ಸುದ್ದಿಬಿಂದು ಬ್ಯೂರೋ
ಶಿರಸಿ: ದಮ್ ಇದರೆ ಸಿದ್ದರಾಮಯ್ಯ ಹಿಂದು ರಾಷ್ಟ್ರವಾಗೋದನ್ನ ತಡೆಯಲಿ.ಹಿಜಾಬ್ ಹಿಂದೆ ಹೋಗುವ ಸಿದ್ದರಾಮಯ್ಯ ಎಂದು ಹೇಳಿಕೆ ನೀಡಿದ್ದ ಸಂಸದ ಅನಂತಕುಮಾರ ಹೆಗಡೆ ಹೇಳಿಕೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ತಿರುಗೇಟು ನೀಡಿದ್ದಾರೆ.

ಸಂಸದ ಅನಂತಕುಮಾರ ಹೆಗಡೆ ತಮ್ಮ 25ವರ್ಷದ ರಾಜಕಾರಣದಲ್ಲಿ ಒಂದೆ ಒಂದು ದಿನ ಒಳ್ಳೇಯ ಮಾತಾಡಿಲ್ಲ. ಬಡ ಜನರಿಗೆ ಸ್ಪಂದಿಸುವ ಮಾತಾಡಿದ್ದಂತು ತಾ ಕೇಳಿದ್ದಯ ಇಲ್ಲ ಕಂಡಿದ್ದು ಇಲ್ಲ. ಅನಂತಕುಮಾರ ಹೆಗಡೆ ಕೇವಲ ಕೋಮು ಗಲಬೆ ಸೃಷ್ಟಿಸುವ ಹೇಳಿಕೆ ಕೊಟ್ಟು ಶಾಂತಿ ಕದಡುವ ಕೆಲಸ ಮಾಡುತ್ತಾ ಬಂದಿದ್ದಾರೆ ಅದನ್ನ ಬಿಟ್ಟು ಸಂಸದರು ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಲಿ ಎಂದು ಹೇಳಿದ್ದಾರೆ‌