ಸುದ್ದಿಬಿಂದು ಬ್ಯೂರೋ ವರದಿ
Chikkamagaluru:ಚಿಕ್ಕಮಂಗಳೂರು: ಓವರ್ ಡೋಸ್ ಇಂಜಕ್ಷನ್ ಗೆ 7 ವರ್ಷದ ಬಾಲಕ‌ ನೋರ್ವ ಮೃತಪಟ್ಟಿರುವ ಘಟನೆ ಚಿಕ್ಕಮಂಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಬುಕ್ಕಾಂಬುದಿಯ ಎಂಬಲ್ಲಿ ನಡೆದಿದೆ.

ಸೋನೇಶ್(7) ಮೃತ ದುರ್ದೈವಿ ಬಾಲಕನಾಗಿದ್ದು, ಈತ ಕಳೆದ 4 ದಿನಗಳಿಂದ ಜ್ವರದಿಂದ ಬಳಲುತ್ತಿದ್ದ, ನಂತರಲ್ಲಿ ಬಾಲಕನಿಗೆ ಸ್ಥಳೀಯ ವೈದ್ಯರಾದ ವರುಣ್ ಎಂಬುವರಲ್ಲಿ ಕರೆದುಕೊಂಡು ಹೋಗಿದ್ದು, ಅವರು ನೀಡಿದ್ದ ಇಂಜಕ್ಷನ್ ನಿಂದ ಬಾಲಕ ಸಾವನ್ನಪ್ಪಿರುವುದಾಗಿ ಬಾಲಕರು ಆರೋಪಿಸಿದ್ದಾರೆ.

ಇಂಜಕ್ಷನ್ ನೀಡಿದ್ದ ಜಾಗದಲ್ಲಿ ಬೊಬ್ಬೆ ಬಂದು, ಪಸ್ ಕಾಣಿಸಿಕೊಂಡು, ಬಾಲಕ ತೀವ್ರ ಅಸ್ವಸ್ಥಗೊಂಡು ಬಳಿ ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಆ ಬಾಲಕ ಸಾವನ್ನಪ್ಪಿದ್ದಾನೆ. ವೈದ್ಯ ವರುಣ್ ವಿರುದ್ಧ ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಯಡವಟ್ಟು ವೈದ್ಯ ವರುಣ್ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ‌

ಗಮನಿಸಿ.