ಸುದ್ದಿಬಿಂದು ಬ್ಯೂರೋ
8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಓರ್ವ ಹೃದಯಾಘಾತದಿಂದ ತರಗತಿಯಲ್ಲೆ ಕುಸಿದು ಬಿದ್ದು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿರುವ ಘಟನೆ ರಾಯಚೂರು (Raichur) ಜಿಲ್ಲೆಯ ಸಿರವಾರ (Sirawar) ಪಟ್ಟಣದ ಹೊರವಲಯದಲ್ಲಿ ಇರುವ ಖಾಸಗಿ ಶಾಲೆಯಲ್ಲಿ (private school) ನಡೆದಿದೆ.
ಅತ್ತನೂರು (14) ಮೃತಪಟ್ಟ ವಿದ್ಯಾರ್ಥಿ ಆಗಿದ್ದಾನೆ. ಎಂದಿನಂತೆ ಮಂಗಳವಾರ ಶಾಲೆಗೆ ಹೊಗಿದ್ದ, 11 ಗಂಟೆ ಸುಮಾರು ಬಿಪಿ ಲೋ (Low BP) ಆಗಿ ತರಗತಿಯಲ್ಲೆ ಕುಸಿದ್ದು ಬಿದ್ದಿದ್ದಾನೆ. ತಕ್ಷಣ ಶಿಕ್ಷಕರು, ಸಿಬ್ಬಂದಿಗಳು ಸ್ಥಳಿಯ ಆಸ್ಪತ್ರೆಗೆ (Hospital) ದಾಖಲು ಮಾಡಿದ್ದು, ಚಿಕಿತ್ಸೆ ನೀಡಿದಾದರೂ ಹೆಚ್ಚೇನ ಚಿಕಿತ್ಸೆಗಾಗಿ ರಾಯಚೂರಿಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.
ಬಾಳಿ ಬದುಕಬೇಕಿದ್ದ ಮಗ ಕಣ್ಣೆದುರೇ ಪ್ರಾಣಬಿಟ್ಟಿದ್ದು, ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಶಾಲಾ ಶಿಕ್ಷಕರು, ಸ್ನೇಹಿತರು ಕಣ್ಣೀರಿಟ್ಟಿದ್ದಾರೆ.
ಇದನ್ನೂ ಓದಿ