ಸುದ್ದಿಬಿಂದು ಬ್ಯೂರೋ ವರದಿ
ಹಳಿಯಾಳ : ಇಲ್ಲಿನ ಮೆನ್ ಬಜಾರ್ ರಸ್ತೆಯ ಬದಿಯಲ್ಲಿರುವ ಅಮಿತ್ ಪ್ರಕಾಶ್ ಹನುಮಶೇಟ್ ಅವರ ಕಟ್ಟಡದಲ್ಲಿದ್ದ ತಾಮೀರ ಕೋ ಆಪರೇಟಿವ ಕ್ರೆಡಿಟ್ ಸೊಸೈಟಿ ಕಳ್ಳತನ ಪ್ರಕರಣದಲ್ಲಿ ಆರೋಪಿ ಓರ್ವನಿಗೆ ಜೆಎಂಎಫ್‌ಸಿ ನ್ಯಾಯಾಲ ಮೂರು ವರ್ಷ ಶಿಕ್ಷೆ ಹಾಗೂ ಎರಡು ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
ಮುಜಾಫರ ಶೇಖ ಎಂಬಾತನೆ ಶಿಕ್ಷೆಗೆ ಒಳಗಾಗಿರು ಆರೋಪಿಯಾಗಿದ್ದಾನೆ. ಹಳಿಯಾಳ ಪೊಲೀಸ್ ಠಾಣಾ ಗುನ್ನಾ ನಂಬರ್ 234/2022 454, 380, 511, IPC ಪ್ರಕರಣ ದಾಖಲಾಗಿತ್ತು. ಹಳಿಯಾಳ ಮೆನ್ ಬಜಾರ್ ರಸ್ತೆಯ ಬದಿಯಲ್ಲಿರುವ ಅಮಿತ್ ಪ್ರಕಾಶ್ ಹನುಮಶೇಟ್ ನೇ ರವರಿಗೆ ಸಂಬಂಧಿಸಿದ ಪುರಸಭೆ ಆಸ್ತಿ ನಂ,ಎಬಿಸಿ 593ರಲ್ಲಿ ಇದ್ದ ತಾಮೀರ ಕೋ ಆಪರೇಟಿವ ಕ್ರೆಡಿಟ್ ಸೊಸೈಟಿಯ ಎದುರಿನ ಬಾಗಿಲು ಮುರಿದು ಒಳನುಗ್ಗಿದ ಆರೋಪಿ ಮುಜಾಪರ್ ಶೇಖ್ ಕಳ್ಳತನ ಮಾಡಿರುವ ಬಗ್ಗೆ ಭಾರತ ದಂಡ ಸಂಹಿತೆಯ 1860 ಕಲಂ. 454 ಕలం, 380, 511 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಮಾಡಿದ್ದಾನೆಂದು ನಿಸ್ಸಂದೇಹಾತ್ಮಕವಾಗಿ ಸಾಬೀತು ಪಡಿಸುವಲ್ಲಿ ಅಭಿಯೋಜನೆಯು ಕರ್ತವ್ಯವನ್ನು ನಿರ್ವಹಿಸುತ್ತಿರುತ್ತದೆ.
ಮೇಲೆ ಹೇಳಿದ ದಿನಾಂಕ, ಸಮಯ, ಸಂದರ್ಭ ಮತ್ತು ಸ್ಥಳದಲ್ಲಿ ಅಪಾಧಿತನಾದ ಮುಜಾಫರ ತಂದೆ ಮಹ್ಮದಸಾಬ ಶೇಖ ಇತನು ತಾಮೀರ ಕೋ-ಆಪರೇಟೀವ್ ಕ್ರೇಡಿಟ್ ಸೋಸೈಟಿಯ ಒಳಗೆ ಅಕ್ರಮ ಪ್ರವೇಶ ಮಾಡಿ ಕಳ್ಳತನ ಮಾಡಲು ಪ್ರಯತ್ನಿಸಿರುವ ಮೂಲಕ ಭಾರತ ದಂಡ ಸಂಹಿತೆಯ 1860 ಕಲಂ. 380 ಸಹವಾಚಕ ಕಲಂ 511 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವನ್ನು ಮಾಡಿರುವುದನ್ನು ನಿಸ್ಸಂದೇಹಾತ್ಮಕವಾಗಿ ಸಾಬೀತು ಪಡಿಸುವಲ್ಲಿ ಅಭಿಯೋಜನೆಯು ಕರ್ತವ್ಯವನ್ನು ನಿರ್ವಹಿಸುತ್ತಿರುತ್ತದೆ.
ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕರಾದ ರಮೇಶ ಮಲ್ಲೇಶಪ್ಪ ಬಂಕಾಪುರರವರು ಮ ನ್ಯಾಯಾಲಯವು ಪ್ರಕರಣದ ವಿದ್ಯಾಮಾನಗಳನ್ನು ಮತ್ತು ಲಭ್ಯವಿರುವಂತ ಸಾಕ್ಷೀದಾರರ ಸಾಕ್ಷ್ಯವನ್ನು ಗಂಭೀರವಾಗಿ ತೆಗೆದುಕೊಂಡು ಆರೋಪಿತನಿಗೆ ಶಿಕ್ಷೆ ನೀಡಬೇಕೆಂದು ವಾದ ಮಂಡಿಸಿದರು
ವಿನೋದ ಎಸ್.ಕೆ. ಪೊಲೀಸ್ ಉಪನಿರೀಕ್ಷಕರು, ಹಳಿಯಾಳ ಪೊಲೀಸ್ ಠಾಣೆ ಹಾಗೂ ಕುಮಾರಿ ಉಮಾ ಬಸರಕೋಡ ಪೊಲೀಸ್ ಉಪ ನೀರಿಕ್ಷಕರು, ಹಳಿಯಾಳ ಪೊಲೀಸ್ ಠಾಣೆ ಇವರು ತನಿಖೆಯನ್ನು ಕೈಗೊಂಡು ದೋಷಾರೋಪಣ ಪತ್ರವನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.
