suddibindu.in
ಕುಮಟಾ : ಪಟ್ಟಣದ ಕೊಂಕಣ ಏಜುಕೇಷನ್ ಶಿಕ್ಷಣ ಸಂಸ್ಥೆಯಲ್ಲಿ (Konkan Education) ಎಸ್.ಎಸ್.ಎಲ್.ಸಿ ಪರೀಕ್ಷೆಯ ಮರು ಪರಿಕ್ಷಣೆಯಲ್ಲಿ ಇಬ್ಬರೂ ವಿದ್ಯಾರ್ಥಿನಿಯರು ರಾಜ್ಯಮದಲ್ಲಿ ಸಾಧನೆ ಮಾಡಿದ್ದಾರೆ.

2023-2024ರಲ್ಲಿ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕೊಂಕಣ ಏಜುಕೇನ್ ಸಂಸ್ಥೆಯ ವಿದ್ಯಾರ್ಥಿನಿ, ಮೇಘನಾ ಚಂದ್ರಶೇಖರ ನಾಯ್ಕ ಕಲಭಾಗ ಹಾಗೂ ವೈಷ್ಣವಿ ರಮೇಶ ನಾಯ್ಕ ಅವರು ಕಡಿಮೆ ಅಂಕ ಬಂದಿರುವ ಬಗ್ಗೆ ಪ್ರಶ್ನೆ ಪತ್ರಿಕೆ ಮರುಪರಿಶೀಲನೆಗೆ ಹಾಕಿದ್ದು ಇದರಲ್ಲಿ ಮೇಘನಾ ಚಂದ್ರಶೇಖರ ನಾಯ್ಕ ಮೊದಲಿಗೆ 625ಕ್ಕೆ 615ಅಂಕ ಪಡೆದಿದ್ದು,ಮರು ಪರಿಶೀಲನೆ ಬಳಿಕ 617ಅಂಕವನ್ನ ಪಡೆಯುವ ಮೂಲಕ ರಾಜ್ಯಕ್ಕೆ 9ನೇ ರ‍್ಯಾಂಕ್ ಪಡೆದಿದ್ದಾರೆ.

ಇದನ್ನೂ ಓದಿ

ಇನ್ನೂ ಅದೆ ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿದ್ದ ವೈಷ್ಣವಿ ರಮೇಶ ಈಕೆ ಕೂಡ ಮೊದಲಿಗೆ 625ಕ್ಕೆ 619ಅಂಕ ಪಡೆದಿದ್ದರು, ಬಳಿಕ ಮರು ಪರಿಶೀಲನೆ ಬಳಿಕ 621ಅಂಕ ಪಡೆಯುವ ಮೂಲಕ ರಾಜ್ಯಕ್ಕೆ 5ನೇ ರ‍್ಯಾಂಕ್ ಪಡೆಯುವ ಮೂಲಕ ಸಾಧನೆ ಮಾಡಿದ್ದು ಈ ಇಬ್ಬರೂ ವಿದ್ಯಾರ್ಥಿನಿಯರು ಪಾಲಕರಿಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿನಿಯರ ಈ ಸಾಧನೆಗೆ ಕೊಂಕಣ ಏಜುಕೇಷನ್ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ ಅಭಿನಂದಿಸಿದೆ.