ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ವಾಯುಭಾರ ಕುಸಿತದ ಹಿನ್ನಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಯಲ್ಲಿ ಮಳೆಯ ಅಬ್ಬರ ಜೋರಾಗಿದ್ದು,ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಯೊಲ್ಲೋ ಅಲರ್ಟ್ ಘೊಷಣೆ ಮಾಡಲಾಗಿದೆ.
ಕಳೆದ ಎರಡು ಮೂರು ದಿನಗಳಿಂದ ದಟ್ಟವಾ ಮೋಡ ಕವಿದ ವಾತಾವರಣ ಉಂಟಾಗಿ ನಿನ್ನೆ ಮಾಧ್ಯಹ್ನದ ವೇಳೆಗೆ ಕಾರವಾರ ಸೇರಿದಂತೆ ಜಿಲ್ಲಾದ್ಯಂತ ಗುಡುಗು ಸಹಿತ ಅಬ್ಬರ ಮಳೆಯಾಗಿದೆ.ಅಕಾಲಿಕ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ಥವಾಗಿದೆ. ಮಳೆಯ ಅಬ್ಬರಕ್ಕೆ ಹಲವು ಕಡೆಯಲ್ಲಿ ಹಳ್ಳ,ಕೊಳ್ಳಗಳು ತುಂಬಿ ಹರಿದ್ದು, ಕುಮಟಾ ಭಾಗದ ಹೆರವಟ್ಟಾ ರಸ್ತೆಯಲ್ಲಿ ಮರ ಮುರಿದು ಬಿದ್ದು ಕೆಲ ಗಂಟೆಗಳ ಕಾಲ ವಾಹನ ಸಂಚಾರಲ್ಲಿ ಸಮಸ್ಯೆ ಎದುರಾಗಿತ್ತು
ಇನ್ನೂ ಭತ್ತದ ಬೆಳೆ ಪೈರು ಕೂಡ ಕಟಾವಿಗೆ ಬಂದ್ದು, ಒಂದೇರಡು ದಿನದಲ್ಲಿ ಕಟಾವು ಮಾಡಲು ರೈತರು ತಯಾರಿ ನಡೆಸಿದ್ದರು, ಈ ವೇಳೆಯಲ್ಲೇ ಸುರಿದ ಅಕಾಲಿಕ ಮಳೆಯಿಂದಾಗಿ ಕಟಾವಿಗೆ ಬಂದ ಭತ್ತದ ಬೆಳೆಗಳು ಬಹುತೇಕವಾಗಿ ಹಾನಿಗೊಳಗಾಗಿದೆ. ಇಂದು ಸಹ ಬೆಳಿಗ್ಗೆಯಿಂದಲ್ಲೆ ಮೋಡಕವಿದ ವಾತಾವರಣ ಮುಂದುವರೆದಿದ್ದು, ಯಾವುದೇ ಕ್ಷಣದಲ್ಲಿ ಮಳೆ ಸುರಿಯುವ ಸಾಧ್ಯತೆ ಇರುವಂತಿದೆ. ಅರಬ್ಬೀ ಸಮುದ್ರದಲ್ಲಿ ಸಹ ಅಲೆಯ ಅಬ್ಬರ ಜೋರಾಗಿದ್ದು, ಮೀನುಗಾರಿಕೆ ನಡೆಸಲು ಸಮಸ್ಯೆ ಎದುರಾಗಿದೆ.
ಗಮನಿಸಿ