ಸುದ್ದಿಬಿಂದು ಬ್ಯೂರೋ
ಭಟ್ಕಳ: ಕರ್ತವ್ಯಕ್ಕೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ ಹೋಗಿದ್ದ ಸರಕಾರಿ ಆಸ್ಪತ್ರೆಯ ಚರ್ಮರೋಗ ವೈದ್ಯ ನಾಪತ್ತೆ (missing)ಆಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ (Uttarkannada) ಭಟ್ಕಳ (Bhatkala)ನಗರದಲ್ಲಿ ನಡೆದಿದೆ.

ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ (Govt hospital)ಚರ್ಮರೋಗ ವೈದ್ಯರಾಗಿದ್ದ ಎಚ್.ಟಿ ಉಮೇಶ್ ಎಂಬುವವರೆ ನಾಪತ್ತೆ ಯಾಗಿರುವ ವೈದ್ಯನಾಗಿದ್ದಾನೆ‌ ಇವರು ಮೂಲತಃ ನಿಟ್ಟೂರು, ಹರಪನಹಳ್ಳಿ ನಿವಾಸಿಯಾಗಿದ್ದು, ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು‌. ಸದ್ಯ ಭಟ್ಕಳದ ಡಿ.ಪಿ ಕಾಲೊನಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ಅ.10ರಂದು ಬೆಳಗ್ಗೆ ಮನೆಯಿಂದ ಕರ್ತವ್ಯಕ್ಕೆ ಹೋಗುತ್ತೇನೆ ಎಂದು ಮನೆಯಲ್ಲಿ ಹೇಳಿ ಹೋಗಿದ್ದರು‌. ಕರ್ತವ್ಯ ಮುಗಿದ ಬಳಿಕ ಮನೆಗೆ ಬಾರದೆ ಸಂಬಂಧಿಕರ ಮನೆಗೂ ಹೋಗದೆ ನಾಪತ್ತೆಯಾಗಿದ್ದಾರೆ‌.

ಇನ್ನೂ ಇವರ ಮೊಬೈಲ್ ಸಹ ಸ್ವಿಚ್ ಆಫ್ ಆಗಿದೆ.ನಾಪತ್ತೆಯಾಗಿರುವ ಡಾ. ಉಮೇಶ್‌ಗಾಗಿ ಹುಡುಕಾಟ ನಡೆಸಿರುವ ಕುಟುಂಬಸ್ಥರು ಭಟ್ಕಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.