ಬೆಳಗಾವಿ: ಕರೆಂಟ್ ಶಾಕ್ (Electric shock) ಹೊಡೆದು ಮೂವರು ಸ್ಥಳದಲ್ಲಿ ಸಾವು ಕಂಡ ದಾರುಣ ಘಟನೆ ಬೆಳಗಾವಿಯ ಶಾಹುನಗರದಲ್ಲಿ ಬೆಳ್ಳಂಬೆಳಗ್ಗೆ ನಡೆದಿದೆ. ಅಜ್ಜ, ಅಜ್ಜಿ, ಮೊಮ್ಮಗಳು ಸ್ಥಳದಲ್ಲಿ ಸಾವು ಕಂಡಿದ್ದಾರೆ.

ಈರಪ್ಪ ರಾಠೋಡ, ಶಾಂತವ್ವ ರಾಠೋಡ, 3 ನೇ ತರಗತಿ ಓದುತ್ತಿದ್ದ ಅನ್ನಪೂರ್ಣಾ ರಾಠೋಡ ಮೃತಪಟ್ಟ ದುರ್ದೈವಿಗಳು.
ನಿರ್ಮಾಣ ಹಂತದ ಮನೆಗೆ ವಾಚಮನ್ ಕೆಲಸ ಮಾಡುತ್ತಿದ್ದ ರಾಠೋಡ ಕುಟುಂಬ,ಏಕಕಾಲದಲ್ಲಿ ಮೂವರಿಗೆ ಕರೆಂಟ್ ಶಾಕ್ ಹೊಡೆದು ದುರ್ಘಟನೆ ನಡೆದಿದೆ.

ಮೃತರು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಅರಬೆಂಚಿ ತಾಂಡಾ ನಿವಾಸಿಗಳು ಅಂತಾ ತಿಳಿದು ಬಂದಿದೆ. ಇನ್ನು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ ಸ್ಥಳಕ್ಕೆ ಎಪಿಎಂಸಿ ಠಾಣೆ ಸಿಪಿಐ ವಿಶ್ವನಾಥ ಕಬ್ಬೂರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.