ಸುದ್ದಿಬಿಂದು ಬ್ಯೂರೋ
ಕಾರವಾರ
: ಸಹಕಾರಿ ಸಂಘದಲ್ಲಿ ಸದಸ್ಯತ್ವ ಹೊಂದಿರುವ ರೈತ ಕುಟುಂಬದವರ ಆರೋಗ್ಯ ಹಿತದೃಷ್ಟಿಯಿಂದ. ಸರಕಾರದಿಂದ ಜಾರಿಯಾಗಿದ್ದ, ಯಶಸ್ವಿನಿ ಸಹಕಾರಿ ಆರೋಗ್ಯ ರಕ್ಷಣಾ ಯೋಜನೆ. ಯಶಸ್ವಿ ಕಾಣದೆ ಅಧಿಕಾರಿಗಳ ಮಹಾಮೋಸದಿಂದಾಗಿ ಯೋಜನೆಗೆ ಹಣ ಪಾವತಿಸಿವರು ಇಂದು ಯೋಜನೆಯ ಲಾಭ ಸಿಗದೆ ವಂಚಿತರಾಗುವಂತಾಗಿದೆ.

ಯೋಜನೆಯಡಿ ಯಶಸ್ವಿನಿ ನೆಟ್ ವರ್ಕ್ ಆಸ್ಪತ್ರೆಗಳಲ್ಲಿ ಒಂದು ಕುಟುಂಬಕ್ಕೆ 5ಲಕ್ಷ ರೂ. ವರೆಗಿನ ವೆಚ್ಚದಲ್ಲಿ ನಗದು ರಹಿತ ಚಿಕಿತ್ಸೆ ಪಡೆಯಬಹುದಾಗಿತ್ತು. ಕೆಲ ವರ್ಷ ಈ ಯೋಜನೆ ಸ್ಥಗಿತಗಾಗಿತ್ತು.ಆದರೆ ಇದೀಗ 2022-2023ರಲ್ಲಿ ಮತ್ತೆ ಆರಂಭಿಸಲಾಗಿದ್ದು, ಸಹಾಕಾತಿ ಸಂಘದಲ್ಲಿ ಸದಸ್ಯತ್ವ ಹೊಂದಿದ ಕುಟುಂಬದ ತಲಾ ಒಬ್ಬರಿಂದ ಐದು ನೂರು ಹಾಗೂ ಕುಟುಂಬದಲ್ಲಿ ನಾಲ್ಕು ಜನರಿಗಿಂತ ಹೆಚ್ಚಿನವರಿದಲ್ಲಿ ಉಳಿದವರಿಗೆ 750ರೂಪಾಯಿನಂತೆ ಹಣ ಜಮಾ ಮಾಡಿಸಿಕೊಳ್ಳಲಾಗಿದೆ.

ಪ್ರಕ್ರೀಯೆ ಮುಗಿದು ಅರ್ಧ ವರ್ಷ ಕಳೆದರೂ ಇದುವರಗೆ ಯಶಸ್ವಿನಿ ಯೋಜನೆ ಮಾಡಿಸಿಕೊಂಡ ಯಾವೊಬ್ಬ ಸದಸ್ಯರಿಗೂ ಇದುಗರೆಗೆ ಕಾರ್ಡ್ ಬಂದಿಲ್ಲ. ಇನ್ನೂ ಕಾಯಿಲೆಗೆ ಒಳಗಾದವರು ಚಿಕಿತ್ಸೆ ಪಡೆದುಕೊಳ್ಳಲು ತಾವು ಯಶಸ್ವಿನಿಯೋಜನೆಗಾಗಿ ಸಹಕಾರಿ ಸಂಘದಲ್ಲಿ ಹಣ ಜಮಾ ಮಾಡಿರುವ ರಶಿದಿಯನ್ನ ಹಿಡಿದು ಆಸ್ಪತ್ರೆಗೆ ಹೋದರೆ ನಮ್ಮಲ್ಲಿ ಇದು ಅನ್ವಯ ಆಗಲ್ಲ ಎಂದು ವಾಪಸ್ ಕಳುಹಿಸುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಈ ಹಿಂದೆ ಯಶಸ್ವಿ ನೇಟ್ ವರ್ಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡವರ ಹಣವನ ಸರಕಾರ ಇದುವರಗೆ ಭರಣ ಮಾಡದೆ ಇರುವುದೆ ಇದಕ್ಕೆ ಮುಖ್ಯ ಕಾರಣ ಎನ್ನಲಾಗುತ್ತಿದೆ.

