ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯಡಿ ಬರುವ ಕಾರವಾರ ನಗರದ ಬಾಡ ದಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಅಖಿಲ ಭಾರತ ವೃತ್ತಿ ಪರೀಕ್ಷೆ (ಐಟಿಐ)ಅಗಷ್ಟ 2024 ರಲ್ಲಿ ಉತ್ತಿರ್ಣರಾದ ತರಬೇತ್ಯಾರ್ಥಿಗಳಿಗೆ “ಘಟಿಕೋತ್ಸವ ಸಮಾರಂಭ”ಹಮ್ಮಿಕೊಳ್ಳಲಾಗಿತ್ತು..
ಕಾರವಾರದ ಬಾಡದಲ್ಲಿ ಇರುವ ಸರಕಾರಿ ತರಬೇತಿ ಸಂಸ್ಥೆಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ರಾಷ್ಟೀಯ ವೃತ್ತಿ ಪ್ರಮಾಣ ಪತ್ರ (NTC) ಗಳನ್ನು ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಅತಿಥಿಗಳಾದ ಉದ್ಯೋಗಧಿಕಾರಿ ವಿನೋದ್ ಎಮ್. ನಾಯ್ಕ , ಜನಪರ ಸೇವಾ ಸಮಿತಿ ಕಳೆಶಿಟ್ಟ ಕಾರವಾರ ಅಧ್ಯಕ್ಷ ದತ್ತಾತ್ರೇಯ ಟಿ. ನಾಯ್ಕ ಹಾಗೂ ಸಂಸ್ಥೆಯ ಪ್ರಾಚಾರ್ಯರಾದ ಪ್ರಕಾಶ ಕುಡಾಳಕರ ಇವರು ಜಂಟಿಯಾಗಿ ಒಟ್ಟು 79 ತರಬೇತ್ಯಾರ್ಥಿಗಳಿಗೆ NTC ಗಳನ್ನು ವಿತರಿಸಿದರು. ಹಾಗೂ Toyoto Kirloskar ಕಂಪನಿಯವರು ನೆರವೇರಿಸಿದ 1 ವಾರದ ತರಬೇತಿ ಕಾರ್ಯಕ್ರಮವನ್ನು ಹಾಗೂ ನೆವಲ್ ಬೆಸ್ ಅರ್ಗಾ ದಲ್ಲಿ ನಡೆದ 1 ತಿಂಗಳ ಇಂಟರಶಿಪ್ ತರಬೇತಿ ಕಾರ್ಯಕ್ರಮವನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ಕೂಡ ವಿತರಿಸಲಾಯಿತು.
ಈಸಂದರ್ಭದಲ್ಲಿ ಮಾತಾಡಿದ ಉದ್ಯೋಗಾಧಿಕಾರಿ ವಿನೋದ ನಾಯ್ಕ್ ವಿಧ್ಯಾರ್ಥಿಗಳು ಈಗಿರುವ ಅಮುಲ್ಯವಾದ ಸಮಯವನ್ನು ವ್ಯರ್ಥ ಮಾಡದೆ ಶಿಶುಕ್ಷು ತರಬೇತಿಕ್ಕಾಗಿ ಹಾಗೂ ಉದ್ಯೋಗಕ್ಕಾಗಿ ಸತತ ಪ್ರಯತ್ನ ಮಾಡಿ ಭವಿಷ್ಯವನ್ನು ರೂಪಿಸಿಕೊಳ್ಳಿ” ಎಂದು ಕಿವಿಮಾತು ಹೇಳಿದರು..
ಕಾರ್ಯಕ್ರಮದ ನಿರೂಪಣೆಯನ್ನು ಸಂಸ್ಥೆಯ ಸಿಬ್ಬಂದಿಯವರಾದ ಪ್ರವೀಣ ಆರ್. ನಿರ್ವಹಿಸಿದರು, ಅಶೋಕ ಬೋಬ್ಲಿ ಸ್ವಾಗತಿಸಿದರು ಹಾಗೂ ಶ್ರೀಮತಿ ಜೋಲಿಟಾ ಡಿಸಿಲ್ವಾ ರವರು ವಂದಿಸಿದರು…
ಗಮನಿಸಿ