ಸುದ್ದಿಬಿಂದು ಬ್ಯೂರೋ
ಚನ್ನಮ್ಮನ ಕಿತ್ತೂರು :ಉತ್ತರಕನ್ನಡ ಕ್ಷೇತ್ರ ಪ್ರತಿನಿಧಿಸುತ್ತಿರುವ ಸಂಸದ ಅನಂತಕುಮಾರ ಹೆಗಡೆ ಅವರು ಈ ಸಲ ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದಿದ್ದರು. ಈಗ ಅವರಿಗೆ ಮತ್ತೆ ಚುನಾವಣೆ ನೆನಪಾಗಿದೆ. ಚುನಾವಣೆಗೆ ಮಾತ್ರ ಕ್ಷೇತ್ರದ ಜನರನ್ನು ನೆನಪು ಮಾಡುವ ವ್ಯಕ್ತಿಯಿಂದ ಅಭಿವೃದ್ದಿ ಕಾರ್ಯ ಆಗುವುದಿಲ್ಲ. ಇಂತಹ ವ್ಯಕ್ತಿಗಳಿಗೆ ಮಣೆ ಹಾಕಬಾರದು ಎಂದು ಆಟೋರಿಕ್ಷಾ ಸಂಘದ ಅಧ್ಯಕ್ಷ, ಯುವ ಮುಖಂಡ ವಿಜಯಕುಮಾರ ಶಿಂಧೆ ಆಗ್ರಹಿಸಿದ್ದಾರೆ.

ಡೊಂಬರಕೊಪ್ಪ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಲೋಕಸಭಾ ಚುನಾವಣೆಗೆ ಈಗಾಗಲೇ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವ ಶಿರಸಿಯ ಅನಂತಮೂರ್ತಿ ಹೆಗಡೆ ಅವರಿಗೆ ಬಿಜೆಪಿ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು. ಅಧಿಕಾರವಿಲ್ಲದೆ ಆಟೋರಿಕ್ಷಾ ಸಂಘಟನೆ, ಬಡಜನರ ಸೇವೆ ಮಾಡುವ ಅನಂತಮೂರ್ತಿ ಅವರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು.

ರೈತ ಮುಖಂಡ ಅಪ್ಪೇಶ ದಳವಾಯಿ ಮಾತನಾಡಿದರು. ಮತ್ತುಮ್ ಡೋಂಗಿ, ಪುಟ್ಟು ಗೋಸಾವಿ ಇತರರು ಇದ್ದರು.