ಸುದ್ದಿಬಿಂದು ಬ್ಯೂರೋ ವರದಿ
ಅಂಕೋಲಾ:ಪಟ್ಟಣದ ಸಹಕಾರಿ ಬ್ಯಾಂಕಿನ ಮುಖ್ಯ ಕಚೇರಿಯಲ್ಲಿ, ಆರ್‌ಟಿಜಿಎಸ್ ಮೂಲಕ ಬೇರೆಯವರು ತೆಗೆದುಕೊಳ್ಳಬೇಕಾದ ಹಣವನ್ನು ಸೈಬರ್ ಕಳ್ಳರು ಶಾಖೆಯ ಖಾತೆ ಹ್ಯಾಕ್ ಮಾಡಿ ₹33,42,845 ಲಕ್ಷ ದೋಚಿದ್ದಾರೆ.
ಅಂಕೋಲಾ ನಗರ ಸಹಕಾರಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಪಾಂಡುರಂಗ ವೈದ್ಯ ಅವರು ಈ ಕುರಿತು ಕಾರವಾರ ಸೈಬರ್ ಅಪರಾಧ ವಿಭಾಗ ಠಾಣೆಯಲ್ಲಿ (CN) ದೂರು ದಾಖಲಾಗಿದೆ.ಅಂಕೋಲಾ ಮುಖ್ಯ ಕಚೇರಿಯ ಮೀನಾಕ್ಷಿ ಕೃಷ್ಣ ಗೌಡ ಅವರ ಖಾತೆಯಿಂದ ₹5 ಲಕ್ಷ ವನ್ನು ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ, ಎಂಎಸ್ ವೆಂಕಟೇಶ್ವರ ಗ್ಯಾಸಿಂಗ್ ಸೆಂಟರ್ ಖಾತೆಯಿಂದ ₹5,46,000 ಲಕ್ಷ ಅನ್ನು ವೆಂಕಟೇಶ್ವರ ಗ್ಯಾಸಿಂಗ್ ಸೆಂಟರ್ ಗೆ ಮತ್ತು ಸವಿತಾ ವೆಂಕಟರಮಣ ನಾಯ್ಕ ಅವರ ಖಾತೆಯಿಂದ ₹6,60,000 ಲಕ್ಷ ಅನ್ನು TAFE RTGS ಮೂಲಕ ACCESS LTD ಗೆ ವರ್ಗಾಯಿಸಲಾಗಿದೆ.
ಆದರೆ ಈ ₹16,36,895 ಲಕ್ಷ ಸೇರಿದಂತೆ ಒಟ್ಟು ₹33,42,895 ಲಕ್ಷ ಹಣ RTGS ಖಾತೆಗೆ ಹೋಗಬೇಕಾದ ಸ್ಥಳಕ್ಕೆ ಹೋಗದೆ ಸೈಬರ್ ಕಳ್ಳರ ಖಾತೆಗೆ ಜಮಾ ಆಗಿರುವ ಬಗ್ಗೆ ದೂರು ದಾಖಲಾಗಿದೆ. ಹಣ ಯಾವ ಖಾತೆಗೆ ಜಮಾ ಆಗಿದೆ ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಜನವರಿ 24 ರಿಂದ 27 ರ ಮಧ್ಯೆ ಈ ಘಟನೆ ಸಂಭವಿಸಿರುವುದಾಗಿ ದೂರು ನೀಡಲಾಗಿದೆ.
ಇದೀಗ ಬ್ಯಾಂಕ್ ಸರ್ವರ್ ಹ್ಯಾಕ್ ಆಗಿರುವ ಸಾಧ್ಯತೆ ಇರುವುದರಿಂದ, RTGS ವೇಳೆ ಖಾತೆದಾರರು ನೀಡಿದ ಖಾತೆ ಸಂಖ್ಯೆಗೆ ಹೋಗಬೇಕಾದ ಹಣವು ಬೇರೆ ಸಂಖ್ಯೆಗೆ ಹೋಗಿದೆ ಎಂದು ಶಂಕಿಸಲಾಗಿದೆ. ಆದರೆ ಯಾವ ಸಂಖ್ಯೆ ಎಂದು ಮಾಹಿತಿ ಲಭ್ಯವಿಲ್ಲ. ಬ್ಯಾಂಕ್ ಸರ್ವರ್ ಹ್ಯಾಕ್ ಆಗಿರುವುದರಿಂದ ಇನ್ನಷ್ಟು ಜನರ ಖಾತೆಗಳಿಗೂ ಹ್ಯಾಕ್ ಆಗುವ ಸಾಧ್ಯತೆ ಇದ್ದು, ಹೀಗಾಗಿ ಎಲ್ಲರಲ್ಲೂ ಆತಂಕ ಉಂಟಾಗಿದೆ.
ಇದನ್ನೂ ಓದಿ