ಸುದ್ದಿಬಿಂದು ಬ್ಯೂರೋ
ಕಾರವಾರ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ದ ಅವಹೇಳನಕಾರಿಯಾಗಿ ಭಾಷಣ ಮಾಡಿದ ಯುವ ಬ್ರೀಗೇಡ್‌ನ ಸಂಸ್ಥಾಪಕ ಅಧ್ಯಕ್ಷ ಚಕ್ರವರ್ತಿ ಸೂಲೆಬೆಲೆ (Sulebele)ಅವರ ಮೇಲೆ ಕಾರವಾರದ (karwar)ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಕ್ರವರ್ತಿ ಸೂಲೆಬೆಲೆ ಅವರು ಇತ್ತೀಚಿಗೆ ಜನಗಣ ಮನ ಅಭಿಯಾನಕ್ಕೆ ಆಗಮಿಸಿದ್ದರು.ವೇಳೆ ಕಾರವಾರ ತಾಲೂಕಿನ ಕಡವಾಡದ ಬೋವಿವಾಡದಲ್ಲಿರುವ ಶ್ರೀಆದಿ ದೇವಸ್ಥಾನಕ್ಕೆ ಭೇಟಿ ನೀಡಿದ ವೇಳೆ‌ ಮಾಧ್ಯಮದವರಿಗೆ ಹೇಳಿಕೆ ನೀಡುವ ವೇಳೆಯಲ್ಲಿ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದಿರುತ್ತಾರೋ ಆ ಸಂದರ್ಭದಲ್ಲಿ ಹಿಂದುಗಳು ಬದುಕಲು ಕಷ್ಟವಾಗುತ್ತದೆ.

ಹೀಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ(CM Siddaramaiah) ಅವರ ವಿರುದ್ದ ಅನೇಕ ರೀತಿಯಲ್ಲಿ ಅವಹೇಳನಕಾರಿಯಾಗಿ ಮಾತನಾಡಿ, ಹಿಂದು-ಮುಸ್ಲಿಂ ಧರ್ಮಗಳ ನಡುವೆ ವೈಮನ್ಸು ಉಂಟು ಮಾಡುವ ಹೇಳಿಕೆ ನೀಡಿದ್ದು. ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದೆ.
.