ಸುದ್ದಿಬಿಂದು ಬ್ಯೂರೋ
ಬೆಂಗಳೂರು : ಉತ್ತರಕನ್ನಡ ಜಿಲ್ಲಾಧಿಕಾರಿ ಅವರ ಸರಕಾರಿ ವಾಹನಕ್ಕೆ ಇಂಧನ ಹಾಕಲು ಹಣವಿಲ್ಲದೆ‌ ಸೆಡ್ ನಲ್ಲಿ‌ನಿಂತುಕೊಂಡಿದೆ ಎಂಬ ವರದಿ ಒಂದಕ್ಕೆ ವಿಜಯಪುರ ನಗರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟ್ವಿಟ್ ಮಾಡುವ ಮೂಲಕ ರಾಜ್ಯ ಕಾಂಗ್ರೆಸ್ ಸರಕಾರವನ್ನ (State Congress Govt.) ಟೀಕಿಸಿದರು. ಇದಕ್ಕೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಟ್ವಿಟ್ ಮೂಲಕವೇ ಶಾಸಕ ಯತ್ನಾಳಗೆ ಸ್ಪಷ್ಟನೆ ನೀಡಿದ್ದಾರೆ.

ಉತ್ತರ ಕನ್ನಡ ಜಿಲ್ಲಾಧಿಕಾರಿಗಳ ಸರಕಾರಿ ವಾಹನಕ್ಕೆ ಇಂಧನ ಹಾಕಲು ಅನುಧಾನ ಕೊರೆಗೆ ಎಂದು ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ(Social Media) ಸುದ್ದಿ ಹರಿದಾಡಿತ್ತು. ವೆಬ್‌ ಸೈಟ್‌ವೊಂದರ ವರದಿಯನ್ನು ಉಲ್ಲೇಖಿಸಿದ್ದ ಬಸನಗೌಡ ಪಾಟೀಲ್ ಯತ್ನಾಳ್, (MLA Basanagowda Patil Yatnal ) ‘ಉತ್ತರ ಕನ್ನಡ ಜಿಲ್ಲಾಧಿಕಾರಿ ಕಾರಿನ ಇಂಧನಕ್ಕೆ ದುಡ್ಡಿಲ್ಲ!, ಅನುದಾನದ ಕೊರತೆಯಿಂದ ಸೆಡ್ ಸೇರಿದ ಜಿಲ್ಲಾಧಿಕಾರಿ ವಾಹನ, ಸರ್ಕಾರಿ ಖಜಾನೆಯಲ್ಲಿ ಬರಿದಾದ ಹಣ.!, ಡ್ರೈವರ್‌ಗಳ ಕೊರತೆ ಡಿಸಿ ಕಾರು ಚಾಲಕನಾದ ಗ್ರಾಮ ಸಹಾಯಕ.!’ ಎಂದು ಟ್ವಿಟ್ ಮಾಡಿದ್ದರು. ಈ ಮೂಲಕ ಸರ್ಕಾರವನ್ನು ಟೀಕಿಸಿದ್ದರು. ಇದಕ್ಕೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಉತ್ತರ ಕನ್ನಡದ ಜಿಲ್ಲಾಧಿಕಾರಿಗಳ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಶಾಸಕ ಯತ್ನಾಳ ಅವರ ಟ್ವಿಟ್ ಗೆ ಮರು ಟ್ವಿಟ್ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಈ ಸಂದೇಶ ಸಂಪೂರ್ಣ ಸುಳ್ಳು. ನಾನು ಉತ್ತರ ಕನ್ನಡದ ಜಿಲ್ಲಾಧಿಕಾರಿಗಳಿಗೆ ನಿಗದಿಪಡಿಸಿದ ವಾಹನವನ್ನೇ ಉಪಯೋಗಿಸುತ್ತಿದ್ದೇನೆ. ಯಾವುದೇ ಇಂಧನ, ಹಣದ ಕೊರತೆ ಇಲ್ಲ. ಇಂಧನದ ಲಭ್ಯತೆಯೂ ಸಾಕಷ್ಟಿದೆ. ಯಾರೋ ಬೇಕೆಂದೇ ಇಂತಹ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ’ ಜಿಲ್ಲಾಧಿಕಾರಿಗಳ ಸಂಚಾರಕ್ಕಾಗಿ ಎರಡು ಸರ್ಕಾರಿ ವಾಹನ ನೀಡಲಾಗಿದೆ. ಆದರೆ ಒಂದು ವಾಹನಕ್ಕೆ ಇಂಧನ ಹಾಕಲು ಅನುದಾನವಿಲ್ಲದೇ ಶೆಡ್ ಸೇರಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಟ್ವಿಟ್ ಮೂಲಕ ಜಿಲ್ಲಾಧಿಕಾರಿ ಸ್ಪಷ್ಟತೆ ನೀಡಿದ್ದಾರೆ.