ಲೋಕಸಭಾ ಚುನಾವಣಾ ಹೊಸ್ತಿಲಲ್ಲಿ ಜಿಲ್ಲೆಯ ರಾಜಕೀಯ ಕಾವು ಕಾವೇರತೊಡಗಿದೆ. ಬಿರು ಬೇಸಿಗೆಯ ಧಗೆ ಧಗಧಗಿಸುವ ಹಾಗೆ ಟಿಕೆಟ್ ವಂಚಿತರು, ಅಪೇಕ್ಷಿತರು ಪಕ್ಷವನ್ನೇ ಸುಡುವ ಕೆಂಡವಾಗಿದ್ದಾರೆ.

ಈಗಾಗಲೇ ಎರಡೂ ರಾಷ್ಟ್ರೀಯ ಪಕ್ಷಗಳು ತಮ್ಮ ತಮ್ಮ ಪಕ್ಷದ ರಣಕಲಿಗಳನ್ನು ಅಖಾಡಕ್ಕೆ ಬಿಟ್ಟಿದ್ದು, ಸಾಮಾನ್ಯವಾಗಿ ಟಿಕೇಟ್ ಅಪೇಕ್ಷಿತರ ಅಸಮಾಧಾನ ಬುಗಿಲೆದ್ದಿದೆ. ಈ ಅಸಮಾಧಾನ ತಣಿಸುವ ಜವಾಬ್ದಾರಿಯನ್ನು ಪಕ್ಷದ ಹಿರಿಯರ ಹೆಗಲಿಗೆ ಕಟ್ಟಲಾಗಿದೆ.ಒಲ್ಲದ ಮನಸ್ಸಿನಿಂದ ಪಕ್ಷ ವಹಿಸಿದ ಜವಾಬ್ದಾರಿಯ ನೊಗವನ್ನು ಹೊತ್ತು ಜೋಡೆತ್ತಿನಂತೆ ಬಂದ ಎರಡು ಮಾಜಿ ಸಚಿವರ ಮುಖಕ್ಕೆ ತಣ್ಣಿರೆರಚಿದಂತ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಇದನ್ನೂ ಓದಿ

ಕಳಕಪ್ಪ ಹಂಡಿ ಮತ್ತು‌ ಹರ-ತಾಳ ಹಾಲು(ತು)ಪ್ಪ ಎಂಬ ಈರ್ವರು ಹಿರಿಯ ನಾಯಕರು, ಟಿಕೇಟ್ ವಂಚಿತ ಜಿಲ್ಲೆಯ ಹಿರಿಯ ರಾಜಕಾರಣಿಯೊಬ್ಬರ ಮನೆಗೆ ಆಗಮಿಸಿ, “ಪಕ್ಷ ತೆಗೆದುಕೊಂಡ ತೀರ್ಮಾನಕ್ಕೆ ಬದ್ದರಾಗಿ ಈ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯ ಪರ ಕೆಲಸಮಾಡಬೇಕು” ಎಂಬ ವಿಚಾರವಾಗಿ ಚರ್ಚೆಗೆ ಇಳಿದಿದ್ದರು ಎನ್ನಲಾಗಿದೆ.

ಈ ಚರ್ಚೆಯ ಸನ್ನಿವೇಶವನ್ನು ಮೊಬೈಲ್ ಮೂಲಕ ಚಿತ್ರೀಕರಣಕ್ಕೆ ಮುಂದಾದ ಕಳಕಪ್ಪ ಹಂಡಿ ಅವರ ಗನ್‌ಮ್ಯಾನ್ ಗೆ, ವಿಡಿಯೋ ಚಿತ್ರೀಕರಣ ಮಾಡದಂತೆ ಟಿಕೇಟ್ ವಂಚಿತ ಜಿಲ್ಲೆಯ ರಾಜತಕಾರಣಿ ತಾಕೀತು ನೀಡಿದ್ದಾರೆ. ಹುಲಿಯ ಮಾತಿಗೆ ಖ್ಯಾರೇ ಎನ್ನದ ಗನ್‌ಮ್ಯಾನ್ ಮತ್ತೆ ಚಿತ್ರಿಕರಣಕ್ಕೆ ಮುಂದಾದಾಗ, ಜಿಲ್ಲೆಯ ಹುಲಿ ಕ್ರೋಧಗೊಂಡ ವ್ಯಾಘ್ರನಾಗಿ ಬಡಪಾಯಿ ಗನ್‌ಮ್ಯಾನ್ ಮೇಲೆ ಎರಗಿ ಚಟಾರ್..!! ಪಟಾರ್..!! ಅಂತಾ ಕಪಾಳಮೋಕ್ಷ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಈ WWF ಸನ್ನಿವೇಶ ಸಂಧಾನಕಾರ ಮಾಜಿ ಸಚಿವರ ಸಮ್ಮುಖದಲ್ಲೇ ನಡೆದಿದ್ದು, ಒಂದು ಕ್ಷಣ ಸಂಧಾನಕಾತರು ಸ್ಟನ್ ಆಗಿದ್ದಾರೆ. ಜಿಲ್ಲೆಯ ಹುಲಿಯ ಈ ದುರ್ವರ್ತನೆ ಇದೇ ಮೊದಲ ಬಾರಿಗೆ ಅಲ್ಲ.. ಈ ಹಿಂದೆಯೂ ಪಕ್ಷದ ವಿವಿಧ ನಾಯಕರ ಮೇಲೆ ಎರಗಿ ಹೋದ ಪ್ರಕರಣಗಳೂ ರಾಜಕೀಯ ಪಡಸಾಲೆಯಲ್ಲಿ ಆಗಾಗ್ಗೆ ಚರ್ಚಾವಸ್ತು ವಾಗುತ್ತದೆ.

ದೈಹಿಕ ಹಲ್ಲೆಯ ಮೂಲಕ ಸಂಧಾನ ಮುರಿದು ಬಿದ್ದಿದ್ದು ಆಗಮಿಸುವಾಗ ಜೋಡೆತ್ತಿನಂತೆ ಬಂದಿದ್ದ ಮಾಜಿ ಸಚಿವದ್ವಯರು ಹೋರಡುವಾಗ, ಬಲಿಕಾ ಬಕರಾ ಆಗಿದ್ದು ಮಾತ್ರ ವಿಪರ್ಯಾಸ. ಮಾತೆತ್ತಿದರೆ ರಾಮ – ಕೃಷ್ಣ ಎಂದು ಪುಂಖಾನುಪುಂಖವಾಗಿ ಪುಂಗುವ ಹುಲಿ, ಪುರಾಣದಲ್ಲಿ ” ತನ್ನ ವೈರಿಗಳೇ ಸಂಧಾನಕಾರರಾಗಿ ಬಂದರೂ ಆದರಾಥಿತ್ಯದಿಂದ ಕಾಣು ” ಎನ್ನುವ ಕೃಷ್ಣವಾಣಿಯನ್ನು ಮರೆತು ಸಂಧಾನಕಾರರ ಮೇಲೆ ಹಲ್ಲೆ ಮಾಡುವ ಮೂಲಕ ತನ್ನ ರಾಜಕೀಯ ಭವಿಷ್ಯಕ್ಕೆ ಪೂರ್ಣವಿರಾಮ ವಿಟ್ಟುಕೊಂಡಂತೆ ಆಗಿದೆ.