ಸುದ್ದಿಬಿಂದು ಬ್ಯೂರೋ ವರದಿ
ಗೋಕರ್ಣ : ಸಮುದ್ರದಲ್ಲಿ ಈಜಲು ಹೋಗಿದ್ದ ವೇಳೆ‌‌ ಎರಡು ಪ್ರತ್ಯೇಕ ಘಟನೆಯಲ್ಲಿ ಇಬ್ಬರೂ ಮಹಿಳೆಯರು ಹಾಗೂ ಇಬ್ಬರೂ ಪುರುಷರು ಸೇರಿ ನಾಲ್ವರು ಪ್ರವಾಸಿಗರನ್ನ ರಕ್ಷಣೆ ಮಾಡಿರುವ ಘಟನೆ ಗೋಕರ್ಣದ ಓಂ ಬೀಚ್ ಹಾಗೂ ಕುಡ್ಲೆ ಬೀಚ್‌ನಲ್ಲಿ ನಡೆದಿದೆ.

ಓಂ ಬೀಚ್‌ನಲ್ಲಿ‌ ಸಮುದ್ರದ ಸುಳಿಗೆ ಸಿಲುಕಿ ಮುಳುಗುತ್ತಿದ್ದ ಇಬ್ಬರೂ ಪ್ರವಾಸಿಗರನ್ನು ಜೀವ ರಕ್ಷಕ ಸಿಬ್ಬಂದಿಗಳು ರಕ್ಷಣೆ ಮಾಡಿದ್ದಾರೆ. ಆಂಧ್ರ ಮೂಲದ ಕಡಪ ಜಿಲ್ಲೆಯವರಾಗಿದ್ದು ನಾಲ್ಕು ಜನ ಪ್ರವಾಸಿಗರು ಗೋಕರ್ಣ ಪ್ರವಾಸಕ್ಕೆ ಬಂದಿದ್ದರು. ಸಮುದ್ರದಲ್ಲಿ ಈಜಾಡುತ್ತಿರುವಾಗ ಸುಳಿಗೆ ಸಿಲುಕಿ ಇಬ್ಬರೂ ಪ್ರವಾಸಿಗರು ಮುಳುಗುತ್ತಿದ್ದು ಗಮನಿಸಿ ಅವರನ್ನು ರಕ್ಷಣೆ ಮಾಡಿದ್ದಾರೆ. ಕರ್ತವ್ಯ ನಿರತ ಲೈಫ್ ಗಾರ್ಡ್ ಸಿಬ್ಬಂದಿಗಳಾದ ಹರೀಶ್ ಮೂಡಂಗಿ, ಮಂಜೇಶ್ ಹರಿಕಂತ್ರ, ಪ್ರಭಾಕರ ಅಂಬಿಗ ಇವರು ತಮ್ಮ ಜೀವದ ಹಂಗನ್ನು ತೊರೆದು ಪ್ರವಾಸಿಗರ ಜೀವ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಚರಣ್, ಶ್ರೀಕಾಂತ್ ,ರಕ್ಷಣೆಗೆ ಒಳಗಾದ ಪ್ರವಾಸಿಗರು.

ಇನ್ನೂ ಕೊಡ್ಲೇ ಬೀಚಿನಲ್ಲಿ ರಷ್ಯಾ ಮೂಲದ ವಿದೇಶಿ ಮಹಿಳೆ ಜೈನ್ 41ಹಾಗೂ ಬೆಂಗಳೂರಿನ ನಿವಾಸಿಗಳಾದ ಎಬಿನ್ ಡೇವಿಶ್ 35 ಹಾಗೂ ಸಂಗಡಿಗರಾದ ಮಧುರ ಅಗ್ರವಾಲ್ ವಯಸ್ಸು 35 ರಮ್ಯಾ ವೆಂಕಟರಮಣ 34 ಬೆಂಗಳೂರು ಕಮನಲ್ಲಿ ನಗರ ಗೆಳೆಯ ಗೆಳತಿಯರೊಡನೆ ಗೋಕರ್ಣ ಪ್ರವಾಸಕ್ಕೆಂದು ಬಂದಿದ್ದು ಕುಡ್ಲೆ ಬೀಚಿನಲ್ಲಿ ಈಜಲು ತೆರಳಿದ್ದಾಗ ಸಮುದ್ರದ ಸುಳಿಗೆ ಸಿಕ್ಕಿ ಸಹಾಯಕ್ಕಾಗಿ ಅಂಗಲಾಚುತಿದ್ದಾಗ ಅದನ್ನು ಗಮನಿಸಿದ ಜೀವ ರಕ್ಷಕ ಸಿಬ್ಬಂದಿಗಳಾದ ನಾಗೇಂದ್ರ ಎಸ್ kurle ಮಂಜುನಾಥ್ ಹರಿಕಂತ್ರ, ಪ್ರವಾಸಿ ಮಿತ್ರ ಶೇಖರ್ ಹರಿಕಂತ್ರ ಮತ್ತು ಮೈ ಸ್ಟಿಕ್ ಗೋಕರ್ಣ ಅಡ್ವೆಂಚರ್ಸ್ ತಕ್ಷಣ ಅಪಾಯದಲ್ಲಿ ಸಿಲುಕಿದ್ದವರನ್ನ ರಕ್ಷಣೆ‌ ಮಾಡಿದ್ದಾರೆ.

ಇದನ್ನೂ ಓದಿ