ಸುದ್ದಿಬಿಂದು ಬ್ಯೂರೋ
ಅಂಕೋಲಾ :
ಇವರು ಸೈನ್ಯದಲ್ಲಿ ಸೇವೆ ಸಲ್ಲಿಸಬೇಕೆಂಬ ಮಹದಾಸೆ ಇಟ್ಟುಕೊಂಡಿದ್ದರು. ಆದರ ಸೈನ್ಯ ಸೇರುವ ಆಸೆ ಈಡೇರಲಿಲ್ಲ. ಹಾಗಂತ ಸೈನ್ಯಕ್ಕೆ ಇವರು ಸೇರಲು ಸಾಧ್ಯವಾಗದಿದ್ದರು, ಛಲದಂಕಮಲ್ಲನಂತೆ ತಮ್ಮ ಕನಸಿನ ಗೋಪುರಕ್ಕೆ ತನ್ನ ಶ್ವಾನಗಳನ್ನ (ನಾಯಿ) ಸೈನ್ಯಕ್ಕೆ ಸೇರಿಸುವ ಮೂಲಕ ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದಾರೆ. ಇದೇನು ಏನೆನೋ ಬರೆದಿದ್ದಾರೆ ಎಂದು.‌ ನಾಯಿ ಮರಿ ಸೈನ್ಯಕ್ಕೆ ಸೇರಿದ್ದು ಯಾಕೆ ಅನ್ನೋದ್ದರ ಬಗ್ಗೆ ಈ ವರದಿ ಕೊನೆ ತನಕ ಓದಿ..

ತುಂಬಾನೆ ಚುರುಕು ಮತಿ ನಾಯಿ ಮರಿಗಳು..ಇವರನ್ನು ಮುಟ್ಟಲು ಅಷ್ಟೇ ಬಲಿಷ್ಠರು ಬೇಕು..ಒಬ್ಬರನ್ನು ಮುಟ್ಟಿದ್ರೇ ಇಡೀ ತಂಡವೇ ಬಂದು ಒಮ್ಮೆಲೆ‌ ಸರ್ಜಿಕಲ್ ದಾಳಿ ತರ‌‌ಮಾಡುತ್ತೆ. ಇಂಥ ಬಲಿಷ್ಠ ಶ್ವಾನಗಳು ಈಗ ಭಾರತದ ಸೈನ್ಯಕ್ಕೆ ಸೇರಿಕೊಂಡಿದೆ. ಇದು ಬೆಲ್ಲಿಯಂ ಮೆಲಿನೋಟ್ಸ್ ಜಾತಿಗೆ ಸೇರಿದ ನಾಯಿ ಮರಿಗಳು ಈಗ ದೇಶ ಕಾಯಲು ಹೊರಟಿದೆ. ಸೈನ್ಯ ಸೇರುವ ಕನಸು ಕಾಣುತ್ತಿದ್ದ, ಅಂಕೋಲಾ ತಾಲೂಕಿನ ಬಾವಿಕೇರಿಯ ರಾಘವೇಂದ್ರ ಭಟ್ ಇವರು ತನ್ನ ಕನಸು ನನಸಾಗದಿದ್ದರೂ ಛಲ ಬಿಡದೇ ತನ್ನ ಮನೆಯ ನಾಯಿ ಮರಿಗಳನ್ನು ಸೈನ್ಯಕ್ಕೆ ಸೇರಿಸುವ ಮೂಲಕ ತಮ್ಮ ಕನಸು ನನಸು ಮಾಡಿಕೊಂಡಿದ್ದಾರೆ.

ರಾಘವೇಂದ್ರ ಭಟ್ ಅವರು ಸಾಕಿದ ವಿಶೇಷ ತಳಿಯ ನಾಯಿಯ ಕಾರ್ಯಕ್ಷಮತೆ ಗಮನಿಸಿದ ಭಾರತೀಯ ಸೇನೆಯ ಅಧಿಕಾರಿಗಳು ಅಂಕೋಲಾಕ್ಕೆ ಆಗಮಿಸಿ ಸೇನಾ ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳಲು 17ನಾಯಿ ಮರಿಗಳನ್ನು ಕೊಂಡೊಯ್ದಿದ್ದಾರೆ. ಸೈನ್ಯಕ್ಕೆ ಶ್ವಾನದ ಮರಿಗಳನ್ನು ನೀಡಿದ ರಾಘವೇಂದ್ರ ಭಟ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದಾರೆ.