ಯೋಜನೆಗಾಗಿ ಸಂಗ್ರಹಿಸಿದ ಹಣ ಏನಾಯತ್ತು.?

2022-2023ರಲ್ಲಿ ರಾಜ್ಯದಲ್ಲಿ ಸಾವಿರಾರು ಕುಟುಂಬದ ಸದಸ್ಯರಿಂದ 500ರೂ ಹಾಗೂ ನಾಲ್ಕು ಜನರಿಗಿಂತ ಹೆಚ್ಚಿನ ಜನಸಂಖ್ಯೆ ಇದ್ದಲ್ಲಿ ನಾಲ್ಕು ಜನರ ಮೇಲ್ಪಟ್ಟವರಿಂದ 750 ರೂಪಾಯಿ ಸಂಗ್ರಹಿಸಲಾಗಿದ್ದು, ಇದರ ಹಣವೆ ಸಾವಿರಾರು ಕೋಟಿ ಸಂಗ್ರವಾಗಿದೆ. ಆದರೆ ಸಂಗ್ರಹವಾಗಿರುವ ಆ ಸಾವಿರಾರು ಕೋಟಿ ಹಣ ಎಲ್ಲಿಗೆ ಹೋಯತ್ತು, ಹಣ ಸಂಗ್ರವಾಗದರೂ ಆಸ್ಪತ್ರೆಗೆ ಯಾಕೆ ಕಟ್ಟಿಲ್ಲ.? ಯೋಜನೆಯ ಲಾಭ ಸಿಗಬಹುದು ಎಂದು ಹಣ ಕಟ್ಟಿದ‌ ಅದೆಷ್ಟೊ ಕುಟುಂಬದ ಸದಸ್ಯರು ಇದರಿಂದ ವಂಚಿತವಾಗಿದ್ದು, ಸಾಲ-ಸೂಲ ಮಾಡಿ ಆಸ್ಪತ್ರೆಗಳಿಗೆ ಹಣ ಕಟ್ಟಿ ಚಿಕಿತ್ಸೆ ‌ಪಡೆದುಕೊಳ್ಳಬೇಕಾಗಿದೆ.ಯೋಜನೆಗೆ ಒಳಗಾಗಿ ಚಿಕಿತ್ಸೆ ಪಡೆದು ಆಸ್ಪತ್ರೆಗಳಿಗೆ ಹಣ ಭರಣ ಮಾಡಿದವರ ಕುಟುಂಬಕ್ಕೆ ಸರಕಾರ ಹಣ ಭರಣ ಮಾಡಿ ಅವರ ನೆರವಿಗೆ ನಿಲ್ಲಬೇಕಿದೆ.

800 ಕ್ಕೂ ಹೆಚ್ಚು ಚಿಕಿತ್ಸೆಗಳು ಮತ್ತು ಕಾಯಿಲೆಗಳ ವೆಚ್ಚವನ್ನು ಈ ಯೋಜನೆಯಡಿ ಒಳಗೊಂಡಿದೆ.

ಮುಳುಗುವಿಕೆ, ನಾಯಿ ಕಡಿತ ಮತ್ತು ಹಾವು ಕಡಿತ,ಕೃಷಿ ಅನುಷ್ಠಾನದ ವೇಳೆ ಅಪಘಾತಗಳು ಸಂಭವಿಸಿವೆ, ನಾಳೀಯ ಶಸ್ತ್ರಚಿಕಿತ್ಸೆ, ಸರ್ಜಿಕಲ್ ಆಂಕೊಲಾಜಿ, ಗ್ಯಾಸ್ಟ್ರೋಎಂಟರಾಲಜಿ, ನೇತ್ರವಿಜ್ಞಾನ, ನರವೈಜ್ಞಾನಿಕ ಶಸ್ತ್ರಚಿಕಿತ್ಸೆ, ಸಾಮಾನ್ಯ ಶಸ್ತ್ರಚಿಕಿತ್ಸೆ, ನವಜಾತ ಶಿಶುಗಳ ತೀವ್ರ ನಿಗಾ ಇನ್ನೂ ಅನೇಕ ಕಾಯಿಲೆಗಳಿಗೆ ಇದರ ಲಾಭ ಸಿಗಬೇಕಾಗಿತ್ತು..