suddibindu.in
ಕಾರವಾರ :ಲೋಕಸಭಾ ಚುನಾವಣೆ ಘೋಷಣೆ ಆಗುವುದರೊಂದಿಗೆ ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯನ್ನ ಕೂಡ ಘೋಷಣೆ ಮಾಡಲಾಗಿದೆ. ಆದರೆ ಜಿಲ್ಲಾ ಕಾಂಗ್ರೆಸ್ ‌ಘಟಕ ಮಾತ್ರ‌ ನಿಷ್ಕ್ರಿಯವಾಗಿದೆ ಎಂದು ಕಾಂಗ್ರೆಸ್ ಮುಖಂಡರೆ‌ ಆರೋಪಿಸುತ್ತಿದ್ದಾರೆ.

ಜಿಲ್ಲಾ ಘಟಕದ ಹೊಣೆಗಾರಿಕೆ ಹೊತ್ತವರು ತಮ್ಮ ಅಭ್ಯರ್ಥಿಯನ್ನ ಗೆಲ್ಲಿಸುವ ಬಗ್ಗೆ ಯಾವುದೇ ಸಂಘಟನೆ ಹಾಗೂ ‌ಸಭೆಗಳನ್ನ ಮಾಡುತ್ತಿಲ್ಲ.ಅಭ್ಯರ್ಥಿ ಯಾರು ಅಂತಾ ಘೋಷಣೆ ಆಗಲಿ ‌ಆಮೇಲೆ ನೋಡೋಣ ಅಂತಾ ಹೇಳುವ ಮೂಲಕ ಇಷ್ಟು ದಿನ ಕಳೆದಿದ್ದಾರೆ. ಇವರಿಗೆ ಅಧಿಕಾರ ಬೇಕೆ ಹೊರತೆ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಯಾವ ರೀತಿ ಸಂಘಟನೆ ಮಾಡಬೇಕು ಎನ್ನುವುದು ಗೊತ್ತಿಲ್ಲ.ಈಗ ಅಭ್ಯರ್ಥಿ ಘೋಷಣೆ ಆಗಿದೆ. ಆದರೂ ಇನ್ನೂ ಕೂಡ ಏನ ಮಾಡಬೇಕು ಎನ್ನುವ ಆಲೋಚನೆ ಇವರಿಗಿಲ್ಲ. ಇವರಂತವರನ್ನ ಕಟ್ಟಿಕೊಂಡು ಚುನಾವಣೆ ಗೆಲ್ಲುವುದು ಸಾಧ್ಯನಾ ಎಂದು ಅವರದೆ ಪಕ್ಷದ ಕಾರ್ಯಕರ್ತರು ಆರೋಪಿಸುತ್ತಿದ್ದಾರೆ.

ಇದನ್ನೂ ಓದಿ

ಇನ್ನೂ ಒಂದ ಕಡೆ ಕಾಂಗ್ರೆಸ್ ನಾಯಕರು ಈ ಬಾರಿ ತಾವು ಉತ್ತರಕನ್ನಡ ಲೋಕಸಭಾ ಕ್ಷೇತ್ರವನ್ನ ಗೆದ್ದೆ ಬಿಡತ್ತೇವೆ ಎಂದು ಹೇಳಿ ಕೊಳ್ಳತ್ತಿದ್ದಾರೆ. ಆದರೆ ಪಕ್ಷದ ಹೊಣೆಗಾರಿಕೆ ಹೊತ್ತವರು ಮಾಡಬೇಕಾದ ಕೆಲಸವನ್ನ ಕಾರ್ಯಕರ್ತರು ಮಾಡುತ್ತಿದ್ದು,ಪಕ್ಷದ ಮರ್ಯಾದೆ ಉಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಪಕ್ಷ ಸಂಘಟನೆ ವಿಚಾರವಾಗಿ ಏನಾದ್ರೂ ಕೇಳಿದರೆ ಮಾಡೋಣ,ನೋಡೋಣ ಅಂತಾ ಹೇಳುವ ಮೂಲಕ ಜಿಲ್ಲಾ ಕಾಂಗ್ರೆಸ್‌ನವರು ಜಾರಿಕೊಳ್ಳತ್ತಾರೆ. ಇವರಿಗೆ ಪಕ್ಷದ ಸಂಘಟನೆ ಬಗ್ಗೆ ಕಾಳಜಿ ಇಲ್ಲದೆ ಹೋದರೆ ಮೊದಲು ಆ ಸ್ಥಾನದಿಂದ ಕೇಳಗಿಳಿದು ಹೋಗುವುದು ಒಳ್ಳೆಯದು. ಸಂಘಟನೆ ಅನುಕೂಕವಾಗಬೇಕು ಎಂದು ತಮ್ಮ ಸುತ್ತ ಕಾರ್ಯಕರ್ತರಿಗಿಂತ ಪದಾಧಿಕಾರಿಗಳನ್ನೆ ಹೆಚ್ಚಾಗಿ ನೇಮಕ ಮಾಡಕೊಂಡಿದ್ದಾರೆ.

ಆದರೆ ಪಕ್ಷದ ಮೇಲೆ ಪದಾಧಿಕಾರಿಗಳಿಗೆ ಇರುವಷ್ಟು ಜವಾಬ್ದಾರಿ ಪ್ರಮುಖ ಹುದ್ದೆಯಲ್ಲಿ ಇರುವವರಿಗೆ ಇಲ್ಲದಂತಾಗಿದೆ ಅಂತಾ ಕೂಡ ಅವರು ಆರೋಪಿಸಿದ್ದಾರೆ. ಇಂತಹ ನಿಷ್ಕ್ರಿಯ ಜಿಲ್ಲಾ ಕಾಂಗ್ರೆಸ್ ‌ಘಟಕವನ್ನ ಇಟ್ಟುಕೊಂಡು ನಾವು ಗೆಲ್ಲಬೇಕಾದ ಅವಕಾಶವನ್ನ ಕೈ ಚೆಲ್ಲಬೇಕಾದ ಪರಿಸ್ಥಿತಿ ಉಂಟಾಗಲಿದೆ.‌ ಹೀಗಾಗಿ ತಕ್ಷಣ ನಿಷ್ಕ್ರಿಯ ಕಾಂಗ್ರೆಸ್ ‌ಜಿಲ್ಲಾ ಘಟಕಕ್ಕೆ ಮೇಜರ್ ಸರ್ಜರಿ ಮಾಡದೆ ಹೋದರೆ ಕ್ಷೇತ್ರ‌ ಕಳೆದುಕೊಳ್ಳುವುದರಲ್ಲಿ ಯಾವುದೆ ಅನುಮಾನ ಇಲ್ಲ ಎಂದು ಕಾಂಗ್ರೆಸ್‌‌‌‌‌ನ ಮುಖಂಡರು ಹಾಗೂ ಕಾರ್ಯಕರ್ತರು ಆರೋಪಿಸುತ್ತಿದ್ದಾರೆ..