ಸುದ್ದಿಬಿಂದು ಬ್ಯೂರೋ
ಭಟ್ಕಳ:
ಪಟ್ಟಣದ ರಂಜಾನ್ ಮಾರ್ಕೆಟ್ ನಲ್ಲಿ ಯುವತಿ ಓರ್ವಳಿಗೆ ಚುಡಾಯಿಸಿದ ವಿಚಾರಕ್ಕೆ  ಸಂಬಂಧಿಸಿ ಆರೋಪಿಗಳನ್ನ ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಹೋಗುವ ವೇಳೆ ಪೊಲೀಸ್ ಜಿಪ್ ಅಡ್ಡಗಟ್ಟಿ  ಜಿಪ್ ಗ್ಲಾಸ್ ಒಡೆದಿರುವ ಘಟನೆ ನಡೆದಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಜೀಪ್ ಮೇಲೆ ಹಲ್ಲೆ ನಡೆದಿರುವ ವಿಡಿಯೋ ವೈರಲ್ ಆಗಿದೆ.

ಹದ್ಲೂರ್ ನಿವಾಸಿ ಚಂದ್ರು ಸೋಮಯ್ಯ ಗೊಂಡ, ಸುಲ್ತಾನ್ ಸ್ಟ್ರೀಟ್ ಮೊಹ್ಮದ ಮೀರಾ ಮೊಹ್ಮದ್ ಇಮ್ರಾನ್ ಶೇಖ್, ಸರ್ಪನಕಟ್ಟೆ ರವೀಂದ್ರ ಶಂಕರ ನಾಯ್ಕ ಹಾಗೂ ಗೊರಟೆ ವೆಂಕಟೇಶ ನಾಯ್ಕ ಎಂದು ತಿಳಿದು ಬಂದಿದೆ.
ಭಟ್ಕಳ ರಂಜಾನ್ ಮಾರ್ಕೆಟ್ ನಲ್ಲಿ ಮಹಿಳೆ ಓರ್ವಳಿಗೆ ಚುಡಾಯಿಸಿದ ದ ವಿಷಯವಾಗಿ ಭಟ್ಕಳದ ಮುಖ್ಯ ರಸ್ತೆಯ ಮುಸ್ಬಾ ಕ್ರಾಸ್ ಸಮೀಪ ಅಪೋಲೋ ಪಾರ್ಮಸಿ ಎದುರಿಗೆ ಗಲಾಟೆ ಮಾಡಿಕೊಳ್ಳುತ್ತಿದ್ದ ವೇಳೆ ರಾತ್ರಿ  ಕರ್ತವ್ಯದಲ್ಲಿದ್ದ ಪೊಲೀಸ ಸಿಬ್ಬಂದಿ ಕೇಳಲು ಹೋದಾಗ ಅವಾಚ್ಯ ಶಬ್ದಗಳಿಂದ ಬೈಯ್ದಾಡುತ್ತಾ ಏರು ಧ್ವನಿಯಲ್ಲಿ ರಂಪಾಟ ಮಾಡಲು ಪ್ರಾರಂಭಿಸಿದಾಗ ಚಂದ್ರ ಸೋಮಯ್ಯ ಗೊಂಡ ಮತ್ತು ಮೊಹಮ್ಮದ್ ಮೀರಾ ಇವರಿಗೆ ವಶಕ್ಕೆ ಪಡೆದು ಸ್ಥಳಕ್ಕೆ ಬಂದ ಪೊಲೀಸ ಜೀಪಿನಲ್ಲಿ ತುಂಬಿಕೊಂಡು ಠಾಣೆಗೆ ಕರೆದುಕೊಂಡು ಹೋಗುವ ವೇಳೆ ಅಲ್ಲಿದ್ದ‌ ಒಂದಿಷ್ಟು ಯುಬಕರಿ ಪೊಲೀಸ್  ಜೀಪ್‌ನ್ನು ಅಡ್ಡಗಟ್ಟಿ  ಜೀಪ್ ಮುಂದಕ್ಕೆ ಹೋಗದಂತೆ ಅಡೆತಡೆ ಉಂಟು ಮಾಡಿ ಪೊಲೀಸ್ ಜೀಪಿನ ಗ್ಲಾಸನ್ನು ಕಲ್ಲಿನಿಂದ ಹೊಡೆದು ಹಾನಿ ಮಾಡಲಾಗಿದೆ.

ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಆತಂಕವನ್ನುಂಟು ಮಾಡಿದ್ದಲ್ಲದೇ ಆರೋಪಿ ಮೊಹಮ್ಮದ್ ಮೀರಾ ಈತನು ಪೊಲೀಸ ಸಿಬ್ಬಂದಿ ಗೌತಮ ಅವರ ಬಲ ಕೈಬೆರಳುಗಳನ್ನು ತಿರುವಿ ನೋವುಪಡಿಸಿದ್ದರಿಂದ ಆರೋಪಿತರ ಮೇಲೆ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪೊಲೀಸ ಜಿಪ್ ಮೇಲೆ ಹಲ್ಲೆ ನಡೆಸಿದ ಸಂಬಂಧಿಸಿದಂತೆ ಮತ್ತೆ ಮೂವರನ್ನು ಇದೀಗ ವಶಕ್ಕೆ ಪಡೆದುಕೊಂಡಿದ್ದು ಇನ್ನು ಕೆಲವರ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬಿಸಿದ್ದಾರೆ.


ಘಟನೆ ಹಿನ್ನೆಲೆಯಲ್ಲಿ ಭಟ್ಕಳಕ್ಕೆ ಎಡಿಷನಲ್ ಎಸ್.ಪಿ. ಸಿಟಿ ಜಯಕುಮಾರ್ ಭೇಟಿ ನೀಡಿದ್ದಾರೆ. ಘಟನೆ  ಬಗ್ಗೆ ಚುನಾವಣಾಧಿಕಾರಿ ಹಾಗೂ ಸಹಾಯಕ ಆಯುಕ್ತೆ ಮಮತಾ ದೇವಿ ಜಿ.ಸ್ ಪ್ರತಿಕ್ರಿಯಿಸಿದ್ದು ಚುನಾವಣೆ ಹಿನ್ನೆಲೆಯಲ್ಲಿ ಈ ಬಾರಿ ರಂಜಾನ್ ಮಾರ್ಕೇಟ್ ನಡೆಸಲು ಯಾವುದೇ ಅನುಮತಿ ನೀಡಿಲ್ಲ.ಹಾಗೂ ನಿನ್ನೆ ನಡೆದ ಘಟನೆ ಬಗ್ಗೆ ಮೇಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿತ್ತಿದ್ದು ಇಂದು ರಾತ್ರಿ ತನಕ ರಂಜಾನ್ ಮಾರ್ಕೆಟ್ ನಡೆಸ ಬೇಕೋ ಬೇಡ ಎಂದು ಪರಿಸ್ಥಿತಿಗೆ ಅನುಗುಣವಾಗಿ ತೀರ್ಮಾನಿಸುತ್ತೇವೆ ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ವಹಿಸುತ್ತೇವೆ ಎಂದಿದ್ದಾರೆ..