ರಾಘವೇಂದ್ರ ಭಟ್ಟ ಅವರಿಗೆ ನಾಯಿಗಳನ್ನು ಸಾಕುವುದರಲ್ಲಿ ಅಪಾರ ಪ್ರೀತಿ.ಕಳೆದ ಅನೇಕ ವರ್ಷಗಳಿಂದ ವಿವಿಧ ತಳಿಯ ಹಲವಾರು ನಾಯಿಗಳನ್ನು ಇವರು ಸಾಕಿದ್ದಾರೆ. ಅದರಂತೆ ಇವರು ಸಾಕಿರುವ ಬೆಲ್ಲಿಯಂ ಮೆಲಿನೋಟ್ಸ್ ತಳಿಯ ನಾಯಿಗಳು ರಕ್ಷಣಾ ಇಲಾಖೆಯ ಕಾರ್ಯಗಳಿಗೆ ಸೂಕ್ತವಾದ ದೇಹ ಮತ್ತು ಬುದ್ಧಿಮತಿಯನ್ನು ಹೊಂದಿರುವುದರಿಂದ ಸೇನೆಯ ಅಧಿಕಾರಿಗಳು 17ನಾಯಿ ಮರಿಗಳನ್ನು ಅವರಿಂದ ಪಡೆದು ಆಸ್ಸಾಂನ ಸೇನಾ ತರಬೇತಿ ಕೇಂದ್ರಕ್ಕೆ ಸಾಗಿಸಿದ್ದು ಇನ್ನು ಮುಂದೆ ಭಾರತೀಯ ಸೇನೆಯ ವಿಶೇಷ ಪಾಲನೆಯಲ್ಲಿ ಈ ನಾಯಿ ಮರಿಗಳು ಬೆಳೆಯಲಿವೆ ಮತ್ತು ತರಬೇತಿ ಪಡೆದುಕೊಳ್ಳಲಿದೆ.

ನಾಯಿಗಳು ಬೆಂಗಳೂರಿನ ಪೊಲೀಸ್ ಇಲಾಖೆ, ಬೆಳಗಾವಿ ಮತ್ತು ಹುಬ್ಬಳ್ಳಿ ವಿಮಾನ ನಿಲ್ದಾಣಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಬೆಂಗಳೂರಿನ ಪೊಲೀಸ್ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದೆ. ಈವರ ನಾಯಿಯ ಕಾರ್ಯಕ್ಷಮತೆ ಗಮನಿಸಿದ ಭಾರತೀಯ ಸೇನೆಯ ಅಧಿಕಾರಿಗಳು ಸಾಮಾಜಿಕ ಜಾಲ ತಾಣಗಳ ಮೂಲಕ ರಾಘವೇಂದ್ರ ಭಟ್ಟರನ್ನು ಸಂಪರ್ಕಿಸಿ ನಾಯಿ ಮರಿಗಳನ್ನು ಪಡೆದಿದ್ದರು.

ಬಳಿಕ ಮಾಹಿತಿ ಪಡೆದು ಭಾವಿಕೇರಿಗೆ ಕೆಲವು ದಿನಗಳ ಹಿಂದೆ ಆಗಮಿಸಿದ ಸೇನೆಯ ಅಧಿಕಾರಿಗಳು ಒಬ್ಬ ಜವಾನನ್ನು ಸ್ಥಳದಲ್ಲಿ ನೇಮಿಸಿ ಮರಿಗಳ ಚಲನವಲನ,ಆಹಾರ ಪದ್ಧತಿ, ಬುದ್ಧಿಮತಿ, ಆರೋಗ್ಯ ಮೊದಲಾದ ಮಾಹಿತಿಗಳನ್ನು ಪ್ರತಿದಿನ ಪಡೆದುಕೊಂಡಿದ್ರು. ಬಳಿಕ ಅಧಿಕಾರಿಗಳ ತಂಡ ವಿಶೇಷ ಹವಾ ನಿಯಂತ್ರಿತ ಬಸ್ಸಿನಲ್ಲಿ ಆಸ್ಸಾಂಗೆ ಸಾಗಿಸಿದೆ. ಇನ್ನೂ ನಾಯಿ ಮರಿಗಳ ಕುರಿತು ಅಧ್ಯಯನ ನಡೆಸಲು ಸೇನೆಯ ಜವಾನರೋರ್ವರು 45 ದಿನಗಳ ಕಾಲ ಭಾವಿಕೇರಿಯಲ್ಲಿ ಉಳಿದುಕೊಂಡಿದ್ದರು.

ಸೈನ್ಯಕ್ಕೆ ಮಾಹಿತಿ ನೀಡುತ್ತಿದ್ದರು. ಇದೀಗ ಈ ನಾಯಿ ಮರಿಗಳು ಇಂಡಿಯನ್ ಮಿಲಿಟರಿಯಲ್ಲಿ ತಮ್ಮ ಛಾಪು ಮೂಡಿಸಲಿದೆ. ಸೈನ್ಯ ಸೇರುವ ಕನಸು ಹೊತ್ತು ಯಶಸ್ಸು ಸಿಗಲಿಲ್ಲ ಅಂಥ ಕೈ ಕಟ್ಟಿ ಕೂರದ ರಾಘವೇಂದ್ರ ಭಟ್ ತಮ್ಮ ಸಾಕು ನಾಯಿ ಮರಿಗಳನ್ನು ಸೈನ್ಯಕ್ಕೆ ಸೇರಿಸುವ ಮೂಲಕ ದೇಶ ಸೇವೆ ಮಾಡಿದ್ದಾರೆ. ಇವರ ಸಾಕು ನಾಯಿಯ ಮರಿಗಳು ದೇಶವನ್ನು ಕಾಯುವ ಮೂಲಕ ರಾಘವೇಂದ್ರ ಭಟ್ ಅವರಿಗೂ ದೇಶಕ್ಕೂ ಕೀರ್ತಿ ತರಲಿ ಅನ್ನೋದೆ ನಮ್ಮ ಹಾರೈಕೆ.