ್ತಾನ,ಅನೈತಿಕ ಪೋಲೀಸ್ ಗಿರಿ, ಹೀಗೇ ಪ್ರಚೋದನಕಾರಿ ಕ್ರತ್ಯ ಪ್ರಚೋದನಕಾರಿ ಭಾಷಣ ಮಾಡಿ ಜನತೆಯ ದಾರಿತಪ್ಪಿಸುವದು ಬಿಟ್ಟರೆ ಯಾವತ್ತೂ ತನ್ನ ಅಧಿಕಾರಾವಧಿಯಲ್ಲಿ ತಾನು ಯಾವಯಾವ ಯೋಜನೆಗಳನ್ನು ತಂದು ನಮ್ಮ ಜಿಲ್ಲೆಯನ್ನು ಅಭಿವೃದ್ದಿ ಪಡಿಸಿದ್ದೇನೆ ಎನ್ನುವ ವಿಚಾರವು ಅವರ ಬಾಯಿಂದ ಬಂದಿಲ್ಲ.
ಈಗ ಬರಲಿರುವ ಚುನಾವಣೆಗೆ ಪಕ್ಷದಿಂದ ಸೀಟ್ ತನ್ನ ಕೈ ತಪ್ಪಿ ಹೋಗಬಹುದೆಂದು ಭಯದಿಂದ ಅರಳು-ಮರುಳು ಆದವರಂತೆ ಇವರು ಬಿಜೆಪಿ ಹೈಕಮಾಂಡ್ ಮೆಚ್ಚಿಸಲು ಹೊರಟಂತಿದೆ, ಬರಲಿರುವ ಚುನಾವಣೆಯಲ್ಲಿ ಇವರಿಗೆ ಸರಿಯಾದ ಪಾಠ ಕಲಿಸಲು ಉತ್ತರ ಕನ್ನಡದ ಜನತೆ ಸಿದ್ಧರಾಗಿದ್ದಾರೆಂದು ಆರ್ ಎಚ್ ನಾಯ್ಕ ಮಾಧ್ಯಮಗಳಿಗೆ ನೀಡಿರುವ ಲಿಖಿತವಾಗಿರುವ ಹೇಳಿಕೆ ನೀಡಿದ್ದಾರೆ.