suddibindu.in
Belagavi:ಬೆಳಗಾವಿ:ಉತ್ತರಕನ್ನಡ (uttar kannada) ಲೋಕಸಭಾ ಕ್ಷೇತ್ರದಲ್ಲಿ (Lok Sabha Constituency) ಕಾಂಗ್ರೆಸ್ (Congress) ನಿಂದ ಸ್ಪರ್ಧೆ ಮಾಡುವಂತೆ ಅವರ ಹೈಕಮಾಂಡ ಕೇಳಿದರೆ ಇಲ್ಲಿನ ಕಾಂಗ್ರೆಸ್ ಮುಖಂಡರು ಕರಿಮಣಿ ಮಾಲೀಕ ನಾನಲ್ಲ ಎಂದು ಹೇಳುತ್ತಿದ್ದಾರೆಂದು ಬಿಜೆಪಿ ಸಂಸದ ಅನಂತಕುಮಾರ ಹೆಗಡೆ (Anantakumar Hegde)ವ್ಯಂಗ್ಯ ಮಾಡಿದ್ದಾರೆ.

ಅವರು ಬೆಳಗಾವಿಯ ಸಂಪರಗಾಂವ್ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ. ಕಾಂಗ್ರೆಸ್ ನಲ್ಲಿ ಯಾರು ಸಹ ಸ್ಪರ್ಧೆ ಮಾಡಲು ಮುಂದೆ ಬರುತ್ತಿಲ್ಲ. ಆದರೆ ಕೊನೆ ಕ್ಷಣದಲ್ಲಿ ಯಾರಿಗಾದ್ರೂ ಒಬ್ಬರಿಗೆ ಕರಿಮಣಿ ಕಟ್ಟಿಸ್ತಾರೆ. ಯಾರೂ ಇಲ್ಲಾ ಅಂದರೆ ಖಾನಾಪುರದ ರಿಜಕ್ಟ್ ಆದ ಮಟಿರೀಯಲ್ ಅದರನ್ನ ತೆಗೆದುಕೊಂಡು ಹೋಗಿ ನಿಲ್ಲಸಬಹುದು..

ಕಾಂಗ್ರೆಸ್‌ನ ಯಾವ ಪ್ರಶ್ನೆಗೂ ಉತ್ತರಕೊಡಬೇಕಾಗಿಲ್ಲ.ಸಿದ್ದರಾಮಯ್ಯಗೆ ಇರುವಷ್ಟು ದುರಂಹಕಾರ ಇದುವರೆ ಕರ್ನಾಟಕದಲ್ಲಿ ಮುಖ್ಯಮಂತ್ರಿಯಾದ ಯಾರಿಗೂ ಇರಲಿಲ್ಲ. ಸಿದ್ದರಾಮಯ್ಯ ಎಲ್ಲಿ ಹೋದರು ನನ್ನ ಹೆಸರು ಹೇಳತ್ತಾರೆ.. ಸಿದ್ದರಾಮಯ್ಯ ಅವರೆ ಮಾಧ್ಯಮದವರಿಗಿಂತ ಹೆಚ್ಚು ನನ್ನಗೆ ಪ್ರಚಾರ ಕೊಡುತ್ತಿದ್ದಾರೆ. ನಾನು ಉತ್ತರಕನ್ನಡ ಕೊಟ್ಟರೆ ಮಾತ್ರೆ ಕಾಂಗ್ರೆಸ್‌ಗೆ ಗೊತ್ತಾಗುತ್ತಿದೆ.

ಬಿಜೆಪಿಯಿಂದ ಯಾರು ಅಭ್ಯರ್ಥಿ ಆಗಲಿದ್ದಾರೆ ಅಂತಾ ತಲೆ ಕೆಡಿಸಿಕೊಳ್ಳುವುದು ಬೇಡ. ಬಿಜೆಪಿಯಲ್ಲಿ ಯಾರೆ ಅಭ್ಯರ್ಥಿ ಆದರೂ ಅವರನ್ನ ಗೆಲ್ಲಿಸೋಣ,ಇನ್ನೂ ತನಕ ನನಗೆ ಅಂತಾ ಟಿಕೆಟ್ ಪಕ್ಕಾ ಆಗಿಲ್ಲ ಎಂದರು