suddibindu.in
ಕಾರವಾರ‌ : ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಘೋಷಣೆಯಾಗುವ ಮೊದಲೆ ಮಾಜಿ ಸಂಸದ ಅನಂತಕುಮಾರ ಹೆಗಡೆ ತಮ್ಮ ಭಾಷಣದಲ್ಲಿ ಈ ಕ್ಷೇತ್ರದಲ್ಲಿ ತಾನು ಬಿಟ್ಟರೆ ಬಿಜೆಪಿಯಲ್ಲಿ ಇನ್ಯಾರೂ ಗತಿಯಿಲ್ಲ ಎನ್ನುವಂತೆ, ಖುರ್ಚಿ ಎತ್ತಿ ದಮ್ಮ ಇದ್ದರೆ ಬಂದು ಕುಳಿತುಕೊಳ್ಳಿ,ಎಂದು ಬಿಜೆಪಿಯ ಟಿಕೆಟ್ ‌ಆಕಾಂಕ್ಷಿಗಳಿಗೆ ಸವಾಲು ಎಸೆದಿದ್ದರು. ಆದರೆ‌‌ ಇದೀಗ ಪಕ್ಷದ ಹೈಕಮಾಂಡ ಅವರಿಗೆ ಎಂಪಿ ಟಿಕೆಟ್ ತಪ್ಪಿಸುವ ಮೂಲಕ ಅವರ ಖುರ್ಚಿಗೆ ಕಾಲಿಲ್ಲದಂತೆ ಮಾಡಿದೆ.

ಸದಾ ಇನ್ನೊಬ್ಬರನ್ನ ಟಿಕೀಸುತ್ತಾ,ವಿವಾದಾತ್ಮಕ ಹೇಳಿಕೆ ನೀಡುತ್ತಾ. ಆರು ಭಾರೀ ಸಂಸದರಾಗಿರುವ ಅನಂತಕುಮಾರ ಹೆಗಡೆ ಈ ಭಾರೀ ಟಿಕೆಟ್ ತಪ್ಪಿಸುವ ಮೂಲಕ ವ್ಯಕ್ತಿಗಿಂತ ಪಕ್ಷದ ತಾಕತ್ತು ಏನು ಎಂಬುದನ್ನ ತೋರಿಸಿಕೊಟ್ಟಿದ್ದಾರೆ. ಇವರು ಇತ್ತಿಚೆಗೆ ಕಾರ್ಯಕರ್ತರ ಸಭೆಯಲ್ಲಿ ಭಾಷಣದ ವೇಳೆ ಪಕ್ಷದ ಪ್ರಮುಖರ ಎದುರು ತಮ್ಮ‌ ಪಕ್ಕದಲ್ಲಿದ್ದ ಖುರ್ಚಿಯೊಂದನ್ನ ಟೇಬಲ್ ಮೇಲಿಟ್ಟು ಸ್ಪರ್ಧೆ ಮಾಡಲು ಯಾರಿಗಾದರೂ ತಾಕತ್ತ್ ಇದ್ದರೆ ಎದುರಿಗೆ ಬನ್ನಿ ಎಂದು ಬಿಜೆಪಿಯ ಟಿಕೆಟ್ ಆಕಾಂಕ್ಷಿಗಳಿಗೆ ಸವಾಲು ಹಾಕಿದ್ದರು.

ಇದನ್ನೂ ಓದಿ

ಇದರಿಂದಾಗಿ ಸಭೆಯಲ್ಲಿದ್ದ ಪಕ್ಷದ ಮುಖಂಡರೆ ಒಮ್ಮೆ ಕಕ್ಕಾಬಿಕ್ಕಿಯಾಗಿದ್ದರು.‌ಇದೇನಪ್ಪಾ ಇವರು ತಮ್ಮ ಪಕ್ಷದವರಿಗೆ ತಾಕ್ಕತ್ತಿನ ಸವಾಲು ಹಾಕತ್ತಿದ್ದಾರೆ. ಅರೇ..ಇವರು ಇಷ್ಟು ವರ್ಷ ನಮ್ಮ ಪಕ್ಷದಿಂದ ಸಂಸದರಾಗಿ ಈಗ ನಮ್ಮಗೆ ಸವಾಲ್ ಹಾಕತ್ತಿದ್ದಾರಲ್ಲ. ಇವರಿಗೆ ಅದೆಷ್ಟು ಅಹಂಕಾರ ಎಂದು ಎಲ್ಲರೂ ಮಾತನಾಡಿಕೊಂಡಿದ್ದರು. ಅಷ್ಟೆ ಅಲ್ಲದೆ‌ ಅಂದು ಅವರಾಡಿದ ಆ ಮಾತಿನ ವಿಡಿಯೊ ಒಂದನ್ನ ಪಕ್ಷದ ಹೈಕಮಾಂಡ್‌ಗೂ ರವಾನಿಸಿದರು ಎನ್ನಲಾಗಿದೆ. ಆದರೆ ಇದೀಗ ಇವರ ಇಂತಹ ಹೇಳಿಕೆಗಳಿಂದಾಗಿ ಸಾಕಷ್ಟು ಮುಜುಗರಕ್ಕೆ ಒಳಗಾದ ಪಕ್ಷದ ಹೈಕಮಾಂಡ ಟಿಕೆಟ್ ‌ನೀಡದೆ ಕೈಬಿಟ್ಟಿದ್ದಾರೆ.