suddibindu
ಬೆಂಗಳೂರು: ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದ್ದ ಉತ್ತಕನ್ನಡ (uttarkannada) ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ(BJP candidate)ಆಯ್ಕೆ ಕೊನೆಗೂ ಆರು ಬಾರಿ ಸಂಸದರಾಗಿದ್ದ ಹಿಂದೂ ಹುಲಿ ಅನಂತಕುಮಾರ‌ ಹೆಗಡೆ (Anantakumar Hegade) ಅವರನ್ನ ಕೈ ಬಿಟ್ಟು ಮಾಜಿ ಸ್ವೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ನೀಡಲಾಗಿದೆ.

ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಶಿರಸಿ ಕ್ಷೇತ್ರದಿಂದ ಮೂರು ಹಾಗೂ ಅಂಕೋಲಾ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗಿದ್ದರು, ಇನ್ನೂ ಕಳೆದ ವರ್ಷದ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಭೀಮಣ್ಣ ನಾಯ್ಕ ವಿರುದ್ಧ ಕಾಗೇರಿ ಅವರು ಸೋಲುವಂತಾಗಿತ್ತು. ಆದರೆ ಇದೀಗ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕಾಗೇರಿ ಅವರಿಗೆ ಟಿಕೆಟ್ ನೀಡಿದೆ.

ಅನಂತಗೆ ಮುಳ್ಳುವಾದ ವಿವಾದಾತ್ಮಕ ಹೇಳಿಕೆ
ಕಳೆದ ಮೂರು ದಶಕಗಳ ಕಾಲ ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಅನಂತಕುಮಾರ ಹೆಗಡೆ ಸಂಸದರಾಗಿದ್ದವರು. ಅವರು ಏಳು ಬಾರಿ ಈ ಕ್ಷೇತ್ರವನ್ನ ಪ್ರತಿನಿಧಿಸಿ ಒಮ್ಮೆ ಮಾತ್ರ ಸೊತ್ತಿದ್ದರು. ಆದರೆ ಸದಾ ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಸುದ್ದಿಯಾಗುತ್ತಿದ್ದ ಅನಂತಕುಮಾರ ಹೆಗಡೆಗೆ ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಲು ಅವರ ಆ ಹೇಳಿಕೆ ಕಾರಣವಾಗಿದೆ.

ಅವರ ಸಂವಿಧಾನ ಬದಲಾವಣೆ ಹೇಳಿಕೆಗಳು ಪಕ್ಷಕ್ಕೆ ದೊಡ್ಡ ಹೊಡೆತಕೊಟ್ಟಿದೆ. ಇವರ ಈ ಹೇಳಿಕೆಗಳಿಂದಾಗಿ ರಾಜ್ಯಾದ್ಯಂತ ಇರುವ ದಲಿತರು ಸೇರಿದಂತೆ ಹಿಂದೂಳಿದ ಮತದಾರರು ಸಹ ಯಾವುದೇ‌ ಕಾರಣಕ್ಕೂ ಬಿಜೆಪಿ ಬೆಂಬಲಕ್ಕೆ ಬಾರದೆ ಹೋದರೆ ಅನಾವಶ್ಯಕವಾಗಿ ಗೆಲ್ಲಬಹುದಾಗಿದ್ದ ಒಂದಿಷ್ಟು ಕ್ಷೇತ್ರವನ್ನ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಉಂಟಾಗಬಹುದು ‌ಎನ್ನುವ ಲೆಕ್ಕಾಚಾರದ ಮೇಲೆ ಅನಂತಕುಮಾರ ಹೆಗಡೆ ಅವರಿಗೆ ಈ ಬಾರಿ ಟಿಕೆಟ್ ನೀಡದೆ ಕೈ ಬಿಡಲಾಗಿದೆ ಎನ್ನಲಾಗುತ್ತಿದೆ.

ಇನ್ನೂ ಆರು ಬಾರಿ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದರೂ ಸಹ ಕ್ಷೇತ್ರ ಅಭಿವೃದ್ಧಿ ಮಾತ್ರ ಶೂನ್ಯವಾಗಿತ್ತು.ಆಯ್ಕೆ ಆದ ನಂತರದಲ್ಲಿ ಇವರು ಜನರ ಕೈಗೆ ಸಿಗದೆ ದೂರವೆ ಉಳಿದುಕೊಳ್ಳುತ್ತಿದ್ದು, ಚುನಾವಣೆ ಹತ್ತಿರ ಇರುವಾಗ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು‌. ಇನ್ನೂ ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಎರಡರಿಂದ ಮೂರು ಶಾಸಕ ಸೋಲಿಗೆ ನೇರವಾಗಿ ಇವರೆ ಕಾರಣ ಎನ್ನುವುದು ಬಿಜೆಪಿ ನಾಯಕರಿಗೂ ಮನವರಿಕೆಯಾಗಿತ್ತು.

ಅಷ್ಟೆ ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರೆ ಈ ಜಿಲ್ಲೆಗೆ ಬಂದರೂ ಅವರಿಗೂ ತಮ್ಮಗೂ ಯಾವುದೇ ಸಂಬಂಧವಿಲ್ಲ.ಮೋದಿ ಯಾರೋ ಎನ್ನುವ ರೀತಿಯಲ್ಲಿ ಕಾರ್ಯಕ್ರಮದ ಕಡೆ ಸುಳಿಯದೆ ದೂರವೆ ಉಳಿದುಕೊಂಡು ಒಂದು ರೀತಿಯಲ್ಲಿ ಪ್ರಧಾನ ಮೋದಿ ಅವರಿಗೆ ಸವಾಲು ಹಾಕಿರುವಂತಿತ್ತು.ಇವೇಲ್ಲವೂ ಕೂಡ ಈ ಭಾರಿ ಸಿಗಬಹುದಾಗಿದ್ದ ಟಿಕೆಟ್ ಕೈ ತಪ್ಪುವಂತಾಗಿದೆ. ಟಿಕೆಟ್ ಕೈ ತಪ್ಪಿರುವುದರಿಂದ ಅನಂತ ಮುಂದಿನ ನಡೆ ಏನು ಎನ್ನುವುದನ್ನ ಕಾದು ನೋಡಬೇಕಿದೆ.