ಸುದ್ದಿಬಿಂದು ಬ್ಯೂರೋ
ಹೊನ್ನಾವರ
: ಫ್ರೀ ಬಸ್‌ನಲ್ಲಿ ಧಾರ್ಮಿಕ ಕ್ಷೇತ್ರಕ್ಕೆ ಬಂದ ಮಹಿಳೆಯರಿ‌ಗೆ ವಾಯುವ್ಯ ಸಾರಿಗೆ ಶಾಕ್ ನೀಡಿದ್ದು, ಪ್ರವಾಸಕ್ಕೆ ಬಂದ ಮಹಿಳೆಯರು ವಾಪಸ್ ಆಗಲು ಬಸ್ ಇಲ್ಲದೆ ನಿಲ್ದಾಣದಲ್ಲೆ ಪರದಾಡಿರುವ ಘಟನೆ ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆದಿದೆ.

ವೀಕೆಂಡ್ ಆಗಿರುವ ಹಿನ್ನಲೆಯಲ್ಲಿ ರಾಜ್ಯದ ನಾನಾ ಕಡೆಯಿಂದ ಮಹಿಳೆಯರು ಉತ್ತರಕನ್ನಡ ಜಿಲ್ಲೆಯ ಮುರುಡೇಶ್ವರ, ಗೋಕರ್ಣ ಸೇರಿದಂತೆ ಹಲವು ಕಡೆ ಪ್ರವಾಸಕ್ಕೆಂದು ಬಂದಿದ್ದರು. 40ಕ್ಕೂ ಹೆಚ್ಚು ಮಹಿಳೆಯರಿಗೆ ಊರಿಗೆ ಮರಳಲು ಬಸ್‌ ಇಲ್ಲದೆ ಪರದಾಟ ನಡೆಸಿದ್ದಾರೆ.

ಹುಬ್ಬಳ್ಳಿ,ಹಾವೇರಿ,ತುಮಕೂರು,ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಕಡೆಯಿಂದ ಬಂದ ಮಹಿಳೆಯರಿಗೆ ಮಹಿಳೆಯರಿಗೆ ಬಸ್ ಇಲ್ಲದೆ ಪರದಾಟ ನಡೆಸಿದ್ದಾರೆ. ಚಿಕ್ಕ ಚಿಕ್ಕ ಮಕ್ಕಳೊಂದಿಗೆ ಬಸ್ ನಿಲ್ದಾಣದಲ್ಲೇ ಮಹಿಳೆಯರು ಕಾಯುವಂತಾಗಿದೆ. ಮಾಹಿತಿ ತಿಳಿಯದೇ ಪ್ರವಾಸಕ್ಕೆ ಬಂದು ತೊಂದರೆ ಅನುಭವಿಸುವಂತಾಗಿದೆ.

ಹೊನ್ನಾವರ ದಿಂದ ಶಿವಮೊಗ್ಗ ಜಿಲ್ಲೆಗೆ ಬಸ್ ಬಿಡುವಂತೆ ಅಧಿಕಾರಿಗಳಿಗೆ ಮಹಿಳೆಯರು ದುಂಬಾಲು ಬೀಳುತ್ತಿದ್ದಾರೆ. ರಾತ್ರಿ ಸಮಯದಲ್ಲಿ ಬಸ್ ಇಲ್ಲದೆ ಇರುವುದು ಮಹಿಳೆಯರಿಗೆ ವಾಪಸ್ ಊರಿಗೆ ಹೋಗಲಾಗದೆ. ಎಲ್ಲಿ ಉಳಿದುಕೊಳ್ಳಬೇಕು ಎನ್ನುವುದು ಚಿಂತೆಯಾಗಿದೆ.