ನಬಿಸಾಬ್ ಖೈರವಡಗಿ ಹವಾಲ್ದಾರ್ ಹಳಿಯಾಳ ಪೊಲೀಸ್ ಠಾಣೆರವರು ಆರೋಪಿತನಿಗೆ ದಸ್ತಗಿರಿ ಮಾಡಿ ನ್ಯಾಯಾಲಯ ಕ್ಕೆ ಹಾಜರ ಪಡಿಸಿದ್ದರು, ಇನ್ನೂ ಹಲವಾರು ಬಾರಿ ವಾರೆಂಟ್ ಆಗಿದ್ದರಿಂದ, ಗುಪ್ತ ಮಾಹಿತಿ ಪಡೆದುಕೊಂಡು ನ್ಯಾಯಾಲಯದ ಆದೇಶದಂತೆ ಬಂಧಿಸಿ ಕೋರ್ಟ್ ಗೆ ಹಾಜರ ಪಡಿಸಿ
ಆರೋಪಿತನಿಗೆ ಶಿಕ್ಷೆಗೆ ಗುರಿಪಡಿಸುವಲ್ಲಿ ಸಹಕರಿಸಿರುತ್ತಾರೆ
ಹಳಿಯಾ ಪೊಲೀಸ್ ಠಾಣೆಯ ಪೊಲೀಸ್ ಕಾನ್ಸಟೇಬಲ್ ರವರಾದ ಕಾಶಿನಾಥ ಬಿಳ್ಳೂರ ಹಾಗೂ ಪ್ರೇಮಾ ರವರು ಈ ಪ್ರಕರಣದಲ್ಲಿ ಸಾಕ್ಷಿ ದಾರರನ್ನು ಹಾಜರುಪಡಿಸಿದ್ದರು. ಹಳಿಯಾಳ ನಗರದ ದಿವಾಣಿ ಮತ್ತು ಪ್ರಥಮ ದರ್ಜೆಯ ನ್ಯಾಯಿಕ ದಂಢಾಧಿಕಾರಿಗಳರವರ ನ್ಯಾಯಾಲಯ ಹಳಿಯಾಳ ಪೀಠಾಸೀನ ನ್ಯಾಯಾಧೀಶರಾದ ದೇಶಭೂಷಣ ಕೌಜಲಗಿ ರವರು ಪ್ರಕರಣದಲ್ಲಿರುವ ಸಾಕ್ಷಾಧಾರಗಳಿಂದ ಆರೋಪಿತನ ವಿರುದ್ಧ ಆರೋಪವೂ ನಿಸ್ಸಂದೇಹಾತ್ಮಕವಾಗಿ ಸಾಬೀತಾಗಿ ಐಪಿಸಿ 454, 380, 511 ರ ಅಡಿಯಲ್ಲಿ ಅಪರಾಧ ಕ್ಕೆ ಆರೋಪಿತನಿಗೆ 3ವರ್ಷ ಜೈಲ್ ಶಿಕ್ಷೆ, ಹಾಗೂ 2000ರೂ ಗಳ ಸರಕಾರಕ್ಕೆ ಭರಣ ಮಾಡಬೇಕೆಂದು ತೀರ್ಪು ಪ್ರಕಟಿಸಿದೆ.
ಪೊಲೀಸ್ ಹಿಂದಿನ ಕೋರ್ಟ್ ಪೊಲೀಸ್ ಸಿಬ್ಬಂದಿಯಾದ ಶಂಕರಲಿಂಗ ಕ್ಷತ್ರಿಯ ರವರು ಪ್ರಕರಣದಲ್ಲಿನ ಮುದ್ದೆ ಮಾಲು ನ್ಯಾಯಾಲಯಕ್ಕೆ ಸಲ್ಲಿಸಿ,ಸಾಕ್ಷ್ಯ ಸಾಕ್ಷಿದಾರರನ್ನ ಕರಿಸಿ app ರವರ ಮೂಲಕ ಬ್ರಿಪ್ ಮಾಡಿಸಿದರು ಹಾಗೂ ರಾಘವೇಂದ್ರ ಕೇರವಾಡ ಮತ್ತು ಸಹಾಯಕ ಅಭಿಯೋಜಕರ ಕಛೇರಿಯ ಸಿಬ್ಬಂದಿಗಳಾದ ಗಜಾನನ ಲೋಹಾರ್, ಹಾಗೂ ಸಲೀಮ್ ಶೇಖ ರವರು ಸಹಾಯಕ ಅಭಿಯೋಜಕರಿಗೆ ಸಹಕಾರ ನೀಡಿರುತ್ತಾರೆ.
ಒಟ್ಟಿನಲ್ಲಿ ಈ ಪ್ರಕರಣಕ್ಕೆ ಸಹಕಾರ ಮಾಡಿದ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಹಾಗೂ ಅಭಿಯೋಜನೆ ಕಛೇರಿಯ ಶ್ರೀ APP ಸರ್ ಮತ್ತೆ ಸಿಬ್ಬಂದಿ ಗಳಿಗೆ ಶ್ರೀ ಮಾನ್ಯ ಜಿಲ್ಲಾ ವರಿಷ್ಟಾಧಿಕಾರಿ ಕಾರವಾರ ರವರು ಅಭಿನಂದನೆಗಳು ಸಲ್ಲಿರುತ್ತಾರೆ..
ಗಮನಿಸಿ