ಸುದ್ದಿಬಿಂದು ಬ್ಯೂರೋ
ಶಿರಸಿ : ಮನೆಯ ಕಿಟಕಿಯ ಕಬ್ಬಿಣದ ಸರಳುಗಳನ್ನ ಮುರಿದು ಒಳ ನುಗ್ಗಿದ ಕಳ್ಳರು ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಚಿನ್ನಾಭರಣ ಕಳ್ಳತನ(gold jewelry theft) ಮಾಡಿಕೊಂಡು ಹೋಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಸಿ ನಗರದ ಅಯೋದ್ಯ ಕಾಲೋನಿಯಲ್ಲಿ ನಡೆದಿದೆ.
ಶಿರಸಿ ನಗರದ (Sirsi City ) ಅಯೋಧ್ಯಾ ಕಾಲೋನಿಯಲ್ಲಿರುವ ಉದ್ಯಮಿ ವಿಲಾಸ ಲೋಖಂಡೆ ಅವರ ಮನೆಯಲ್ಲಿ ಕಳ್ಳತನ ಘಟನೆ ನಡೆದಿದೆ.ಮನೆಯಲ್ಲಿ ಯಾರು ಇಲ್ಲದ ಸಮಯವನ್ನ ಗಮನಿಸಿದ ಖದೀಮರು. ಮನೆಯ ಕಬ್ಬಿಣದ ಕಿಟಕಿಯ ಕಬ್ಬಿಣದ ಸರಳುಗಳನ್ನ ಕತ್ತರಿಸಿ ಒಳನುಗ್ಗಿದ್ದಾರೆ. ಒಳ ನುಗ್ಗಿದ ಕಳ್ಳರು ಮನೆಯೊಳಗಿದ್ದ 5 ಲಕ್ಷಕ್ಕೂ ಹೆಚ್ಚಿನ ಚಿನ್ನಾಭರಣ ಕಳ್ಳತನ ಮಾಡಿದ್ದಾರೆ.
ಘಟನಾ ಸ್ಹಳಕ್ಕೆ ಹುಬ್ಬಳ್ಳಿಯ ಫಾರೆನ್ಸಿಕ್ (Hubli Forensic) ತಂಡದ ಅಧಿಕಾರಿ ಡಾ.ಮಹಾಂತೇಶ ಅವರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಇನ್ನೂ ಉತ್ತರಕನ್ನಡ ಜಿಲ್ಲಾ ಸೊಕೋ ಸೀನ್ ಆಫ್ ಕ್ರೈಂ ಆಫೀಸರ್ (Crime officer) ವಿನುತಾ ಅವರಿಂದ ಸಹ ಪರಿಶೀಲನೆ ನಡೆಸಲಾಗಿದೆ. ಇನ್ನೂ ಘಟನಾ ಸ್ಥಳಕ್ಕೆ ಡಿ.ಎಸ್.ಪಿ ಕೆ.ಎಲ್.ಗಣೇಶ, ಸಿಪಿಐ ರಾಮಚಂದ್ರ ನಾಯಕ ಭೇಟಿ ನೀಡಿದ್ದಾರೆ. ಕಾರವಾರದಿಂದ ಶ್ವಾನ ದಳ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ಬಗ್ಗೆ ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳ್ಳತನದ ಆರೋಪಿಗಳ ಬಂಧನಕ್ಕಾಗಿ ವಿಶೇವಾಗಿರುವ ತನಿಖಾ ತಂಡವನ್ನ ರಚನೆ ಮಾಡಲಾಗಿದೆ.
ಸದ್ಯ ಪಿ.ಎಸ್.ಐ ರತ್ನಾ ಕುರಿ ಹಾಗೂ ತನಿಖಾ ಪಿ.ಎಸ್.ಐ ಮಾಲಿಸಿ ಹಾಸಬಾವಿ ಅವರಿಂದ ತನಿಖೆ ನಡೆಸಲಾಗುತ್ತಿದೆ. ಕಳ್ಳತನದ ಆರೋಪಿಗಳ ಬಂಧನಕ್ಕೆ ರಚಿಸಿರುವ ವಿಶೇಷ ತಂಡದಲ್ಲಿ ಶಿರಸಿ ಗ್ರಾಮೀಣ ಠಾಣೆ ಇನಸ್ಪೇಕ್ಟರ್ ಸೀತಾರಾಮ ಪಿ, ಪಿ.ಎಸ್.ಐ ಗಳಾದ ರಾಜಕುಮಾರ, ಮಹಾಂತೇಶ ಕುಂಬಾರ, ಪ್ರತಾಪ, ದಯಾನಂದ ಜೊಗಳೇಕರ ಸೇರಿ ನುರಿತ ಅಪರಾಧ ಸಿಬ್ಬಂದಿಗಳ ತಂಡ ರಚನೆ